ಬೆಂಗಳೂರು: ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಯ ರಾಜಕೀಯ ಅಜ್ಞಾತವಾಸ ಶೀಘ್ರದಲ್ಲಿ ಅಂತ್ಯವಾಗಲಿದೆ. ಕಳೆದ 10 ವರ್ಷಗಳಿಂದ ಪೊಲಿಟಿಕ್ಸ್ ನಿಂದ ದೂರ ಉಳಿದಿದ್ದ ರೆಡ್ಡಾಗಾರು ಮರಳಿ ರಾಜಕೀಯ ಅಖಾಡ ಪ್ರವೇಶ ಮಾಡಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
ಆದ್ರೆ ಅವರು ಬಿಜೆಪಿ ಪಕ್ಷದಿಂದಲೇ ಮತ್ತೊಮ್ಮೆ ತಮ್ಮ ಕೆರಿಯರ್ ಆರಂಭ ಮಾಡ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಅನ್ನೋದೆ ಸದ್ಯದ ಕುತೂಹಲ. ಆದರೆ ಈ ಸಂಬಂಧ ಜನಾರ್ಧನ್ ರೆಡ್ಡಿ ಅವರು ತಮ್ಮ ಯೋಚನೆಯನ್ನು ಇದುವರೆಗೂ ಬಿಟ್ಟುಕೊಟ್ಟಲ್ಲ.
ಕೇವಲ ಗಂಗಾವತಿ ನನ್ನ ಮನೆ ಇದ್ದ ಹಾಗೆ. ಅದನ್ನೇ ನಾನು ಆಯ್ಕೆ ಮಾಡುತ್ತಿದ್ದೇನೆ. ಮುಂಬರುವ ವಿಧಾನ ಸಭಾ ಚುನಾವಣೆಗೆ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬ ಗುಟ್ಟನ್ನು ರಟ್ಟು ಮಾಡಿಲ್ಲ.

ರೆಡ್ಡಿಗಾರು ಆಪ್ತರು ಹೇಳೋ ಪ್ರಕಾರ ಅವ್ರು ಹೊಸ ಪಕ್ಷ ಕಟ್ಟುತ್ತಾರಂತೆ. ಈಗ ಜನಾರ್ಧನ ರೆಡ್ಡಿಯವರ ಒಂದು ವಾರದ ಟೆಂಪಲ್ ರನ್ ಕಾರ್ಯಕ್ರಮಗಳನ್ನು ನೋಡಿದ್ರೆ ಹೊಸ ಪಕ್ಷ ಕಟ್ಟುತ್ತಾರೆ ಅನ್ನೋದಕ್ಕೆ ಬಲಬಂದತಾಗಿದೆ. ಅವರು ಡಿಸೆಂಬರ್ 25ಕ್ಕೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿರುವುದನ್ನು ನೋಡಿದರೆ, ಅಂದೇ ಹೊಸ ಪಾರ್ಟಿಯ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವರ ಕುಚುಕು ಗೆಳೆಯ ಶ್ರೀರಾಮುಲು ಜನಾರ್ಧನ ರೆಡ್ಡಿ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರಾ ಎಂದು ಕಾದುನೋಡಬೇಕಾಗಿದೆ.

ಇನ್ನು ಜನಾರ್ಧನ ರೆಡ್ಡಿಯವರ ವಾರದ ಟೆಂಪಲ್ ರನ್ ಪ್ರೋಗ್ರಾಂ ಹೀಗಿದೆ.
ಡಿಸೆಂಬರ್ 19ರಂದು ಬೆಳಗ್ಗೆ ಶ್ರೀ ಸಿದ್ದಗಂಗಾ ಮಠ ತುಮಕೂರು
ಡಿಸೆಂಬರ್ 19ರಂದು ಸಂಜೆ ಶ್ರೀ ಸಿದ್ಧಾರೂಢ ಮಠ ಹುಬ್ಬಳ್ಳಿ
ಡಿಸೆಂಬರ್ 20ಕ್ಕೆ ತೋಂಟದಾರ್ಯ ಶ್ರೀಗಳ ಗದ್ದುಗೆ ಹಾಗೂ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ ಗದಗ
ಡಿಸೆಂಬರ್ 21 ರಂದು ಮಸ್ಕಿಯಲ್ಲಿ ಪ್ರಮುಖ ಮುಖಂಡರ ಭೇಟಿ
ಡಿಸೆಂಬರ್ 22ರಂದು ಗಂಗಾವತಿಯಲ್ಲಿ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಮುಖಂಡರ ಭೇಟಿ
ಡಿಸೆಂಬರ್ 25ರಂದು ಪತ್ರಿಕಾಗೋಷ್ಠಿ- ಪಾರಿಜಾತ ಅಪಾರ್ಟ್ ಮೆಂಟ್, ಚಾಲುಕ್ಯ ಸರ್ಕಲ್ ಬೆಂಗಳೂರು.
#GALI JANARDHAN REDDY #NEWPARTY #BJP #TEMPLE RUN #SIDDAGANGA MAT #GANGAWATHI #SIDDARUDA MATT #TONTADARYA MATT #DURGADEVI JATRA




