China is Rresponsible for the Deaths of Millions of People : ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವೇ ಚೀನಾ..! : ಕೊರೋನ ವೈರಸ್‌ ಮಾನವ ಸೃಷ್ಟಿ ಎಂದ ವಿಜ್ಞಾನಿ

ನವದೆಹಲಿ : ಡಿ.7: ಇಡೀ ವಿಶ್ವವನ್ನೇ ಅಲುಗಾಡಿಸಿದ, ಅನೇಕರ ಪ್ರಾಣವನ್ನು ಬಲಿಪಡೆದುಕೊಂಡ ಮಾರಣಾಂತಿಕ ಕಾಯಿಲೆ ಕೊರೋನ ವೈರಸ್‌ ಬಗ್ಗೆ ಚೀನಾದ ವಿಜ್ಞಾನಿಯೊಬ್ಬರು ಸ್ಪೋಟಕ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಈ ವೈರಸ್‌ ಎಲ್ಲರ ಅನುಮಾನದಂತೆ ಚೀನಾದ ವುಹಾನ್‌ ಸಂಶೋಧನಾ ಕೇಂದ್ರದಿಂದಲೇ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ.

ಚೀನಾದ ವುಹಾನ್‌ ನಗರದಿಂದ ಆರಂಭವಾದ ಸೋಂಕು ಹರಡುವಿಕೆ ಇಡೀ ವಿಶ್ವದಾದ್ಯಂತ ಹಬ್ಬಿತು. ಅದರಿಂದಾಗಿ ಇಡೀ ಜಗತ್ತೇ ಸ್ಥಬ್ದಗೊಂಡಿತು. ಅನೇಕರು ಬದುಕು ಕಳೆದುಕೊಂಡರು, ಇನ್ನೂ ಅನೇಕ ಕುಟುಂಬಗಳು ಬೀದಿ ಪಾಲಾದವು. ಲಕ್ಷಾಂತರ ಜನರು ಜೀವ ಕಳೆದುಕೊಂಡರು, ಅವರ ಕುಟುಂಬಗಳು ಬೀದಿ ಪಾಲಾಗಿ ಇತಿಹಾಸದಲ್ಲಿ ದುರಂತ ಕಥೆಗೆ ಸೇರಿಹೋಗಿದೆ.

ಕೊರೋನ ಶುರುವಿನ ಸಂದರ್ಭದಲ್ಲಿ ವೈರಸ್‌ ವುಹಾನ್‌ ನಿಂದಲೇ ಹಬ್ಬಿದೆ ಎಂಬ ವದಂತಿಯನ್ನು ಹುಟ್ಟಿ ಹಾಕಲಾಯಿತು. ಆಗ ಇದು ಸತ್ಯವಲ್ಲ, ಸುಳ್ಳು ಎಂದೂ ಅನೇಕರು ವಾದಿಸಿದರು. ಚೀನಾ ದೇಶವು ಇದನ್ನು ಒಪ್ಪಿಕೊಳ್ಳಲು ಮುಂದಾಗಲಿಲ್ಲ. ಆದರೆ, ಇದೀಗ ಅಲ್ಲೇ ಕೆಲಸ ಮಾಡಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್, ವುಹಾನ್‌ ಲ್ಯಾಬ್‌ನಲ್ಲಿ ಚೀನಾ ನಡೆಸುತ್ತಿದ್ದ ವೈರಸ್‌ ಸಂಶೋಧನೆಗೆ ಅಮೆರಿಕ ಧನ ಸಹಾಯ ನೀಡಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಅವರ ದಿ ಟ್ರೂತ್ ಎಬೌಟ್ ವುಹಾನ್ ಪುಸ್ತಕದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿ ಸಂಚಲನವನ್ನುಂಟು ಮಾಡಿದ್ದಾರೆ.

