ಕಾಂತಾರ ಸಿನಿಮಾ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಗದ್ದಲವೆದ್ದ ಈ ಸಿನಿಮಾದ ಕುರಿತು ಒಂದೊಂದೇ ಇಂಟರೆಸ್ಟಿಂಗ್ ಕಹಾನಿ ಹೊರ ಬರ್ತಿದೆ. ದೈವದ ಆಧಾರದ ಮೇಲೆ ತೆಗೆದ ಚಿತ್ರದಲ್ಲಿ ನಿಗೂಢ ಘಟನೆಗಳು.. ಅಚ್ಚರಿ ಕಥೆಗಳೇ ನಡೆದುಬಿಟ್ಟಿವೆಯಂತೆ.. ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನು..? ನಿಗೂಢಗಳೇ ಅನ್ನೋದನ್ನ ನಾವ್ ತಿಳಿಸಿಸ್ತೀವಿ..
ಕಾಂತಾರ ಸಿನಿಮಾದ ಬಹುತೇಕ ಶೂಟಿಂಗ್ ನಡೆದಿರುವುದು ಕುಂದಾಪುರದ ಆಸು ಪಾಸಿನಲ್ಲೇ.. ಜಾಗದ ಆಯ್ಕೆ ಮಾಡಿದಾಗ ನೆಗೆಟಿವ್ ವೈಬ್ ತುಂಬಾ ಇತ್ತಂತೆ.. ಸುತ್ತಮುತ್ತಲಿದ್ದ ಜನ ಅಯ್ಯೋ ಇಲ್ಲಿಯೇ ಯಾಕೆ ಶೂಟಿಂಗ್ ಮಾಡ್ಬೇಕು ಅನಿಸ್ತು ನಿಮಗೆ.. ಇದು ನೆಗೆಟಿವ್ ವೈಬ್ ಇರೋ ಜಾಗ ಎಂದು ಊರಿನವ್ರೇ ತಿಳಿಸಿದ್ದಾರೆ.. ಆದ್ರೂ ಸಿನಿಮಾ ತೆಗೆಯಲು ಲೊಕೇಷನ್ ಹೇಳಿ ಮಾಡಿದ ಹಾಗೇ ಇದ್ದ ಕಾರಣ ರಿಷಬ್ ತಂಡ ಅಲ್ಲೇ ಉಳಿದು ಸಿನಿಮಾ ತೆಗೆಯಲು ನಿರ್ಧರಿಸಿದ್ದಾರೆ..

ಒಮ್ಮೆ ರಾತ್ರಿ 12 ಗಂಟೆಯ ಆಸುಪಾಸಿನ ಸಮಯ.. ಸೆಟ್ ನಲ್ಲಿ ಚನ್ನಾಗೇ ಇದ್ದು ಮಾತಾಡ್ತಿದ್ದ ಮಹಿಳಾ ಆರ್ಟಿಸ್ಟ್ ಒಬ್ಬರು ಇದ್ದಕ್ಕಿದ್ದಂತೆ ಗಂಭೀರವಾಗಿದ್ದಾರೆ.. ದಪ್ಪ ಕಣ್ಣುಗಳನ್ನು ಬಿಟ್ಟು ಕುಣಿಯಲು ಪ್ರಾರಂಬಿಸಿದ್ರಂತೆ.. ಅಷ್ಟೇ ಅಲ್ಲ.. ಕಿರುಚುತ್ತಾ ಓಡೋಕೆ ಪ್ರಾರಂಭಿಸಿದ್ದಾರೆ. ಈ ವೇಳೆ ತಂಡದ ಜನರೇ ಆಕೆಯನ್ನು ತಡೆದು ನಿಲ್ಲಿಸಿದ್ರಂತೆ.. ಈ ವೇಳೆ ರಿಷಬ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಬಿಟ್ಟಿದ್ರಂತೆ.. ಹೀಗೆ ನಾನಾ ಸಂಕಷ್ಟ ಜೊತೆಗೆ ಪಾಸಿಟಿವ್ ವೈಬ್ ಕೂಡ ಕಾಪಾಡ್ತಿತ್ತು ಅಂತಾರೆ ನಟ ರಾಂಪ ಅಲಿಯಾಸ್ ಪ್ರಕಾಶ್ ತುಮ್ಮಿನಾಡು
ಒಮ್ಮೆ ಸೆಟ್ ನ ಲ್ಲಿ ಒಬ್ಬರ ಆರೋಗ್ಯ ಸಡನ್ ಆಗಿ ಕೈ ಕೊಟ್ಟು ಮತ್ತೇ ಬೆಳಗ್ಗೆ ಏಳುವಷ್ಟರಲ್ಲಿ ಆರಾಮಾಗಿ ನಡೆದು ಬಂದ ಘಟನೆಗಳೂ ನಡೆದಿದ್ವಂತೆ. ನಂತರ ಬರ್ತಾ ಬರ್ತಾ ಸಿನಿಮಾಗೆ ಏನು ಕಥೆ ಬೇಕೋ.. ಆ ಕಥೆಯನ್ನು ಸೃಷ್ಟಿಸಲು ಜಾಗ, ಪ್ರಕೃತಿಯೇ ಸಿನಿಮಾವೇ ಎಣೆದುಬಿಡಲು ಸಹಕರಿಸಿತು ಎಂದು ನಟ ರಾಂಪ ಹೇಳಿದರು.
