AAP Dasarahalli : ಎಎಪಿ ಅಧಿಕಾರಕ್ಕೆ ಬಂದರೆ ದೆಹಲಿ ಮಾದರಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ; ಕೀರ್ತನ್ ಕುಮಾರ್

ಬೆಂಗಳೂರು : ರಾಜ್ಯದಲ್ಲಿ 40% ಕಮಿಷನ್ ಬಿಜೆಪಿ ಸರ್ಕಾರದಿಂದ ಬಡವರ ಬದುಕು ಹಸನಾಗುವುದಿಲ್ಲ. ದೆಹಲಿ ಮಾದರಿಯಲ್ಲಿ ರಾಜ್ಯವನ ಅಭಿವೃದ್ಧಿಪಡಿಸಲು ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಎಎಪಿ ಪಕ್ಷದ ಹಿರಿಯ ನಾಯಕ ಸೌಂದರ್ಯ ಮಂಜಪ್ಪ ಹೇಳಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಕೀರ್ತಿನ್ ಕುಮಾರ್ ನೇತೃತ್ವದಲ್ಲಿ ನಡೆದ ಜನಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಿಂದ ಲಕ್ಷ್ಮೀಪುರ ರಸ್ತೆ, ಶೆಟ್ಟಿಹಳ್ಳಿ, ಶ್ರೀ ಶಿವಕುಮಾರಸ್ವಾಮಿ ರಸ್ತೆ, ಅಬ್ಬಿಗೆರೆ, ಕೆರೆಗುಡ್ಡದ ಹಳ್ಳಿ ಮೂಲಕ ಚಿಕ್ಕಬಾಣವಾರದವೆರಗೂ ಜನಜಾಗೃತಿ ಜಾಥಾ ಸಾಗಿ, ರಸ್ತೆಯುದ್ಧಕ್ಕೂ ಪಕ್ಷದ ಸಾಧನೆಗಳನ್ನ ಒಳಗೊಂಡ ಕರಪತ್ರಗಳನ್ನ ಹಂಚುತ್ತಾ ಪಕ್ಷದ ಕಾರ್ಯಚಟುವಟಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಕೀರ್ತನ್ ಕುಮಾರ್, ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ರಾಜ್ಯ ಸರ್ಕಾರ ದಿನ ನಿತ್ಯದ ಪದಾರ್ಥಗಳಾದ ಹಾಲು, ಮೊಸರು, ಅಡುಗೆ ಎಣ್ಣೆ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಏರಿಸುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುವ ಮನಸ್ಸನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮಾಡುತ್ತಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಬಡವರ ಕಷ್ಟಕ್ಕೆ ಸ್ಪಂದಿಸಲು ಸಾಧ್ಯವೇ ಎಂದು ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದ ಅವರು, ದಾಸರಹಳ್ಳಿ ಕ್ಷೇತ್ರದಲ್ಲಿ ಈ ಭಾರಿ ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರ ಶಾಲೆಗಳ ಉನ್ನತೀಕರಣ ಮಾಡುವ ಮೂಲಕ ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಶಿಕ್ಷಣವನ್ನು ಬಡ ಮಕ್ಕಳಿಗೆ ನೀಡುತ್ತೇವೆ. ಎಲ್ಲಾ ವರ್ಗದವರಿಗೂ ಉಚಿತ ಆರೋಗ್ಯ ಸೇವೆ, ಮಹಿಳೆಯರಿಗೆ ಉಚಿತ ಬಸ್ ಪಾಸ್, ಮನೆ ಮನೆಗೆ ಉಚಿತ ನೀರು ಜೊತೆಗೆ ವಿದ್ಯುತ್ ಬಿಲ್ ಕೂಡ ಉಚಿತ ನೀಡುವ ಮೂಲಕ ದೆಹಲಿ ಮಾದರಿಯ ಅಭಿವೃದ್ಧಿಯನ್ನ ಮಾಡುತ್ತೇವೆ ಎಂದು ಕೀರ್ತನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಜಾಥಾದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ SC, ST ಘಟಕದ ಅಧ್ಯಕ್ಷ ಜನ್ಮಭೂಮಿ ನಾಗರಾಜ್, ಯುವ ಮುಖಂಡ ಹರಮಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

More News