ನವದೆಹಲಿ : ಡಿ.13 : ಅರುಣಾಚಲ ಪ್ರದೇಶದ ಎಲ್ ಎಸಿಯಲ್ಲಿ ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿತ್ತು. ಈ ಬಗ್ಗೆ ಸಂಸತ್ ನಲ್ಲಿ ಸ್ಪಷ್ಟನೆ ನೀಡಿರೋ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಘಟನೆಯಲ್ಲಿ ನಮ್ಮ ಯಾವುದೇ ಓರ್ವ ಸೈನಿಕ ಕೂಡ ಹುತಾತ್ಮರಾಗಿಲ್ಲ. ಕೆಲವು ಸೈನಿಕರು ಗಾಯಗೊಂಡಿದ್ದಾರೆ ಎಂದು ಉತ್ತರ ನೀಡಿದ್ದಾರೆ.
Today, 13th December, Raksha Mantri Shri @rajnathsingh will make a Statement at 12.00 PM in Lok Sabha and at 12.30 PM in Rajya Sabha.
— रक्षा मंत्री कार्यालय/ RMO India (@DefenceMinIndia) December 13, 2022
ಭಾರತೀಯ ಕಮಾಂಡರ್ ಗಳು ಸಮಯೋಚಿತವಾಗಿ ಚೀನಾದ ಕೃತ್ಯವನ್ನು ತಡೆದಿದ್ದಾರೆ ಅಂತಾ ಹೇಳಿದರು. ಚೀನಿ ಸೈನಿಕರು ಎಸ್ ಎಸಿ ನಿಯಮಗಳನ್ನು ಉಲ್ಲಂಘಿಸಿದ್ರೆ ಈ ಬಗ್ಗೆ ನಾವು ರಾಜತಾಂತ್ರಿಕವಾಗಿ ಮಾತನಾಡುತ್ತೇವೆ ಅಂತಾ ತಿಳಿಸಿದರು. ಇನ್ನು ನಮ್ಮ ಪಡೆಗಳು ನಮ್ಮ ಗಡಿಯನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಸಂಪೂರ್ಣವಾಗಿ ಬದ್ಧವಾಗಿವೆ ಅಂತಾ ಹೇಳಿದರು.




