Bangalore Poisonous Air : ಬೆಂಗಳೂರಿನ ಜನರೆ ಎಚ್ಚರ.. ನೀವು ಉಸಿರಾಡುತ್ತಿರುವುದು ವಿಷಕಾರಿ ಗಾಳಿ..!

ಬೆಂಗಳೂರು ಡಿ.5 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB)ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಳಿಗಾಲದ ನೈಸರ್ಗಿಕ ಪರಿಸ್ಥಿತಿಗಳು ಮತ್ತು ಅಪಾರ ಪ್ರಮಾಣದ ವಾಹನ ದಟ್ಟಣೆಯಿಂದಾಗ ಹೊರಬರುವ ವಿಷಕಾರಿ ಹೊಗೆಯಿಂದಾಗಿ AQI(air quality index) ಮಟ್ಟದಲ್ಲಿ ಏರಿಕೆಗೆ ಕಾರಣ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ, ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ(AQI) 185ರಷ್ಟಿತ್ತು. ಅಂದರೆ ಇದು “ಕಳಪೆ” ಗುಣಮಟ್ಟ. ನಗರದಲ್ಲಿ ಕೃಷ್ಣರಾಜಪುರದಲ್ಲಿ ಮಾತ್ರ “ಮಧ್ಯಮ” ಗುಣಮಟ್ಟ ದಾಖಲಾಗಿದೆ. ಪ್ರಸ್ತುತ ನಗರದ ವಾಯು ಮಾಲಿನ್ಯಕಾರಕಗಳ ಪ್ರಮಾಣವು PM2.5 ಸಾಂದ್ರತೆಯಲ್ಲಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆ(WHO)ಯ 24 ಗಂಟೆಗಳ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳ ಮೌಲ್ಯವು ನೀಡಿದ ಶಿಫಾರಸು ಮಿತಿಗಿಂತ 5.7 ಪಟ್ಟು ಹೆಚ್ಚು ಎಂದು AQI.in ವೆಬ್‌ಸೈಟ್ ಹೇಳಿದೆ.

AQI ವೆಬ್‌ಸೈಟ್ ಮುಂದಿನ ವಾರದ ಮುನ್ಸೂಚನೆಯನ್ನು ಕೂಡಾ ಹಂಚಿಕೊಂಡಿದೆ. ಆ ಪ್ರಕಾರ ಬುಧವಾರ ಈ ಮಟ್ಟಗಳು 150 ಅನ್ನು ಮೀರಬಹುದು ಎಂದು ಊಹಿಸಲಾಗಿದೆ.

ಬೆಂಗಳೂರಿನ ಜನರಿಗೆ ಸಲಹೆಗಳೇನು?

ಬೆಂಗಳೂರಿಗರು ಆದಷ್ಟು ಮನೆಯೊಳಗೆ ಇರುವಂತೆ AQI ಸಲಹೆ ನೀಡಿದೆ. ಕಿಟಕಿಗಳನ್ನು ಮುಚ್ಚುವಂತೆ ಹಾಗೂ ಮುಚ್ಚಿದ ಜಾಗಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಬಳಸುವಂತೆ ತಿಳಿಸಿದೆ. ಮನೆಯಿಂದ ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸುವಂತೆ ಸಲಹೆ ನೀಡಿದೆ.

ಅಕ್ಟೋಬರ್‌ ತಿಂಗಳಿನಿಂದ ಗಾರ್ಡನ್ ಸಿಟಿಯಲ್ಲಿ ಕಳಪೆ ಗಾಳಿಯ ಗುಣಮಟ್ಟ ವರದಿಯಾಗುತ್ತಿದೆ. ವಿಶೇಷವಾಗಿ ಚಳಿಗಾಲದ ಪ್ರಾರಂಭದ ಬಳಿಕ, ದೀಪಾವಳಿ ಹಬ್ಬದ ಆಚರಣೆ ಕೂಡಾ ಜೋರಾಗಿತ್ತು. ಅದಾದ ಬಳಿಕ ಕಳೆದ ವಾರವೂ ಬೆಂಗಳೂರು “ಅನಾರೋಗ್ಯಕರ” AQI ಮಟ್ಟವನ್ನು ಕಂಡಿದೆ. ಬುಧವಾರ ಬೆಳಗ್ಗೆ ಈ ಪ್ರಮಾಣ 210ಕ್ಕೆ ಏರಿತ್ತು. ದೇಶದ ಇತರ ನಗರಗಳ ವಾಯು ಗುಣಮಟ್ಟದ ಬಗ್ಗೆ ನೋಡುವುದಾದರೆ, ರಾಷ್ಟ್ರ ರಾಜಧಾನಿ ದೆಹಲಿ, ಗಯಾ, ಭಾಗಲ್ಪುರ್ ಮತ್ತು ಪಾಟ್ನಾ ಸೋಮವಾರ ದೇಶದ ಅತ್ಯಂತ ಕಲುಷಿತ ನಗರಗಳಾಗಿದೆ. ಇದೇ ವೇಳೆ ತಮಿಳುನಾಡಿನ ಕೊಯಮತ್ತೂರು, ಈರೋಡ್ ಮತ್ತು ಕೊಡೈಕೆನಾಲ್ ಕಡಿಮೆ ಮಾಲಿನ್ಯದ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

More News