Actress Ashureddy : ನಟಿ ಆಶುರೆಡ್ಡಿ ಕಾಲು ಹಿಡಿದು ಕೂತ ನಿರ್ದೇಶಕ : ರಾಮ್ ಗೋಪಾಲ್ ಫೋಟೋ ಔಟ್..!

ಬೆಂಗಳೂರು ಡಿ.7 : ಟ್ರೋಲ್ ಗಳಿಂದಲೇ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇದೀಗ ಮತ್ತೆ ಸುದ್ದಿಯಲ್ಲಿದ್ದು, ನಟಿಯೊಬ್ಬರ ಪಾದವನ್ನು ಹಿಡಿದುಕೊಂಡು ಕೂತಿರುವ ಫೋಟೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಿದೆ..

ತೆಲುಗು ಸಿನಿಮಾ ರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆರ್ ಜಿ ಬಿ ವಿವಾದಗಳನ್ನು ಎದುರಿಸುತ್ತಲೇ ಬಂದಂತಹ ವ್ಯಕ್ತಿ. ಸಿನಿಮಾ ರಂಗದಲ್ಲಿ ವಿವಾದಗಳು ಎಲ್ಲರನ್ನೂ ಕಾಡುವುದು ಸಹಜ. ಆದರೆ, ಇವರು ಮಾತ್ರ ಸಿನಿಮಾಗಿಂತ ವಿವಾದದ ಮೂಲಕನೇ ಅತೀ ಹೆಚ್ಚು ಪ್ರಸಿದ್ಧರಾದವರು. ಯಾವಾಗಲೂ ಹೀರೋಹಿನ್ ಗಳ ಜೊತೆಗೆ ಇರ್ತಾರೆ ಅಂತ ಅನೇಕ ತರಹದ ಟ್ರೋಲ್ ಗಳು ಇವರನ್ನು ಕಾಡಿವೆ ಮತ್ತು ಕಾಡ್ತಾನೆ ಇದ್ದಾವೆ.

ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ಆರ್‌ಜಿವಿ ನಟಿಯೊಬ್ಬರ ಪಾದ ಹಿಡಿದಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದನ್ನು ನೋಡಿರುವ ಸಿನಿಮಾ ಪ್ರಿಯರು ಆತನ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅಶುರೆಡ್ಡಿ ಮತ್ತು ರಾಮ ಗೋಪಾಲ್ ವರ್ಮ ಅವರು ಪಾಲ್ಗೊಂಡಿದ್ದರು. ಅದಾದ ಮೇಲೆ ವರ್ಮಾ ನಟಿ ಅಶು ಕಾಲ ಬುಡದಲ್ಲಿ ಕುಳಿತುಕೊಂಡು ನೋಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅದೀಗ ಭಾರೀ ಟೀಕೆಗೆ ಕಾರಣವಾಗಿದೆ. ನಿರ್ದೇಶಕರು ಈ ಮಟ್ಟಕ್ಕಿಳಿದಿರುವುದು ಸರಿಯಾದುದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಪಾದ ಮೇಲೆ ಕುಳಿತಿರುವ ನಟಿ ಆಶುರೆಡ್ಡಿಯನ್ನು ನಿರ್ದೇಶಕ ವರ್ಮಾ ಅವರು ಕಾಲು ಹಿಡಿದು ಕುಳಿತಿದ್ದಾರೆ. ಈ ಫೋಟೋ ಅನ್ನು ಶೇರ್ ಮಾಡಿರುವ ಆರ್ ಜಿ ವಿ, ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್ ಎಂದಿದ್ದಾರೆ. ಸಧ್ಯಕ್ಕೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಟ್ರೋಲ್ ಮಾಡಲಾಗುತ್ತಿದೆ.

ಶಿವಾ ಚಿತ್ರದ ಮೂಲಕ ಸಿನಿಮಾ ಟ್ರೆಂಡ್ ಬದಲಿಸಿದ ವರ್ಮಾ ಅವರು, ಅದೇ ಮಾದರಿಯಲ್ಲಿ ಹೊಸ ಪ್ಲಾನ್ ನಡೆಸಿದ್ದು, ಯಾರು ಏನೇ ಅಂದುಕೊಂಡರೂ, ಎಷ್ಟೇ ವಿವಾದಗಳು ಸುತ್ತುವರೆದರೂ ತನ್ನ ಕೆಲಸವನ್ನು ಮುಂದುವರಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಅಪಾಯಕಾರಿ ಪ್ರಚಾರಗಳಿಗೆ ನಟಿಯರನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಬಿಗ್ ಬಾಸ್ ಬ್ಯೂಟಿ ಅಶು ರೆಡ್ಡಿಯನ್ನು ಫೀಲ್ಡ್ ಗೆ ಕರೆತಂದು ಮತ್ತೊಮ್ಮೆ ಬೋಲ್ಡ್ ಸಂದರ್ಶನ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

#ashureddy #ramgopal verma #big boss beauty

More News