ಬೆಂಗಳೂರು ಡಿ.8: ಗುಜರಾತ್ ನಲ್ಲಿ ಬಿಜೆಪಿ ಸ್ಪಷ್ಟವಾಗಿ ಬಹುಮತ ಪಡೆದುಕೊಂಡಿದೆ. ಈ ಬಾರಿ ಗುಜರಾತ್ ನಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದೆ. ಕಳೆಬಾರಿಗಿಂತ ಅತಿ ಹೆಚ್ಚು ಸ್ಥಾನ ಪಡೆದುಕೊಂಡಿದೆ.

ಎಕ್ಸಿಟ್ ಪೋಲ್ ಗಳಲ್ಲಿಯೂ ಇದೇ ಹೇಳಿತ್ತು. ಗುಜರಾತ್ ನಲ್ಲಿ ಸತತ 7ನೇ ಬಾರಿ ಗೆಲ್ಲುತ್ತಿದ್ದೇವೆ, ಅದು ಸುಲಭದ ಮಾತಲ್ಲ. ಉತ್ತಮವಾಗಿ ಆಡಳಿತ ಮಾಡಿದಕ್ಕೆ ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಆಡಿಪಾಯ ಹಾಕಿದ್ದು ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿಯವರು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪಾಸಿಟಿವ್ ನಾಯಕತ್ವದಿಂದ ಒಂದು ಜನರೇಷನ್ ದಾಟಿದ್ರು ಸಹ ಹಳೇ ಮತ್ತು ಹೊಸ ಪೀಳಿಗೆಯ ಜನರು ಮೋದಿಯವರ ಆಡಳಿತವನ್ನ ಒಪ್ಪಿಕೊಂಡಿದ್ದಾರೆ.

ದೇಶ ಮುನ್ನೆಡಿಸುವ ಅವರ ನಾಯಕತ್ವವನ್ನ ಜನತೆ ಒಪ್ಪಿಕೊಂಡಿದ್ದಾರೆ. ಗುಜರಾತ್, ಗೋವಾ ಸೇರಿದಂತೆ ಹಲವು ಕಡೆ ಬಿಜೆಪಿ ಗೆಲುವು ಕಂಡಿದೆ. ಹಿಮಾಚಲ ಪ್ರದೇಶದಲ್ಲಿ ಕ್ಲೋಸ್ ಟೈಟ್ ಇದೆ ಅಲ್ಲಿಯೂ ಬಿಜೆಪಿ ಬರುತ್ತೆ ಅನ್ನೋ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದೆಹಲಿಯ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ
ದೆಹಲಿಯಲ್ಲಿ ಲೋಕಲ್ ಬಾಡಿಯಲ್ಲಿ 15 ವರ್ಷ ಆಡಳಿತ ಮಾಡೋದೇ ದೊಡ್ಡ ಸಾಧನೆ. ಲೋಕಲ್ ಇಷ್ಟು ಬಹಳ ಇರುತ್ತೆ ಒಂದೊಂದು ವಾರ್ಡ್ ನಲ್ಲಿ ಒಂದು ರೀತಿ ಸಮಸ್ಯೆ ಇರುತ್ತೆ. ಮತದಾರರ ಸಂಖ್ಯೆ ಸಹ ಕಡಿಮೆ. ಮುನಿಸಿಪಲ್ ಎಲೆಕ್ಷನ್ ಜನರಲ್ ಮತ್ತು ಎಲೆಕ್ಷನ್ ಗೆ ಹೊಲಿಕೆ ಮಾಡಲು ಆಗೋದಿಲ್ಲ. ಗುಜರಾತ್ ಚುನಾವಣೆಯ ಫಲಿತಾಂಶ ರಾಜ್ಯದ ಚುನಾವಣಾ ಮೇಲೆ ಪರಿಣಾಮ ಬಿರಲಿದೆ.

ಬಿಜೆಪಿ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಬಹಳ ದೊಡ್ಡ ಬೆಂಬಲ ಬರುತ್ತೆ. ನೈತಕ ಬಲದ ಜೊತೆಗೆ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಿದ್ರೆ ಜಯ ನಿಶ್ಚಿತ. ಗುಜರಾತ್ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರಲ್ಲ ಅನ್ನೋ ಕಾಂಗ್ರೆಸ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರು ಹಂಗೆ ಹೇಳಬೇಕು ಅಲ್ವಾ…ಬೇರೆ ರೀತಿ ಹೇಳಲು ಹೆಂಗ್ ಸಾಧ್ಯ..? ವಿಪಕ್ಷಗಳು ಹೇಳಿದ್ದು ಯಾವುದು ನಿಜವಾಗಿದೆ. ಅವರು ಹೇಳಿದ್ದು ಯಾವುದು ನಿಜವಾಗಿಲ್ಲ. ಅವರ ಹೇಳಿಕೆಯಲ್ಲಿ ತಲೆಕಡೆಸಿಕೊಳ್ಳಬೇಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.




