Zika Virus Worry for Karnataka : ಕರ್ನಾಟಕಕ್ಕೆ ಝೀಕಾ ವೈರಸ್ ಆತಂಕ: ಇನ್ನೂ ಪತ್ತೆಯಾಗಿಲ್ಲ ಬಾಲಕಿ ಟ್ರ್ಯಾವಲ್ ಹಿಸ್ಟರಿ..!

ರಾಯಚೂರು: ಡಿ.13 : ಚೀನಾದ ವುಹಾನ್ ನಲ್ಲಿ ಪತ್ತೆಯಾದ ವೈರಾಣುವೊಂದು ಇಡೀ ಜಗತ್ತನ್ನೇ ನಲುಗಿಸಿಬಿಟ್ಟಿತ್ತು.. ಕೊರೊನಾ ಸಂಕಷ್ಟದಿಂದ ಈಗ ತಾನೇ ಚೇತರಿಸಿಕೊಳ್ತಿರುವ ಕರ್ನಾಟಕಕ್ಕೆ ಈಗ ಝೀಕಾ ಸೋಂಕು ಭೀತಿ ಶುರುವಾಗಿದೆ..

ನಿನ್ನೆಯಷ್ಟೆ ರಾಯಚೂರು ಜಿಲ್ಲೆಯಲ್ಲಿ 5 ವರ್ಷದ ಬಾಲಕಿಗೆ ಝೀಕಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆಯನ್ನೇನೋ ನೀಡಲಾಗ್ತಿದೆ. ಆದರೆ ಬಾಲಕಿ ಸೋಂಕು ಪತ್ತೆ ಆಗುವ ಮೊದಲು ಎಲ್ಲೆಲ್ಲಿ ಓಡಾಡಿದ್ಲು, ಯಾರ ಭೇಟಿ ಮಾಡಿದ್ಲು..?ಕಳೆದ 15 ದಿನಗಳಿಂದ ಆರೋಗ್ಯ ಕೈ ಕೊಟ್ಟಿದೆ ಎಂದು ವರದಿಯಾಗಿದೆ.. ಹಾಗಿದ್ರೆ ಬಾಲಕಿ ಕಳೆದ 20 ದಿನಗಳಿಂದ ಯಾರ ಯಾರನ್ನ ಭೇಟಿ ಮಾಡಿದ್ದಾಳೆ.. ಎಂಬ ಟ್ರ್ಯಾವಲ್ ಹಿಸ್ಟರಿ ಇನ್ನೂ ಸಿಗದೇ ಇದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕಳೆದ 15 ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದ ಬಾಲಕಿಗೆ ನ.13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಬಳಿಕ ಡೆಂಘೀ ಜ್ವರ ದೃಢ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್‌ ಮಾಡಿ ನ.15 ರಿಂದ 18 ವರೆಗೆ ಚಿಕಿತ್ಸೆ ನೀಡಲಾಗಿತ್ತು. ವಿಜಯನಗರದ ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಲ್ಯಾಬ್‌ಗೆ ಸ್ಯಾಂಪಲ್ ಕಳಿಸಿದ್ದರು. ಪುಣೆಯ ವೈರಾಲಜಿ ಲ್ಯಾಬ್‌ನಿಂದ ಪಾಸಿಟಿವ್ ರಿಪೋರ್ಟ್‌ ಬಂದಿದೆ. ಡಿಸೆಂಬರ್ 9ರಂದು ಬಾಲಕಿಗೆ ಝೀಕಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈಅಲರ್ಟ್ ಏನೋ ಆಗಿದೆ. ಆದರೆ ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಬಾಲಕಿ ಟ್ರಾವೆಲ್ ಹಿಸ್ಟರಿ ಪತ್ತೆಗೆ ಮುಂದಾಗಿದೆ..

ಆದರೆ ಸೋಂಕು ಅಂದಾಜಿಸುವುದು ಅಷ್ಟು ಸುಲಭದ ವಿಚಾರವಲ್ಲ ಅನ್ನೋದನ್ನ ಕೊರೊನಾ ನಮಗೆ ಕಲಿಸಿಕೊಟ್ಟಿದೆ. ಈ ಬಗ್ಗೆ ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ರೆ ಈಗಾಗಲೇ ಒಂದು ಸೋಂಕಿನಿಂದ ಬಳಲಿದ ಜನರ ಮೇಲೆ ಮತ್ತೊಂದು ವೈರಸ್ ಸವಾರಿ ಮಾಡೋದ್ರಲ್ಲಿ ಅನುಮಾನವಿಲ್ಲ..

ಸೌಮ್ಯ ಜ್ವರ, ದದ್ದುಗಳು, ಕಾಂಜಂಕ್ಟಿವಿಟಿಸ್‌, ಸ್ನಾಯು- ಕೀಲು ನೋವು, ಅಸ್ವಸ್ಥತೆ ಅಥವಾ ತಲೆನೋವುಗೆ ಕಾರಣವಾಗುವ ಝೀಕಾ ವೈರಸ್ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದ್ರೆ, ಉಗಾಂಡಾದ ಕೋತಿಯಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾಗಿದೆ. ನಂತರ 2007ರಲ್ಲಿ ಮೈಕ್ರೋನೇಷಿಯಾದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕವಾಗಿ ಹರಡಿ ಆತಂಕ ಉಂಟು ಮಾಡಿತ್ತು. 2015ರಲ್ಲಿ ಲ್ಯಾಟಿನ್‌ ಅಮೆರಿಕದಲ್ಲಿ, ವಿಶೇಷವಾಗಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡಿತು.

More News