RASHMIKA ON ‘KANTARA’ FILM: ಮೌನ ಮುರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ: ಕಾಂತಾರಾ ಸಿನಿಮಾ ಬಗ್ಗೆ ಹೇಳಿದ್ದೇನು ಗೊತ್ತಾ?

ಹೈದ್ರಾಬಾದ್: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿರ್ತಾರೆ. ಕಿರಿಕ್ ಪಾರ್ಟಿ ಬೆಡಗಿಯನ್ನು ಗಾಸಿಪ್ ಗಳು ನೆರಳಿನಂತೆ ಹಿಂಬಾಲಿಸ್ತಾನೆ ಇರ್ತಾವೆ.
ಹಾಗೆಯೇ ಇತ್ತೀಚೆಗಷ್ಟೇ ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರ ಫಿಲಂ ನೋಡಿದ್ರಾ ಅಂತಾ ರಶ್ಮಿಕಾರನ್ನು ಕೇಳಲಾಗಿತ್ತು. ಅದಕ್ಕೆ ಇಲ್ಲಾ ಅಂತಾ ಹೇಳಿದ್ರು, ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಅಷ್ಟೇ ಅಲ್ಲದೇ ತಮ್ಮನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಿದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೇ ಉದ್ಧಟತನ ಪ್ರದರ್ಶನ ತೋರಿದ್ದರು. ಅವರನ್ನು ಸಿನಿಮಾ ಇಂಡಸ್ಟ್ರಿಯಿಂದಲೇ ಬ್ಯಾನ್ ಮಾಡಬೇಕು ಎಂದು ಅನೇಕರ ನಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೇ ವಿಚಾರವಾಗಿ ಮೊದಲ ಬಾರಿಗೆ ರಶ್ಮಿಕಾ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ. ಹೈದ್ರಾಬಾದ್ ನಲ್ಲಿ ನಡೆದ ಸಭೆಯೊಂದರಲ್ಲಿ ಕಾಂತಾರಾ ಸಿನಿಮಾ ನೋಡಿಲ್ಲ ಎನ್ನುವ ಟ್ರೋಲ್ ಬಗ್ಗೆ ಉತ್ತರಿಸುವಂತೆ ಕೇಳಲಾಯ್ತು.

ಇದಕ್ಕೆ ಉತ್ತರಿಸಿದ ರಶ್ಮಿಕಾ ನಾನು ಕಾಂತಾರಾ ಸಿನಿಮಾ ನೋಡಿದ್ದೇನೆ ಮತ್ತು ಚಿತ್ರತಂಡಕ್ಕೆ ಸಂದೇಶ ಕೂಡ ಕಳುಹಿಸಿದ್ದೇನೆ. ಸಿನಿಮಾ ತಂಡವು ಕೂಡ ಪ್ರೀತಿಯಿಂದ ಧನ್ಯವಾದ ತಿಳಿಸಿದೆ ಎಂದು ಹೇಳಿದ್ದಾರೆ.

@kantara @rashmika mandanna @kirik party #thanks #reaction

More News