ಬೆಂಗಳೂರು ಡಿ.5: ಬಿಗ್ ಬಾಸ್ ಮನೆಯ ೯ ನೇ ಸೀಸನ್ ಶುರುವಾಗಿ ಆಗಲೇ ಎರಡೂವರೆ ತಿಂಗಳು ಕಳೆದಿದ್ದು, ಹಲವರು ಭಿನ್ನವಾದ ಆಟಗಳನ್ನು ಆಡುತ್ತಾ, ಗೆಲ್ಲುತ್ತಾ, ಸೋಲುತ್ತಾ ಮುಂದುವರಿದಿದೆ. ದೊಡ್ಮನೆಯಿಂದ ಅನೇಕರು ಔಟ್ ಆಗಿ ಹೊರಗಡೆ ಸಹ ಹೋಗಿದ್ದಾರೆ. ಇನ್ನುಳಿದವರು ಒಬ್ಬರಿಗೊಬ್ಬರು ಸಖತ್ ಪೈಟ್ ಕೊಡುವುದರಲ್ಲಿ ತಲ್ಲೀನರಾಗಿದ್ದಾರೆ.

ಇದರ ನಡುವೆ ದೊಡ್ಮನೆಯಲ್ಲಿ ಎಲ್ಲರಿಗೂ ಸಖತ್ ಪೈಪೋಟಿ ನೀಡುತ್ತಿರುವ ದಿವ್ಯಾ ಉರುಡುಗ ಅವರಿಗೆ ಇದೀಗ ಅವರ ಭಾವಿ ಪತಿ ಎನ್ನಲಾದ ಅರವಿಂದ್ ಅವರು ಪ್ರೀತಿಯ ಸಂದೇಶವನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಅವಕಾಶ ಕೊಡಬೇಡ, ಎಲ್ಲವನ್ನೂ ಕಬಳಸಿಕೋ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಆಕೆಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ.

ಸಿನಿಮಾ, ಟಿವಿ ಶೋಗಳು, ಸೀರಿಯಲ್ ನಟಿಸುವ ಮೂಲಕ ಖಡಕ್ ನಟಿ ಎನಿಸಿಕೊಂಡಿರುವ ದಿವ್ಯಾ, ಇದೀಗ ಬಿಗ್ ಬಾಸ್ ನಲ್ಲಿಯೂ ಮಾಸ್ ಆಗಿ ಆಟವಾಡ್ತಿದ್ದಾರೆ. ದೊಡ್ಮನೆಯಂತಹ ಸ್ಟ್ರಾಂಗ್ ರೂಂ ನಲ್ಲಿ ದಿವ್ಯಾ ಗಟ್ಟಿಗಿತ್ತಿಯಾಗಿ ಹೋರಾಡ್ತಿದ್ದಾರೆ. ಎಲ್ಲರಿಗೂ ಸಖತ್ ಪೈಪೋಟಿ ನೀಡುವುದರ ಮೂಲಕ ಆಟವಾಡ್ತಿದ್ದಾರೆ. ಹೀಗಾಗಿ, ಆಕೆಯ ಭಾವಿ ಪತಿ ಅರವಿಂದ್ ಆಟವನ್ನು ಯಾರಿಗೂ ಬಿಟ್ಟುಕೊಡಬೇಡ, ನೀನೇ ಗೆಲ್ಲಬೇಕು ಅಂತ ಹುರಿದುಂಬಿಸಿದ್ದಾರೆ.

ಈಗಾಗಲೇ ಹತ್ತು ವಾರಗಳನ್ನು ಮುಗಿಸಿರುವ ಬಿಗ್ ಬಾಸ್ ಮನೆಯಲ್ಲಿ ಫೈನಲ್ ಶೋಗೆ ದಿನಗಳು ಹತ್ತಿರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರವಿಂದ್ ಆಕೆಗೆ ಬೆಂಬಲ ನೀಡಿದ್ದಾರೆ. ಚಿಟ್ಟೆಯ ಮರಿ ಹುಳು ಕೈ ಚೆಲ್ಲಿದರೆ, ಮುಂದಿನ ದಿನಗಳಲ್ಲಿ ಅದು ದೊಡ್ಡದಾದ ಸುಂದರ ಚಿಟ್ಟೆಯಾಗಲು ಸಾಧ್ಯವಿಲ್ಲ. ಅದಕ್ಕಾಗಿ ಈಗಿನಿಂದಲೇ ಹೋರಾಡಬೇಕು ಅಂತ ಸಲಹೆ ನೀಡಿದ್ದಾರೆ. ನೀನು ಗೆಲ್ಲುತ್ತೀಯಾ ಎಂಬ ವಿಶ್ವಾಸವಿದೆ. ಅದಕ್ಕಾಗಿ ಶ್ರಮದ ಅಗತ್ಯವಿದೆ. ಪ್ರಯತ್ನ ಮಾಡು ಅಂತ ಹೇಳಿದ್ದಾರೆ.

ಇತ್ತೀಚಿಗೆಯಷ್ಟೇ ಅರವಿಂದ್ ಮತ್ತು ದಿವ್ಯಾ ಅವರ ಎಂಗೇಜ್ಮೆಂಟ್ ಆಗಿದೆ. ಮದುವೆಗೆ ಇನ್ನೇನು ಎಲ್ಲ ರೀತಿಯ ಒಪ್ಪಿಗೆ ಸಿಕ್ಕಂತಾಗಿದೆ. ಅದರ ನಡುವೆಯೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗೊ ಆಯ್ಕೆಯಾದ್ದರಿಂದ ಅವರು ಮನೆ ಪ್ರವೇಶಿಸಿದರು. ಈ ಹಿಂದಿನ ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ ಇವರಿಬ್ಬರೂ ಲವರ್ಸ್ ಆಗಿದ್ದು, ಇದೀಗ ಬಿಗ್ ಬಾಸ್ ೯ ನೇ ಸೀಸನ್ ಮುಗಿದ ಕೂಡಲೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ.




