ಬೆಂಗಳೂರು : ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ನಂತರ ಅನಿರುದ್ಧಗೆ ಎರಡು ವರ್ಷಗಳು ಧಾರಾವಾಹಿ ಮಾಡುವ ಅವಕಾಶ ನೀಡದಂತೆ ಕನ್ನಡ ಕಿರುತೆರೆ ನಿರ್ಮಾಪಕ ಸಂಘದಿಂದ ಮನವಿ ಮಾಡಿದ್ದರು ಸಹ, ಅನಿರುಧ್ ನಿನ್ನೆಯಷ್ಟೇ ಹೊಸ ಸೀರಿಯಲ್ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇದಕ್ಕೆ ನಿರ್ಮಾಪರ ಸಂಘ ಆಕ್ರೋಶ ವ್ಯಕ್ತಪಡಿಸಿದೆ..

ಖಾಸಗಿ ವಾಹಿನಿಗಾಗಿ ‘ಸೂರ್ಯವಂಶ’ ಹೆಸರಿನಲ್ಲಿ ಧಾರಾವಾಹಿ ಮಾಡುತ್ತಿರುವುದಾಗಿ ಅನಿರುಧ್ ಹೇಳಿದ್ದಾರೆ. ಆದರೆ, ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದರಿಂದ ನಿರ್ಮಾಪಕರ ಸಂಘದಿಂದ ಅವರಿಗೆ ಯಾವುದೇ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಬಾರದು ಎಂದು ಕೋರಿದ್ದರು. ಅದರ ಮಧ್ಯೆಯೇ ಹೊಸ ಧಾರವಾಹಿಯನ್ನು ಘೋಷಣೆ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಈ ಹಿಂದೆ ಅವರು ಸೀರಿಯಲ್ ಮಾಡುವ ಸಂದರ್ಭದಲ್ಲಿ ಅನಿರುಧ್ ಕಿರಿಕ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಧಾರವಾಹಿ ಕ್ಷೇತ್ರದಿಂದ ಕಿಕ್ ಔಟ್ ಮಾಡಬೇಕು ಅಂತ ಸಲಹೆ ನೀಡಲಾಗಿತ್ತು. ಯಾರೂ ಸಹ ಎರಡು ವರ್ಷ ಅವರನ್ನು ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಬಾರದು ಅಂತ ಹೇಳಿದ್ದರು. ಆದರೆ, ಇದು ನಡೆದ ಕೆಲವೇ ತಿಂಗಳಲ್ಲೇ ಅನಿರುದ್ಧ ಹೊಸ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಿದೆ.

ಜೊತೆ ಜೊತೆಯಲ್ಲಿ ಸೀರಿಯಲ್ ನಿಂದ ಔಟ್ ಆದ ಮೇಲೆ ಅನಿರುಧ್ ಮುಂದೇನು ಮಾಡ್ತಾರೆ ಅನ್ನುವ ಕುತೂಹಲ ಎಲ್ಲರಿಗೂ ಇತ್ತು. ಮತ್ತೊಂದು ಕಡೆ ಸೀರಿಯಲ್ ರಂಗದಿಂದ ಎರಡು ವರ್ಷ ಹೊರಗಿರಬೇಕಂತ ನಿರ್ಮಾಪಕರ ಸಂಘದಿಂದ ಅಲಿಖಿತ ಆದೇಶ ಬೇರೆ ಬಂದಿತ್ತು. ಯಾರು ಅವರಿಗೆ ಕೆಲಸ ಕೊಡ್ತಾರೆ ಅನ್ನುವ ಆತಂಕವೂ ಇತ್ತು. ಆದರೆ, ಈಗ ಎಲ್ಲವೂ ತಲೆ ಕೆಳಗಾಗಿದ್ದು, ಚಿತ್ರಣವೇ ಬದಲಾಗಿದೆ.
ಖಾಸಗಿ ವಾಹಿನಿಯು ಕಿರುತೆರೆ ನಿರ್ಮಾಪಕ ಸಂಘದಿಂದ ಹೊರಡಿಸಿದ್ದ ಠರಾವು ಅನ್ನು ಕೇರ್ ಮಾಡದೇ, ಸೂರ್ಯವಂಶ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವರೇ ಸ್ಪಷ್ಟಪಡಿಸಿದ್ದು, ನಾನು ನಿಮ್ಮೊಂದಿಗೆ ಖುಷಿಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದು, ಉದಯ ವಾಹಿನಿ ಯಲ್ಲಿ ಬರಲಿರುವ ಎಸ್. ನಾರಾಯಣ್ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕಿದೆ ಎಂದಿದ್ದಾರೆ.

ನಿರ್ಮಾಪಕ ಸಂಘದಿಂದ ತಡೆಗೆ ಆಗ್ರಹ : ನಾರಾಯಣ್ ನಿರ್ದೇಶನದ ಸೂರ್ಯವಂಶ ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಧಾರಾವಾಹಿಯನ್ನು ತಡೆಯಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದಾರೆ. ಎರಡು ವರ್ಷ ಕಿರುತೆರೆ ರಂಗದಿಂದ ನಿಷೇಧ ಹೇರಿ ಅಲಿಖಿತವಾಗಿ ಆದೇಶಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ನಾರಾಯಣ್, ಅನಿರುದ್ದ ಅವರ ಬಗ್ಗೆ ಬಹಳಷ್ಟು ಆರೋಪಗಳನ್ನ ಮಾಡಿದ್ದಾರೆ.ಆ ಆರೋಪಗಳು ಸುಳ್ಳಾಗಲಿ ಅಂತ ನಾನು ಆಶಿಸುತ್ತೇನೆ. ಅನಿರುದ್ದ ಅವರು ವಿಷ್ಣುವರ್ಧನ್ ಅಳಿಯ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಲ್ಲ ಅನ್ನುವುದು ನನ್ನ ನಂಬಿಕೆಯಿದೆ ಎಂದಿದ್ದಾರೆ.
@snarayan #director @anirudh @jothejotheyalli @suryavamsh #producers association #banned #seriel acting #small screen #




