ಬೆಳಗಾವಿ : ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ಟೆನ್ಶನ್ ಶುರುವಾಗಿದೆ. ಇದು ಒಕ್ಕಲಿಗರಿಗೆ ಮೀಸಲಾತಿ ನೀಡಬೇಕು ಅನ್ನೋ ಕೂಗು…
ಹೌದು ಒಕ್ಕಲಿಗರಿಗೂ ನ್ಯಾಯಯುತವಾದ ಮೀಸಲಾತಿ ನೀಡಬೇಕು. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕು. ಸಮುದಾಯದ ಶ್ರೀಗಳು ಮನವಿ ಸಲ್ಲಿಸಿದ್ದಾರೆ. ನಾನು ಆ ಮನವಿಯನ್ನ ಸಿಎಂಗೆ ಸಲ್ಲಿಸಿದ್ದೇನೆ. ನಾವು ಸರ್ವಸಮ್ಮತ ತೀರ್ಮಾನ ಮಾಡಿದ್ದೇವೆ.

ಒಕ್ಕಲಿಗರಿಗರೂ ನ್ಯಾಯಯುತ ಮೀಸಲಾತಿ ನೀಡಬೇಕು ಎಂದು ಬೆಳಗಾವಿಯ ಸುವರ್ಣಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಒಕ್ಕಲಿಗ ಮುಖಂಡರು ಸಿಎಂ ಭೇಟಿ ಮಾಡಿ ಹಕ್ಕೊತ್ತಾಯದ ಬೇಡಿಕೆ ಸಿಎಂಗೆ ಮಾಡ್ತೇವೆ ಅಂತಾ ಹೇಳಿದರು.
ಕುಂಚಟಿಗ, ಬಂಟ್ಸ್, ಶೆಟ್ಟಿ ಅವರಿಗೂ ಮೀಸಲಾತಿ ಸಿಗಬೇಕು. ನಮ್ಮ ಬೇಡಿಕೆ ಕೇಂದ್ರಕ್ಕೆ ಕಳಿಸಬೇಕು. ಗ್ರಾಮೀಣ ಭಾಗದಲ್ಲಿ 6 % ಮೀಸಲಾತಿ ಇದೆ. ನಗರ ಪ್ರದೇಶದ ಒಕ್ಕಲಿಗರಿಗೆ ಮೀಸಲಾತಿ ಇಲ್ಲ. ಯಾಕೆ ಕೈಬಿಟ್ರು ಅನ್ನೋದು ಗೊತ್ತಿಲ್ಲ. ಅದನ್ನೂ ಮೀಸಲಾತಿಗೆ ಸೇರಿಸಬೇಕು. ಸಿಎಂ ಕೂಡ ಭರವಸೆ ಕೊಟ್ಟಿದ್ದಾರೆ.
ಸಿಎಂ ಮೇಲೆ ನಮಗೆ ಅಚಲವಾದ ನಂಬಿಕೆಯಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.ಸದ್ಯ 4 % ಮೀಸಲಾತಿ ಇವಾಗ ಇದೆ ಜನಸಂಖ್ಯೆ ಆಧಾರದಲ್ಲಿ 12 % ಮೀಸಲಾತಿ ಹೆಚ್ಚಳ ಆಗಬೇಕು. ಕ್ಯಾಬಿನೆಟ್ ಗೆ ತಂದು ಸರ್ಕಾರ ನಿರ್ಧಾರ ಮಾಡಬೇಕು. ಇಂದು ಬಿಜೆಪಿಯ ಸಚಿವರು, ಶಾಸಕರು ಸಿಎಂ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಅಶೋಕ್ ತಿಳಿಸಿದರು.




