ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಗೆ ಪ್ರೇಮ : ವಯಸ್ಸಿನ ಅಂತರ ಮೀರಿದ ಮದುವೆ

ಬಿಹಾರ- ಪ್ರೀತಿ ಅನ್ನೋದೆ ಹಾಗೆ ಯಾರ ಮೇಲೆ ಹೇಗೆ ಲವ್ ಆಗತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲಾ.ನಿಮಗೆ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಜೊತೆ ಜೊತೆಯಲಿ ಸೀರಿಯಲ್ ಬಗ್ಗೆ ಗೊತ್ತಿದೆ ಅಲ್ವಾ.

ಈ ಧಾರವಾಹಿಯಲ್ಲಿ ತಮಗಿಂತ 25 ವರ್ಷ ದೊಡ್ಡವರಾಗಿರೋ ಹೀರೋವನ್ನು ಹೀರೋಯಿನ್ ಮದುವೆಯಾಗೋ ಕಥೆ..ಅದೇ ರೀತಿ ಬಿಹಾರದಲ್ಲಿ ಸೇಮ್ ಟೂ ಸೇಮ್ ಇನ್ಸಿಡೆಂಟ್ ನಡೆದಿದೆ. ಆದ್ರೆ ಇಲ್ಲಿ ಸ್ಚೋರಿ ಸ್ವಲ್ಪ ಚೇಂಜ್ ಇದೆ ಸ್ಟುಡೆಂಟ್ ಒಬ್ಬಳು ಇಷ್ಟಪಟ್ಟು ತಮಗಿಂತ 22 ದೊಡ್ಡವರಾದ ಶಿಕ್ಷಕರನ್ನೇ ಮದುವೆಯಾಗಿದ್ದಾಳೆ.

ಹೌದು ಬಿಹಾರದ ಸಮಸ್ತಿಪುರದಲ್ಲಿ ಶ್ವೇತಾ ಕುಮಾರಿ ಅನ್ನೋ 20ವರ್ಷದ ವಿದ್ಯಾರ್ಥಿನಿ ಇಂಗ್ಲೀಟ್ ಟೀಚಿಂಗ್ ಗಾಗಿ ಸಂಗೀತ್ ಕುಮಾರ್ ಬಳಿ ಟ್ಯೂಷನ್ ಗೆ ಹೋಗುತ್ತಿದ್ದಳು.. ಇವರಿಬ್ಬರ ನಡುವಿನ ಶಿಕ್ಷಕ- ವಿದ್ಯಾರ್ಥಿನಿ ಅನ್ನೋ ಬಂಧ ದಿನ ಕಳೆದಂತೆ ಪ್ರೇಮಿಗಳಾಗಿ ಬದಲಾಗಿದೆ.

ಇಬ್ಬರು ಪರಸ್ಪರ ಒಪ್ಪಿ ಸಪ್ತಪದಿ ತುಳಿಯೋ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತ್ ಕುಮಾರ್ ಗೆ 42 ವರ್ಷ ವಯಸ್ಸಾಗಿದ್ದು, ಶ್ವೇತಾಕುಮಾರಿಗಿಂತ 22ವರ್ಷ ದೊಡ್ಡವರಾಗಿದ್ದಾರೆ ಅನ್ನೋದೆ ಈ ಮದುವೆಯ ಸ್ಪೇಷಾಲಿಟಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ನವ-ವಧುವರಿಗೆ ನೆಟ್ಟಿಗರು ಶುಭಕೋರಿದ್ದಾರೆ.

More News