ಬಾಗಲಕೋಟೆ :ಡಿ.13: ದೆಹಲಿಯ ಶ್ರದ್ದಾ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಪ್ರಿಯತಮ ಫ್ರಿಡ್ಜ್ ನಲ್ಲಿ ಇಟ್ಟಿದ್ದ. ಅದೇ ಮಾದರಿಯಲ್ಲಿಯೇ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದ ಕೊಲೆ ಪ್ರಕರಣ ರಾಜ್ಯದ ಜನರಿಗೆ ಶಾಕ್ ನೀಡಿದೆ. ಜನ್ಮದಾತ ತಂದೆಯನ್ನೇ ಮಗನ್ನೇ ಭೀಬತ್ಸವಾಗಿ ಹತ್ಯೆ ಮಾಡಿದ್ದಾನೆ. ಅಪ್ಪನ ಕೊಲೆ ಮಾಡಿದ ಮಗ ದೇಹವನ್ನು 30 ಪೀಸ್ ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ. ಮುಧೋಳ ನಗರದಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾದ ವ್ಯಕ್ತಿಯನ್ನು 54 ವರ್ಷದ ಪರುಶುರಾಮ ಕುಳಲಿ ಎಂದು ಗುರುತಿಸಲಾಗಿದೆ.

ಕಳೆದ ಮಂಗಳವಾರ ರಾತ್ರಿ 12ಗಂಟೆ ಸುಮಾರಿಗೆ 20 ವರ್ಷದ ಮಗ ವಿಠ್ಠಲ ಕುಳಲಿ ರಾಡ್ ನಿಂದ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಮುಧೋಳ ಹೊರವಲಯದಲ್ಲಿರೋ ಮಂಟೂರು ಬೈಪಾಸ್ ಹತ್ತಿರದ ತಮ್ಮ ಹೊಲದಲ್ಲಿರೋ ಕೊಳವೆಬಾವಿಗೆ ಹಾಕಿದ್ದಾನೆ. ಕೊಳವೆಬಾವಿಯಲ್ಲಿ ಮೃತದೇಹ ಇಳಿಯದೇ ಹೋದಾಗ ಕೊಡಲಿಯಿಂದ ಮೃತದೇಹವನ್ನು 30 ಪೀಸ್ ಮಾಡಿ ಕೊಳವೆಬಾವಿಗೆ ಹಾಕಿದ್ದಾನೆ. ತನಿಖೆವೇಳೆ ಕೊಲೆಯ ರಹಸ್ಯಬಯಲಾಗಿದ್ದು, ಪೊಲೀಸರು ಜೆಸಿಬಿ ಸಹಾಯದಿಂದ ಕಳೆಬರಹವನ್ನು ಹೊರತೆಗೆದಿದ್ದಾರೆ. ನಿತ್ಯ ಕುಡಿದು ಬಂದು ತಂದೆ ಜೊತೆ ಮಗ ಜಗಳ ಆಡುತ್ತಿದ್ದನಂತೆ. ಕುಡಿದ ಮತ್ತಿನಲ್ಲಿ ತಂದೆ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.ಕೊಲೆ ಆರೋಪಿ ವಿಠ್ಠಲ ಕುಳಲಿನ್ನು ಮುಧೋಳ ಪೊಲೀಸರು ಬಂಧಿಸಿದ್ದು. ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.




