ಬಾಲಿವುಡ್ ನಟ ಸಲ್ಮಾನ್ ಖಾನ್ ಕುರಿತ ಹಾಟ್ ಸುದ್ದಿಯೊಂದು ಹೊರಬಿದ್ದಿದೆ. ಇದೊಂದು ತುಂಬಾ ಇಂಟರೆಸ್ಟಿಂಗ್ ವಿಷಯ. ಸಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸಖತ್ ವೈರಲ್ ಆಗಿದೆ. ಸುದ್ದಿ ಏನಪ್ಪಾ ಅಂದ್ರೆ, ಸಲ್ಮಾನ್ ಖಾನ್ ಕನ್ನಡದ ಖ್ಯಾತ ನಟಿಯೊಂದಿಗೆ ನಡೆಸುತ್ತಿರುವ ಡೇಟಿಂಗ್.

ಹಾಟ್ ಗೊಂಬೆ ಎಂದೇ ಖ್ಯಾತಿ ಪಡೆದಿರುವ ಕನ್ನಡದ ನಟಿ ಪೂಜಾ ಹೆಗ್ಡೆಯೊಂದಿಗೆ ಸಲ್ಲು ಭಾಯ್ ಪ್ರೀತಿಯಲ್ಲಿ ಮುಳುಗಿದ್ದಾರಂತೆ. ಇಬ್ಬರೂ ಡೇಟಿಂಗ್ ನಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರಂತೆ. ಇದನ್ನ ನಾವ್ ಹೇಳುತ್ತಿಲ್ಲ. ಬಾಲಿವುಡ್ ಕಾಂಟ್ರವರ್ಸಿಯಲ್ ವಿಮರ್ಶಕ ಉಮೈರ್ ಸಂಧು ಹೇಳಿದ್ದಾರೆ.
BREAKING NEWS : New Couple in Town !!! Mega Star #SalmanKhan fell in love with #PoojaHegde !! His production house also signed her for next 2 films !! They are spending time together now a days !! Confirmed by Salman Khan close sources. pic.twitter.com/2lkNIXH3IE
— Umair Sandhu (@UmairSandu) December 7, 2022
ತಮ್ಮ ಟ್ವೀಟರ್ ಖಾತೆಯಲ್ಲಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು ಈ ವಿಷಯ ಬಹಿರಂಗಪಡಿಸಿದ್ದಾರೆ. ಬ್ರೇಕಿಂಗ್ ನ್ಯೂಸ್.. ಫಿಲ್ಮ್ ನಗರದಲ್ಲಿ ನವ ಜೋಡಿ.. ಪೂಜಾ ಹೆಗ್ಡೆಯನ್ನು ಪ್ರೀತಿಸಿದ ಮೆಗಾಸ್ಚಾರ್ ಸಲ್ಮಾನ್ ಖಾನ್. ಪೂಜಾಗೆ ತಮ್ಮ ನಿರ್ಮಾಣದ ಎರಡು ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿಸಿದ್ದಾರೆ. ಸದ್ಯ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಾರೆ, ಇದನ್ನು ಸಲ್ಮಾನ್ ಆಪ್ತರು ಖಚಿತಪಡಿಸಿದ್ದಾರೆ ಎಂದು ಸಂಧು ಟ್ವೀಟ್ ಮಾಡಿದ್ದಾರೆ.

ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಜಗಪತಿ ಬಾಬು ಅವರೊಂದಿಗೆ ಸ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.


#SALMAN KHAN #POOJA HEGDE #LOVE #UMAIRE SANDHU #FILM CRITIC #DATING #JAGAPATHIBABU #VICTORY VENKATESH #KISHI KA BHAI KISHI KA JAAN




