CORONA VIRUS: ಚೀನಾದಲ್ಲಿ ಭಯ ಹುಟ್ಟಿಸಿದ ಕರೊನಾ ರೂಪಾಂತರಿ ವೈರಸ್: ಕರುನಾಡಲ್ಲೂ ಆತಂಕ, ಸಿಎಂ ಮಹತ್ವದ ಸಭೆ

ಬೆಳಗಾವಿ: ಇಡೀ ವಿಶ್ವಕ್ಕೆ ಕರೊನಾ ಸೋಂಕು ಅಂಟಿಸಿದ್ದ ಚೀನಾದ ಸದ್ಯದ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಕರೊನಾ ರೂಪಾಂತರಿ ವೈರಸ್ ಕೇಸ್ ಗಳು ಹೆಚ್ಚಾಗುತ್ತಿದ್ದು, ಡ್ರ್ಯಾಗನ್ ರಾಷ್ಟ್ರದಲ್ಲಿ ಸಾವು-ನೋವುಗಳ ಪ್ರಮಾಣ ಅಧಿಕವಾಗುತ್ತಿದೆ.
ಭಾರತದಲ್ಲೂ ಕೂಡ 3ನೇ ಕರೊನಾ ರೂಪಾಂತಾರಿ ಕೇಸ್ ಗಳು ಪತ್ತೆ (ಓಮಿಕ್ರಾನ್ BF.7) ಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅಲರ್ಟ್ ಆಗಿದ್ದಾರೆ.

ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಕೋವಿಡ್ ಪೂರ್ವಭಾವಿ ಸಭೆ ನಡೆಯಲಿದೆ. ಕೋವಿಡ್ ಮಾರ್ಗಸೂಚಿ ಪಾಲನೆ, ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯ ಮಾಡುವ ಸಾಧ್ಯತೆ. ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

#corona #covid19 #meeting #mask #corona rules #chishmas #newyear #meeting #cm basavaraj bommai

More News