ಈ ಬಗ್ಗೆ ಖಾಸಗಿ ಚಾನಲ್ ವೊಂದಕ್ಕೆ ಮಾತನಾಡಿದ ಅವರು, ದೇವರನ್ನೇ ನಂಬಲ್ಲ ಎಂದವರೇ ನನ್ನ ಕಣ್ಣ ಮುಂದೆಯೇ ದೈವಾರಾಧನೆ ನಡೆಸಿದ್ದನ್ನ ನೋಡಿದ್ದೇನೆ.. ಸಿನಿಮಾ ಮಾಡುವ ಮುನ್ನ ಅದನ್ನ ನಾವು ಮೊದಲು ನಂಬುವುದು ಮುಖ್ಯ. ದೈವದ ಬಗ್ಗೆ ಬರೆಯುತ್ತಾ ಪ್ರತೀ ಬಾರಿಯೂ ಅದಕ್ಕೆ ಸಂಬಂಧಿಸಿದವರ ಬಳಿ ಮಾತುಕತೆ ನಡೆಸಿಯೇ ಸ್ಕ್ರಿಪ್ಟ್ ನ್ನು ರೆಡಿ ಮಾಡ್ತಿದ್ವಿ.. ದೈವದ ಸೆಟ್ ಹಾಕಿದ ಜಾಗದಲ್ಲಿ ಚಪ್ಪಲಿ ಹಾಕಿ ಯಾರೂ ಆ ಕಡೆ ಒಡಾಡುತ್ತಿರಲಿಲ್ಲ..

ರಿಷಬ್ ಅಂತು ಸುಮಾರು ದಿನಗಳ ಹಿಂದೆಯೇ ನಾನ್ ವೆಜ್ ಬಿಟ್ಟಿದ್ದರು. ಕುಂದಾಪುರದಲ್ಲಿ ನಡೆದ ಶೂಟಿಂಗ್ ಜಾಗದಲ್ಲಿ ಎಷ್ಟು ಪಾಸಿಟಿವ್ ಎನರ್ಜಿ ಇತ್ತೋ.. ಅಷ್ಟೇ ನೆಗೆಟಿವ್ ಎನರ್ಜಿ ಇದ್ದದ್ದೂ ಕಂಡು ಬಂತು.. ಈ ಜಾಗವನ್ನೇ ಯಾಕೆ ಆಯ್ಕೆ ಮಾಡಿದ್ರಿ ಎಂದೂ ಸಹ ಊರಿನ ಜನ ಹೇಳಿದ್ದಾಗಿ ರಾಂಪ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ..
ಶೂಟಿಂಗ್ ನ ಕೊನೆ ದಿನ ಕೊಲಾ ನಡೆಸಲಾಗಿತ್ತು. ಆದರೆ ಕೊಲಾ ಶೂಟಿಂಗ್ ಪ್ರಾರಂಭವಾದ ಬಳಿಕ ನಾನು ಅಷ್ಟು ದಿನ ನೋಡಿದ ರಿಷಬ್ ಬೇರೆ.. ಕೊಲಾ ಕಟ್ಟಿದ ಮೇಲೆ ನೋಡಿದ ರಿಷಬ್ ಬೇರೆಯಾಗಿ ಕಂಡರು ಎಂದರು. ಸೆಟ್ ತುಂಬಾ ಓಡಾಡಿ ಮಾತಾಡುತ್ತಿದ್ದ ರಿಷಬ್ ಅವರು ಕೊಲಾ ವೇಶಕ್ಕೆ ಪ್ರವೇಶಿದ ಬಳಿಕ ಮಾತಾಡೋದನ್ನೇ ನಿಲ್ಲಿಸಿದ್ದರಂತೆ..
ಅಷ್ಟು ದಿನ ಪತ್ಯೆ ನಲ್ಲಿದ್ರು ಹೀಗಾಗಿ ಆ ಪಾತ್ರ ಗಾಢವಾಗಿ ಅವರ ಒಳಗೆ ಕೂತಿತ್ತು ಅನಿಸುತ್ತೆ ನಂಗೆ.. ಅವರಿಗೆ ಏನೋ ಆಗ್ತಿದೆ ಅಂತ ಮಾತ್ರ ನಮಗೆ ಗೊತ್ತಾಗ್ತಿತ್ತು. ತುಂಬಾ ಜಾಸ್ತಿ ಇನ್ವಲ್ವ್ ಆಗ್ಬಿಟ್ಟಿದ್ದಾರೆ ಅನಿಸುತ್ತಿತ್ತು. ಆದರೆ ಅವರು ಏನೂ ಹೇಳಿಕೊಂಡಿಲ್ಲ ಈ ಬಗ್ಗೆ ಎಂದು ಕಾಂತಾರ ಸೆಟ್ ನಲ್ಲಿ ನಡೆದ ಘಟನೆಗಳನ್ನ ತಿಳಿಸಿದರು.
#kantara #rishabha shetty #negetive wib #lady artist #strange incidents #nonveg




