ಬೆಂಗಳೂರು: ಬಿಜೆಪಿ ಶಾಸಕ ಸಿ.ಟಿ.ರವಿಗೆ ಬಿಜೆಪಿ ಕಾರ್ಯಕರ್ತರೇ ಕೌಂಟರ್ ನೀಡಿದ ಪ್ರಸಂಗ ಇಂದು ಬಿಜೆಪಿ ಸಮಾವೇಶದಲ್ಲಿ ನಡೆದಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಸಿ.ಟಿ.ರವಿ ಭಾಷಣ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಗಿ ಜೈಕಾರ ಹಾಕಿಸಿದರು. ಕೇವಲ ಮೋದಿ ಅವರಿಗೆ ಮಾತ್ರ ಜೈಕಾರ ಹಾಕಿಸಿ ಭಾಷಣ ಆರಂಭಿಸಲು ಮುಂದಾಗಿದ್ದರು.

ಈ ವೇಳೆ ವೇದಿಕೆಯಲ್ಲಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಜೈಕಾರ ಹಾಕಿಸಲಿಲ್ಲ. ಇದನ್ನು ಅರಿತ ಬಿಎಸ್ ವೈ ಫ್ಸಾನ್ಸ್ ಯಡಿಯೂರಪ್ಪ ಅವರಿಗೆ ಜೈಕಾರ ಕೂಗಿದ್ರು. ಆ ಮೂಲಕ ಯಡಿಯೂರಪ್ಪಗೆ ಜೈಕಾರ ಹಾಕಿಸದ ಸಿಟಿ ರವಿಗೆ ಕಾರ್ಯಕರ್ತರೇ ಟಕ್ಕರ್ ನೀಡಿದರು.

ಕಾರ್ಯಕರ್ತರ ಟಕ್ಕರ್ ಗೆ ಪೆಚ್ಚಾಗಿ ನಗುತ್ತಾ ಸುಮ್ಮನಾದ ಸಿ.ಟಿ. ರವಿ, ನಂತರ ಭಾಷಣ ಆರಂಭಸಿದರು,

ಆದರೆ, ಅವರು ಆರಂಭಕ್ಕೂ ಮುನ್ನಾ ತಾಕತ್ತು ಇದೆಯಾ ಎಂದು ಪ್ರಶ್ನಿಸಿರುವುದು ಅನೇಕ ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿತ್ತು.
#CTRAVI #BS YEDIYURAPPA #MODI #PRIME MINISTER #MEETING #BLSANTOSH #MLA




