Actress Urfi Javed on The Hospital Bed : ಅಯ್ಯೋ ಏನಾಯ್ತು ನಟಿ ಉರ್ಫಿ ಜಾವೇದ್ ಗೆ: ಗ್ಲ್ಯಾಮರಸ್ ಬೆಡಗಿ ಆಸ್ಪತ್ರೆ ಬೆಡ್ ಮೇಲೆ..!

ನವದೆಹಲಿ :ಡಿ.20: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಮುಂಚೂಣಿ ನಟಿಯರಲ್ಲಿ ಒಬ್ಬರಾದ ಉರ್ಫಿ ಜಾವೇದ್ ಮನುಷ್ಯರ ಧ್ವನಿ ಪೆಟ್ಟಿಗೆ ಗೆ ಸಂಬಂಧಿಸಿದ ಬರುವ ಲಾರಿಂಜೈಟಿಸ್ ಕಾಯಿಲೆಗೆ ತುತ್ತಾಗಿದ್ದಾರೆ‌. ಮನುಷ್ಯರ ಧ್ವನಿ ಪೆಟ್ಟಿಗೆಗೆ ತಗಲುವ ಸೋಂಕಿಗೆ ಲಾರಿಂಜೈಟಿಸ್ ಅಂತಾರೆ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ ಎಂದು ಉರ್ಫಿ ಬಿಡುಗಡೆ ಮಾಡಿದ ವಿಡಿಯೋ ದಲ್ಲಿ ಹೇಳಿದ್ದಾರೆ.

ವಿಭಿನ್ನವಾದ ಕಾಸ್ಟ್ಯೂಮ್ ಗಳಿಂದ, ಅರೆ ಬರೆ ಬಟ್ಟೆ ತೊಡುವುದರಿಂದಲೇ ಪೇಮಸ್ ಆಗಿರುವ ನಟಿ ಉರ್ಫಿ. ಆರಂಭದಲ್ಲಿ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಅವರು ತಮ್ಮ ನಟನೆಯ ಗುರುತು ಬಿಟ್ಟು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಆಕೆಗೆ ನಿಜವಾದ ಮನ್ನಣೆ, ನಿಜವಾದ ಜನಪ್ರಿಯತೆ ಸಿಕ್ಕಿದ್ದು ಬಿಗ್ ಬಾಸ್ ಒಟಿಟಿಯಿಂದ. ಆ ನಂತರ ಅವರ ಅಭಿಮಾನಿ ಬಳಗ ಬೆಳೆದು ಈಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅವಳ ಸೃಜನಶೀಲತೆಯಿಂದಾಗಿ ಟ್ರೋಲಿಂಗ್‌ಗೆ ಒಳಗಾಗುತ್ತಾ ಇರ್ತಾರೆ.

ಇದೀಗ ಅವರು ಆಸ್ಪತ್ರೆಯ ಮೆಟ್ಟಿಲೇರಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ತೆಗೆದ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ನೋವಿನ ಬಗ್ಗೆ ಹಾಗೂ ಕಾಯಿಲೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಉರ್ಫಿ ಆಸ್ಪತ್ರೆಯ ಚಿತ್ರಗಳನ್ನು ನೋಡಿ, ಅವರ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದರಲ್ಲಿ ನಟಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ, ಗ್ಲಾಮರ್ ಜಗತ್ತಿನಲ್ಲಿ ಮಿಂಚುವ ನಟಿಯ ಆಸ್ಪತ್ರೆ ವಾಸವನ್ನು ನೋಡಲಾಗುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ಉರ್ಫಿ ಜಾವೇದ್ ಯಾರೂ ಊಹಿಸಲಾಗದಂತಹ ಮಾದರಿಯ ಡಿಸೈನ್‌ಗಳನ್ನು ಕ್ರಿಯೇಟ್ ಮಾಡಿದ ಡ್ರೆಸ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುತ್ತಿದ್ದಾರೆ. ಇದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಹಾಗೂ ಪ್ರಚೋದಿಸುತ್ತದೆ ಎನ್ನುವ ಕಾರಣ ನೀಡಿ ದೂರು ನೀಡಲಾಗಿದೆ. ಹೀಗೆ ಅನೇಕ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ.


ಇತ್ತೀಚಿಗೆ ಲೇಖಕ ಚೇತನ್ ಭಗತ್ ಸಹ ಉರ್ಫಿ ಬಟ್ಟೆ ವಿರುದ್ದ ಟೀಕೆ ಮಾಡಿದ್ರು. ರೇಪ್ ಸಂಸ್ಕೃತಿ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದಿದ್ದರು ಚೇತನ್ ಭಗತ್. ಆ ಸಂದರ್ಭದಲ್ಲಿ ಸಖತ್ ಬೋಲ್ಡ್ ಆಗಿ ಉತ್ತರಿಸಿದ್ದ ನಟಿ ಉರ್ಫಿ ಪುರುಷರ ವರ್ತನೆಗೆ ಮಹಿಳೆಯರ ಬಟ್ಟೆಗಳನ್ನು ದೂಷಿಸುವುದನ್ನು ಮೊದಲು ನಿಲ್ಲಿಸಿ 80ರ ದಶಕದ ಚೇತನ್ ಭಗತ್ ಎಂದಿದ್ದರು. ಹೀಗೆ ಅನೇಕ ಟೀಕೆಗಳಿಗೆ ಕಾರಣವಾದ ಉರ್ಫಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯು ಬೇಗ ಚೇತರಿಸಿಕೊಳ್ಳಲಿ ಅಂತ ಅನೇಕರು ಆಶಿಸಿದ್ದಾರೆ.

More News