ನವದೆಹಲಿ; ಡಿ.19: ಶಾರುಖ್ ಖಾನ್ ನಟಿಸಿರುವ ಪಠಾಣ್ ಸಿನಿಮಾದ ಬೇಷರಮ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದ ದೃಶ್ಯವು ಸಾಕಷ್ಟು ಚರ್ಚೆಗೆ ಕಾರಣವಾಗಿ ವಿವಾದದ ಅಲೆ ಎಬ್ಬಿಸಿತ್ತು. ಆದರೆ, ಇದೀಗ ಈ ವಿವಾದಕ್ಕೆ ರಾಜಕೀಯ ಬಣ್ಣ ಅಂಟಿಕೊಂಡಿದೆ.
ಕೆಲವು ಹಿಂದೂಪರ ಸಂಘಟನೆಗಳು, ಕಾರ್ಯಕರ್ತರು ಸಿನಿಮಾ ಅನ್ನು ಬಾಯ್ಕಟ್ ಮಾಡಬೇಕಂತ ಒತ್ತಾಯ ಹಾಕಿದ್ದರು. ಅತ್ತ ಮುಸ್ಲಿಂ ಸಂಘಟನೆಗಳೂ ಸಹ ಹಸಿರು ಬಣ್ಣದ ಬಿಕಿನಿ ತೊಟ್ಟಿದ್ದನ್ನ ವಿರೋಧಿಸುತ್ತಿವೆ. ಅಲ್ಲದೇ ನಟಿಯನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದರು. ಪಠಾಣ್ ಸಿನಿಮಾ ಕುರಿತ ಟಾಕ್ ವಾರ್ ಶುರುವಾದ ಬೆನ್ನಲ್ಲೇ ಮತ್ತೊಂದು ಬಣ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಮಾಡಲಿಂಗ್ ಡೇಸ್ ನ ವಿಡಿಯೋ ಪೋಸ್ಟ್ ಮಾಡುವ ಮೂಲಕ ಹಿಂದೂಪರ ಸಂಘಟನೆಗಳಿಗೆ ಟಾಂಗ್ ನೀಡ್ತಿವೆ.

ಬಿಜೆಪಿಯ ಅನೇಕ ರಾಜ್ಯಗಳಲ್ಲಿನ ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರು ಪಠಾಣ್ ಸಿನಿಮಾದ ಬೇಷರಮ್ ಹಾಡಿನ ಬಗ್ಗೆ ಟೀಕೆಗಳು ಮಾಡಿಕೊಂಡು ಬಂದಿದ್ದಾರೆ. ಶಾರುಖ್ ಖಾನ್ ಮತ್ತು ತಂಡವನ್ನು ತರಾಟೆಗೆ ತಗೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ 1998 ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ಚಿಕ್ಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ಇರಾನಿ ಅವರ ವಿಡಿಯೋ ವೈರಲ್ ಆಗ್ತಿದೆ.
ಪಠಾಣ್ ಸಿನಿಮಾದ ಹಾಡಿನ ಬಗ್ಗೆಯಷ್ಟೇ ವಿವಾದ ಎದ್ದಿರುವ ನಡುವೆ, ಇದೀಗ ಟೈಟಲ್ ಬಗೆಗೂ ಅಪಸ್ಪರ ಎದ್ದಿದ್ದು, ಈ ಟೈಟಲ್ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದನ್ನು ಬದಲು ಮಾಡಬೇಕಂತ ಸಹ ಚರ್ಚೆಗಳು ನಡೆಯುತ್ತಿವೆ.
ಇದೀಗ ಪಠಾಣ್ ಸಿನಿಮಾ ಎರಡು ಧರ್ಮಗಳ ನಡುವಿನ ಜನರ ಭಾವನೆಗಳ ನಡುವೆ ಕದನ ಶುರುವಾಗಿದೆ. ಅಲ್ಲದೆ, ಈ ವಿವಾದವೀಗ ದೇಶಭಕ್ತಿಯನ್ನು ಪ್ರಶ್ನಿಸುವ ಹಂತಕ್ಕೆ ಬಂದು ನಿಂತಿದೆ. ಬೇಕಾಗಿಯೇ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಲು ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಹಲವಾರು ಜನರು ನಟ ಶಾರುಕ್ ಮೇಲೆ ಮುಗಿಬಿದ್ದಿದ್ದಾರೆ. ಮತ್ತೊಂದು ಕಡೆ ಮುಸ್ಲಿಮರು ಪಠಾಣರು ಎಂದರೆ ನಮ್ಮಲ್ಲಿ ಗೌರವದಿಂದ ಬದುಕುವವರು ಎಂದರ್ಥ. ಆದರೆ ಸಿನಿಮಾದಲ್ಲಿ ಅಶ್ಲೀಲವಾಗಿ ತೋರಿಸಿರುವುದು ಸರಿಯಲ್ಲ. ಹೀಗಾಗಿ, ಶೀರ್ಷಿಕೆ ಬದಲಾವಣೆ ಮಾಡಬೇಕಂತ ಆಗ್ರಹಿಸಿದ್ದಾರೆ. ಇದೆಲ್ಲದರ ನಡುವೆ ಟ್ವೀಟ್ ಮಾಡಿರುವ ನಟ ಶಾರುಖ್ ಖಾನ್, ಪಠಾಣ್ ಸಿನಿಮಾ ಸಹ ದೇಶಭಕ್ತಿಯನ್ನೇ ತಿಳಿಸುತ್ತದೆ ಎಂದಿದ್ದಾರೆ.