ಚೀನಾದಲ್ಲಿ ಲ್ಯಾಬ್‌ ಗಳನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿಡಲ್ಲ. ಅಲ್ಲದೆ, ಅಲ್ಲಿನ ಸುರಕ್ಷತೆ ನಿಯಮಗಳು ಸರಿಯಿಲ್ಲ. ಈ ಹಿನ್ನೆಲೆಯಲ್ಲಿ ವುಹಾನ್‌ ನಗರದಲ್ಲಿನ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಯಲ್ಲಿ ಸಂಸ್ಕರಿಸಿದ್ದ ವೈರಸ್‌ ಸೋರಿಕೆಯಾಗಿ, ಇಡೀ ವಿಶ್ವವನ್ನೇ ನಾಶಗೊಳಿಸಿತು ಎಂದು ಅವರು ಹೇಳಿದ್ದಾರೆ. ಆಂಡ್ರ್ಯೂ ಹಫ್‌ ಅವರು ಕೇವಲ ವಿಜ್ಞಾನಿಯಾಗಿದ್ದರೆ ಅವರ ಹೇಳಿಕೆಗೆ ಅಷ್ಟೊಂದು ಮಹತ್ವ ಇರ್ತಾ ಇರಲಿಲ್ಲ. ಆದರೆ, ಅವರು, ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರೂ ಆಗಿದ್ದಾರೆ.

ವುಹಾನ್‌ ಸಂಸ್ಥೆಯು ಎನ್‌ ಐ ಎಚ್‌ ಸಹಾಯ ಪಡೆದುಕೊಂಡು ಒಂದು ದಶಕದಿಂದಲೂ ಬಾವಲಿಗಳಲ್ಲಿ ಕೊರೋನ ಸೋಂಕುಗಳನ್ನು ಸ್ಟಡಿ ಮಾಡಲಾಗುತ್ತಿದೆ. ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯ ಜವಾಬ್ದಾರಿ ಹೊಂದಿರುವ ಈ ಎನ್‌ಐಎಚ್‌ ಅಮೆರಿಕ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ. ಕೊರೊನಾ ವೈರಸ್ ವೇಗವಾಗಿ ಹರಡಿದ್ದನ್ನು ಗಮನಿಸಿ ಚೀನಾವೇ ಈ ವೈರಸ್ ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲದೇ ಈ ಸಂಶೋಧನೆಗೆ ಅಮೆರಿಕವೇ ಧನ ಸಹಾಯ ಮಾಡಿತ್ತು ಎಂದು ಅನೇಕ ಮಾಧ್ಯಮಗಳು ವರದಿ ಬಿತ್ತರಿಸಿದ್ದರೂ ಸಹ ಅಮೆರಿಕ ಎಲ್ಲವನ್ನೂ ತಿರಸ್ಕಾರ ಮಾಡಿತ್ತು.

ಚೀನಾ ಸರ್ಕಾರ ಹಲವು ರೀತಿಯ ವೈರಾಣುಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಕೈಗೊಳ್ಳುವ ಸಲುವಾಗಿಯೇ ವುಹಾನ್‌ ನಲ್ಲಿ ಸಂಶೋಧನಾ ಕೇಂದ್ರಗಳನ್ನು ಆರಂಭಿಸಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಹೀಗಾಗಿ, ಇಲ್ಲಿಂದಲೇ ಕೊರೋನ ವೈರಸ್‌ ಸಹ ಸೃಷ್ಟಿಯಾಗಿದೆ ಎನ್ನಲಾಗಿದೆ.

ಇಲ್ಲಿನ ವೈರಾಣುಗಳ ಸಂಶೋಧನಾ ಸಂಸ್ಥೆಗಳಲ್ಲಿ ಏನೆಲ್ಲಾ ಪ್ರಯೋಗಗಳು ನಡೆಯುತ್ತವೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಯುದ್ಧದಿಂದ ಗೆಲ್ಲುವುದು ಬಹಳ ಕಷ್ಟ, ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳಿವೆ.

More News