ಬೆಂಗಳೂರು : ಬಿಡಿಎ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿನ ನಾನಾ ಇಲಾಖೆಗಳಲ್ಲಿ ನಾನ್ ಕೆಎಎಸ್ ಅಧಿಕಾರಿಗಳದ್ದೇ ದರ್ಬಾರ್, ಈ ಹಿನ್ನೆಲೆಯಲ್ಲಿ ಮತ್ತೆ ಕೆಎಎಸ್ ಮತ್ತು ನಾನ್ ಕೆಎಎಸ್ ಅಧಿಕಾರಿಗಳ ಜಟಾಪಟಿ ತಾರಕಕ್ಕೇರಿದ್ದು, ಈ ಸಂಬಂಧ ಮುಖ್ಯಮಂತ್ರಿ ಮತ್ತು ರಾಜ್ಯ ಮುಖ್ಯಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಲಾಗಿದೆ.
ಕೆಎಎಸ್ ಹುದ್ದೆಗೆ ನಾನ್ ಕೆಎಎಸ್ ಅಧಿಕಾರಿಗಳನ್ನ ಬೇಕಾಬಿಟ್ಟಿಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿದ್ದನ್ನು ಕೆಎಸ್ ಆಫೀಸರ್ಸ್ ಅಸೋಸಿಯೇಷನ್ ಖಂಡಿಸಿದ್ದು, ಇದರಿಂದ ಜಟಾಪಟಿ ಆರಂಭವಾಗಿದೆ.

ಕೆಎಎಸ್ ಅಧಿಕಾರಿಗಳ ಸಂಘಟನೆ ಸಿಎಂಗೆ ಪತ್ರ ಬರೆದಿದ್ದು, ಕೆಎಎಸ್ ಅಧಿಕಾರಿಗಳಿಗೆ ಮೀಸಲಾಗಿರುವ ಹುದ್ದೆಗಳಿಗೆ ನಾನ್ ಕೆಎಎಸ್ ಅಧಿಕಾರಿಗಳ ನಿಯೋಜನೆ ಸರಿಯಲ್ಲ, ಮತ್ತು ಆ ಸ್ಥಾನಕ್ಕೆ ಕೆಎಎಸ್ ಅಧಿಕಾರಿಗಳನ್ನೇ ನೇಮಕ ಮಾಡಬೇಕು ಎಂದ ಆಗ್ರಹಿಸಿದಲ್ಲದೆ, ಪತ್ರದ ಮೂಲಕ ಕೆಎಎಸ್ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಎಸ್ ಅಧಿಕಾರಿಗಳ ಮತ್ತು ನಾನ್ ಕೆಎಎಸ್ ಅಧಿಕಾರಿಗಳ ಸಂಘರ್ಷ ಇದೀಗ ಸಿಎಂ ಅಂಗಳ ತಲುಪಿದೆ. ನಾನ್ ಕೆಎಎಸ್ ಅಧಿಕಾರಿಗಳನ್ನ ಮಾತೃ ಇಲಾಖೆಗೆ ವಾಪಸು ಕಳುಸುವಂತೆ ಪಟ್ಟು ಕೆಎಎಸ್ ಅಧಿಕಾರಿಗಳು ಪಟ್ಟು ಹಿಡಿದಿದ್ದು, ಈ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿಯುತ್ತಾ ಕಾದುನೋಡಬೇಕಾಗಿದೆ.

ಸರ್ಕಾರಿ ಇಲಾಖೆಗಳಲ್ಲಿ ನಾನ್ ಕೆಎಎಸ್ ಅಧಿಕಾರಿಗಳು ಉನ್ನತ ಸ್ಥಾನ ಪಡೆದಿದ್ದಾರೆ. ಇದರಿಂದ ಕೆಎಎಸ್ ಅಧಿಕಾರಿಗಳಿಗೆ ಯಾವುದೇ ಸರಿಯಾದ ಹುದ್ದೆ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಡಿಎ ಉಪಕಾರ್ಯದರ್ಶಿಗಳ ಹುದ್ದೆ ಸೇರಿದಂತೆ ಅನೇಕ ಹುದ್ದೆಗಳಲ್ಲಿರೋ ನಾನ್ ಕೆಎಎಸ್ ಅಧಿಕಾರಿಗಳನ್ನು ಸರ್ಕಾರ ಬೇಕಾಬಿಟ್ಟಿಯಾಗಿ ನೇಮಕ ಮಾಡಿದ್ದಕ್ಕೆ ಕೆಎಎಸ್ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಕೆಎಎಸ್ ಅಧಿಕಾರಿಗಳ ಸಂಘಟನೆಯ ಅಧ್ಯಕ್ಷ ಡಾ ಎಂ ರವಿ ತಿರ್ಲಾಪುರ ಪತ್ರ ಬರೆದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
#KAS OFFICERS #NON KAS OFFICERS #BJP GOVERNMENT #STATE GOVERNMENT #BDA #PACEMENT




