ಬೆಳಗಾವಿ: ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಅಂತಾ ಹೇಳುವ ಮೂಲಕ ಸಿದ್ದರಾಮಯ್ಯ, ಹಾಗೂ ಡಿಕೆಶಿಗೆ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪರೋಕ್ಷವಾಗಿ ಇಂದು ಟಾಂಗ್ ನೀಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮಾತ್ರ ಟಿಕೇಟ್ ಘೋಷಣೆ ಮಾಡೋ ಅಧಿಕಾರ ಇದೆ. ಸಿದ್ದರಾಮಯ್ಯ, ಡಿಕೆಶಿಗೂ ಸಹ ಸ್ವತಃ ಅವರವರ ಟಿಕೆಟ್ ಘೋಷಣೆ ಮಾಡುವ ಹಾಗಿಲ್ಲ ಅನ್ನೋದರ ಮೂಲಕ ಟಾಂಗ್ ನೀಡಿದರು.
ಇನ್ನು ಸಾವರ್ಕರ್ ವಿಷ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಹುಳಿ ಹಿಂಡುವ ಕೆಲಸ ಆಗಬಾರದು. ನಾವು ನಾಗಪುರ ಯೂನಿವರ್ಸಿಟಿ ಅಲ್ಲ. ನಾವು ಜನಸಾಮಾನ್ಯರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಹೇಳಿದ್ದು ಸರಿ ಅಂತಾ ಹೇಳೋ ಮೂಲಕ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಬ್ರಿಟಿಷರ ತಟ್ಟೆಕಾಸಿನಲ್ಲಿ ಬದುಕಿದ ಸಾವರ್ಕರ್ ಫೋಟೊ ಹಾಕಿದ್ದು ಕರ್ನಾಟಕದ ಜನತೆಗೆ ಅಪಮಾನ ಮಾಡಲಾಗಿದೆ. ಗಡಿ ವಿವಾದವಿರುವ ಸಂದರ್ಭದಲ್ಲಿ ಆ ಭಾಗಕ್ಕೆ ಸೇರಿದವರ ಫೋಟೊ ಸರ್ಕಾರ ಹಾಕಿದೆ. ನೆಹರು ಫೋಟೊ ಹಾಕಿಲ್ಲ ಎಂಬುದು ವಿಪರ್ಯಾಸ. ನಾಗ್ಪುರದಿಂದ ಬರುವ ತೀರ್ಮಾನಕ್ಕೆ ನಮ್ಮ ವಿರೋಧವಿದೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ವಿರೋಧಿಸಿದ್ದಾರೆ. ನಮ್ಮಲ್ಲಿ ಅಭಿಪ್ರಾಯ ಭೇದವಿದೆ, ಮನಭೇದವಿಲ್ಲ ಅಂತಾ ಹೇಳಿದರು.

ಇನ್ನೂ ಹಲಾಲ್ ಬಿಲ್ ವಿಚಾರವಾಗಿ ಮಾತನಾಡಿದ ಅವ್ರು, ಬಿಜೆಪಿ ರಾಜ್ಯದ ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಆ ಕಾರಣ ವಿಷಯಾಂತರ ಮಾಡಲು ಸರ್ಕಾರ ಹಲಾಲ್ ಬಿಲ್ ಮುನ್ನಲೆಗೆ ತರುತ್ತಿದೆ ಅಂತಾ ಟೀಕಾಪ್ರಹಾರ ನಡೆಸಿದರು. ಒಪಿಎಸ್‌ಗೆ ನಮ್ಮ ಬೆಂಬಲವಿದೆ ಅಂತಾ ತಿಳಿಸಿದರು.
ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಷ್ಯವಾಗಿ ಮಾತನಾಡಿ ಬಿ.ಕೆ.ಹರಿಪ್ರಸಾದ್ ಸಿಬಿಐ ಬಿಜೆಪಿಯ ಮುಂಚೂಣಿಯ ಘಟಕವಾಗಿದೆ. ED, IT ಗಳನ್ನು ಕೂಡ ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಜೆಪಿ ವಿರೋಧ ಮಾಡುವವರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಹೆದರೋ ಪ್ರಶ್ನೆ ಇಲ್ಲ ಅಂತಾ ಹೇಳಿದರು. ರಮೇಶ್ ಜಾರಕಿಹೊಳಿ, ಈಶ್ವರಪ್ಪ ಅಧಿವೇಶನಕ್ಕೆ ಗೈರು ವಿಷ್ಯ ಅದು ಬಿಜೆಪಿಯ ಆಂತರಿಕ ವಿಚಾರ ಅಂತಾ ಹೇಳಿದರು.




