ಹೈದ್ರಾಬಾದ್ : ಡಿ.17 : ತೆಲಂಗಾಣ- ಎತ್ತ ಕಣ್ಣು ಹಾಯಿಸಿದ್ರು ಬರೀ ಬೂದಿ ಬೂದಿ…ಅದೇ ಬೂದಿಯಲ್ಲಿ ಸಜೀವ ದಹನವಾಗಿರೋ 6ಮಂದಿಯ ಕಳೆ ಬರಹ…ಅಯ್ಯೋ ಏನ್ ಆಯ್ತೋ ಅಂತಾ ಗಾಬರಿಯಿಂದ ನೋಡುತ್ತಿರೋ ಜನರು…ಸ್ಥಳದಲ್ಲಿ ಅಧಿಕಾರಿಗಳ ದಂಡು, ಪರಿಶೀಲನೆ ಅಷ್ಟಕ್ಕೂ ಈ ಭೀಬತ್ಸ ಘಟನೆ ಕಂಡು ಬಂದಿದ್ದು. ತೆಲಂಗಾಣದ ಮಂದಮರ್ರಿ ಮಂಡಲದ ಗುಡಿಪಟ್ಟಿ ವೆಂಕಟಾಪುರದಲ್ಲಿ ಹೌದು ಮಧ್ಯರಾತ್ರಿಯಲ್ಲಿ ಮನೆಯೊಂದು ಧಗಧಗನೇ ಹೊತ್ತಿ ಉರಿದಿದೆ.

ಪರಿಣಾಮವಾಗಿ ಮನೆಯಲ್ಲಿ ಮಲಗಿದ್ದ 6ಮಂದಿ ಸಜೀವದಹನವಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಈ ಭೀಕರ ಅಗ್ನಿ ದುರಂತ ಸಂಭಸಿದೆ. ಮನೆ ಮಂದಿ ನಿದ್ದೆಯಲ್ಲಿದ್ದ ಪರಿಣಾಮವಾಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಶಿವಯ್ಯ, ಅವರ ಪತ್ನಿ ಪದ್ಮಾ, ಮಕ್ಕಳಾದ ಪ್ರೀತಿ(4) ಮತ್ತು ಹಿಮಾ ಬಿಂದು (2) ಕಾಂತಯ್ಯ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೇ ಅಥವಾ ಬೇರೆ ಇನ್ಸಾವ ಕಾರಣ ಇದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ದೇಹಗಳನ್ನು ಗುರುತಿಸಿದ ನಂತರ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ರಾತ್ರಿ ಮಲಗಿದವರು ಬೆಳಗಾಗೋದ್ರೊಳಗೆ ಚಿರನಿದ್ರೆಗೆ ಜಾರಿದ್ದು ದುರಂತವೇ ಸರಿ.




