ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಡ್ರಗ್ಸ್ ದಂಧೆ ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂಧ ನೋಟಿಸ್ ಜಾರಿಯಾಗಿದ್ದು, ಡಿಸೆಂಬರ್ 19 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಇನ್ನು ಮನಿ ಲಾಂಡರಿಂಗ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರನ್ನೂ ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆಗೆ ಕರೆಯಲಾಗಿದೆ.
ಪ್ರಕರಣದ ಹಿನ್ನಲೆ ಏನು..?
2017 ರಲ್ಲಿ ತೆಲುಗು ಹಾಗೂ ಟಾಲಿವುಡ್ ನಲ್ಲಿ ಡ್ರಗ್ಸ್ ಸ್ಕ್ಯಾಂಡಲ್ ಪ್ರಕರಣ ಒಂದು ಹೊರ ಬೀಳುತ್ತೆ. ಈ ಪ್ರಕರಣದಲ್ಲಿ ಘಟಾನುಘಟಿ ನಾಯಕರು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸರು ತಳುಕುಹಾಕಿಕೊಳ್ಳುತ್ತೆ.

ಈ ಸಂಬಂಧ ಎಸ್ ಐ ಟಿ ಇನ್ವೆಸ್ಟಿಗೇಷನ್ ಪ್ರಾರಂಭ ಮಾಡಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ 2021 ಸೆಪ್ಟೆಂಬರ್ ತಿಂಗಳಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ನವರನ್ನೂ ಕರೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಜೊತೆಗೆ ಹಲವು ಮಾಹಿತಿ ಪಡೆದುಕೊಂಡಿತ್ತು. ಇದೀಗ ಈ ಡ್ರಗ್ಸ್ ಪ್ರಕರಣವನ್ನ ಇಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಡಿಸೆಂಬರ್ 19 ರಂದು ಡ್ರಗ್ಸ್ ಗೆ ಸಂಬಂಧಿಸಿದ ಬಗ್ಗೆ ಒಂದಷ್ಟು ವಿಚಾರ ಕಲೆ ಹಾಕುವುದರ ಜೊತೆಗೆ ಡ್ರಗ್ಸ್ ನಿಂದ ಬಂದ ಹಣವನ್ನ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ವಿಚಾರ ಇಡಿ ಅಧಿಕಾರಿಗಳಿಗೆ ಸಿಕ್ಕಿದೆ. ಜೊತೆಗೆ ಮತ್ತಷ್ಟು ಮನಿ ಲ್ಯಾಂಡರಿಂಗ್ ಆದ ಕುರಿತು ಅಧಿಕಾರಿಗಳಿಗೆ ಹಿಂಟ್ ಸಿಕ್ಕಿದೆ. ಜೊತೆಗೆ ಈ ಪ್ರಕರಣದಲ್ಲಿ ಸಿನಿಮಾ ನಿರ್ದೇಶಕರು, ದೊಡ್ಡ ದೊಡ್ಡ ಇನ್ವೆಸ್ಟರ್ಸ್, ನಟ, ನಟಿಯರು ಸಹ ಭಾಗಿಯಾದ ಬಗ್ಗೆ ಸುಳಿವು ಸಿಕ್ಕಿದ್ದು, ಇನ್ವೆಸ್ಟಿಗೇಷನ್ ಚುರುಕುಗೊಂಡಿದೆ.

ವಿಚಾರಣೆಯಲ್ಲಿ ಸ್ಯಾಂಡಲ್ ವುಡ್ ನ ಡ್ರಗ್ಸ್ ಎಳೆಯೂ ಸಿಗುವ ಸಾಧ್ಯತೆಗಳಿವೆ. ಯಾವಾಗ ಟಾಲಿವುಡ್ ನಲ್ಲಿ ಡ್ರಗ್ಸ್ ದಂಧೆ ವಿಚಾರ ಸಂಚಲನ ಸೃಷ್ಟಿಸಿತ್ತು. ಅದೇ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿಯೂ ಹೆಸರು ಕೇಳಿ ಬಂದು ಕೆಲವರು ಜೈಲುಪಾಲಾದರೆ, ಮತ್ತಷ್ಟು ಮಂದಿ ವಿಚಾರಣೆ ಎದುರಿಸಿದ್ದರು. ಡಿಸೆಂಬರ್ ನ ವಿಚಾರಣೆಯಲ್ಲಿ ಸ್ಯಾಂಡಲ್ ವುಡ್ ನ ಎಳೆಯೂ ಸಹ ಸಿಗುವ ಸಾಧ್ಯತೆ ಇದೆ. ಯಾಕೆಂದರೆ ಡ್ರಗ್ಸ್ ಪಾರ್ಟಿ ಆಯೋಜನೆಯಾಗಿದ್ದೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ..
ಬೆಂಗಳೂರಿನ ಗೋವಿಂದ ಪುರ ಠಾಣಾ ವ್ಯಾಪ್ತಿಯ ಕಾರ್ಯಕ್ರಮಕ್ಕೆ ನಟಿ ರಾಕುಲ್ ಪ್ರೀತ್ ಭಾಗಿ ಆಗ್ತಾರೆ. ಅಷ್ಟೇ ಅಲ್ಲ ಡ್ರಗ್ಸ್ ಪಾರ್ಟಿ ಜೋರಾಗಿಯೇ ನಡೆದಿದೆ ಎಂಬ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಠಾಣೆಯಲ್ಲಿ ಕೇಸ್ ರಿಜಿಸ್ಟರ್ ಆಗಿದೆ. ವಿಚಾರಣೆ ವೇಳೆ ಈ ಘಟನೆಯೂ ಸಹ ಕೇಳಲಿದ್ದು, ಸ್ಯಾಂಡಲ್ ವುಡ್ ನ ನಟ, ನಟಿಯರ ಮತ್ತಷ್ಟು ಹೆಸರು ಹೊರ ಬೀಳುವ ಸಾಧ್ಯತೆ ಇದೆ.
@RAKULPREETSINGH @PILOTROHITREDDY #ACTRESS #ED #SANDLWOOD #REVPARTY #DRUG PARTY




