ನವದೆಹಲಿ ಡಿ.5 : ಅತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಆಘಾತ ಅನುಭವಿಸಿದ ಬೆನ್ನಲ್ಲೇ ಭಾರತದ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಭಾರತ ತಂಡದ ಡೆತ್ ಬೌಲರ್ ಯಾರು? ಎಂದು ಪ್ರಶ್ನಿಸಿಸುವ ಮೂಲಕ ವ್ಯಂಗ್ಯ ಮಾಡಿದ್ದಾರೆ..
ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಕೈಫ್, ನಿನ್ನೆ ನಡೆದ ಪಂದ್ಯ ಸಂಪೂರ್ಣವಾಗಿ ರೋಹಿತ್ ಶರ್ಮ ನೇತೃತ್ವದ ಭಾರತ ತಂಡದ ಕೈಯಲ್ಲಿತ್ತು. ಭಾರತೀಯ ಬೌಲರ್‌ಗಳು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಟೀಂ ಇಂಡಿಯಾದ ಡೆತ್ ಬೌಲರ್ ಯಾರು?. ಮೊದಲ ಏಕದಿನ ಪಂದ್ಯ ಭಾರತ ತಂಡದ್ದಾಗಿತ್ತು. ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡಿತ್ತು. ಪಂದ್ಯದ 40ನೇ ಓವರ್‌ವರೆಗೂ ಭಾರತದ ಬೌಲಿಂಗ್ ಉತ್ತಮವಾಗಿತ್ತು. ಆದರೆ ಕೊನೆಯ 10 ಓವರ್‌ಗಳಲ್ಲಿ ತಂಡದ ಡೆತ್ ಬೌಲರ್ ಯಾರು? ದೀಪಕ್ ಚಹರ್ ಅಥವಾ ಕುಲ್ದೀಪ್ ಸೆನ್? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ತಂಡದ ಫೀಲ್ಡಿಂಗ್ ಬಗ್ಗೆ ಮಾತನಾಡಿರುವ ಕೈಫ್, ಕೆಲವು ಕ್ಯಾಚ್‌ಗಳನ್ನ ಭಾರತೀಯ ಆಟಗಾರರು ಕೈಚೆಲ್ಲಿದರು. ಕೆ.ಎಲ್. ರಾಹುಲ್ ಉತ್ತಮ ಫೀಲ್ಡರ್ ಆಗಿದ್ದು, ಟಿ20 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಉತ್ತಮ ಫೀಲ್ಡಿಂಗ್ ತಂಡದ ಗೆಲುವಿಗೆ ಕಾರಣವಾಗಿತ್ತು. ಆದರೆ ವಾಷಿಂಗ್ಟನ್ ಸುಂದರ್ ಅವರಿಗೆ ಏನಾಗಿತ್ತು? ಡೈವ್ ಮೂಲಕ ಕ್ಯಾಚ್ ಪಡೆಯಬಹುದಾಗಿತ್ತು ಎಂದಿರುವ ಕೈಫ್, ಟೀಂ ಇಂಡಿಯಾ ಈ ಎಲ್ಲಾ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಭಾರತದ ಫೀಲ್ಡರ್‌ಗಳು ಒತ್ತಡಕ್ಕೆ ಸಿಲುಕಿದರು, ಒತ್ತಡದಿಂದಾಗಿ ಕೆಲವು ತಪ್ಪುಗಳನ್ನ ಸಹ ಮಾಡಿದರು. ಬೌಲಿಂಗ್‌ನಲ್ಲೂ ಸಾಕಷ್ಟು ವೈಡ್ ಮತ್ತು ನೋ ಬಾಲ್‌ಗಳನ್ನ ಮಾಡಲಾಯಿತು. ಹೀಗಾಗಿ ಈ ಎಲ್ಲಾ ವಿಷಯಗಳ ಬಗ್ಗೆ ಗಮನವಹಿಸುವ ಮೂಲಕ ಕಮ್‌ಬ್ಯಾಕ್ ಮಾಡಿದರೆ ಮಾತ್ರ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿದೆ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.




