Tunisha Sharma Did not Commit Suicide : ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿಲ್ಲ : ಶರ್ಮಾ ತಾಯಿ ಅನುಮಾನ

ನವದೆಹಲಿ : ಡಿ.26 : ಬಾಲಿವುಡ್ ನ ಕಿರುತೆರೆ ನಟಿ ತುನಿಷಾ ಶರ್ಮಾ‌ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಆಕೆಯ ಪೋಷಕರು ಸೇರಿದಂತೆ ಅನೇಕರು ಇದು ಆತ್ಮಹತ್ಯೆ ಅಲ್ಲ, ಹತ್ಯೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.  ತುನಿಷಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಸಹನಟನಾಗಿ ನಟಿಸುತ್ತಿದ್ದ ಷಿಜಾನ್ ಮೊಹಮ್ಮದ್ ಖಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ.

ಹೊಸ ವರ್ಷದಲ್ಲಿ 21ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದ ನಟಿ ತುನಿಷಾ ಶೂಟಿಂಗ್ ಸೆಟ್ ನಲ್ಲಿ ನಿಗೂಢವಾಗಿ ಮರಣವನ್ನು ಹೊಂದಿದ್ದರು. ಇದು ಹಿಂದಿ ಕಿರುತೆರೆಯಲ್ಲಿ ಸಂಚಲನವನ್ನು ಮೂಡಿಸಿತು. ತನ್ನ ಜೀವನದ ಬಗ್ಗೆ ದೊಡ್ಡ ಮಟ್ಟದ ಕನಸುಕಂಡಿದ್ದ ಯುವತಿ ಹಠಾತ್ ಆಗಿ ಮರಣ ಹೊಂದಿದ್ದು, ಎಲ್ಲರಲ್ಲೂ ಆಘಾತ ಉಂಟು ಮಾಡಿತ್ತು. ಕಿರುತೆರೆಯಲ್ಲಿ ಮಿಂಚಿದ ಹುಡುಗಿ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸಿದ್ದರು. ಆದರೆ, ಪೊಲೀಸರಿಗೆ ಸಿಕ್ಕಿರುವ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಸೂಸೈಡ್ ಮಾಡಿಕೊಂಡಿದ್ದಾರೆ ಎಂದಿದೆ. ಇದು ಹಲವರಲ್ಲಿ ಗೊಂದಲವನ್ನು ಮೂಡಿಸಿದೆ.

ತುನಿಷಾ ಶರ್ಮಾ ಹಾಗೂ ಷಿಜಾನ್ ಖಾನ್ ಪ್ರೀತಿಸುತ್ತಿದ್ದರು. ಆದರೆ, ಕೆಲವೊಂದು ಕಾರಣಾಂತರಗಳಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು. ಅದರಿಂದ ಮನನೊಂದು ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಅದರ ಆಧಾರದ ಮೇಲೆನೇ ಪೊಲೀಸರು ಈ ಪ್ರಕರಣವನ್ನು ಅಸಹಜ ಸಾವು ಪ್ರಕರಣ ಅಂತ ದಾಖಲಿಸಿಕೊಂಡಿದ್ದರು. ಆ ಬಳಿಕ ಷಿಜಾನ್ ಮೊಹಮ್ಮದ್ ಖಾನ್‌ನನ್ನು ಬಂಧಿಸಿದ್ದರು. ಆತನನ್ನು ಮುಂಬೈನ ವಸಾಯಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇನ್ನೊಬ್ಬ ನಟ ಪಾರ್ಥ್ ಜುಟ್ಶಿ ಅವರನ್ನು ಕೂಡ ಪೊಲೀಸರು ಕರೆದಿದ್ದಾರೆ.

ಮುಂಬೈನ ವಾಸವಿ ಸ್ಟುಡಿಯೋ ದಲ್ಲಿ ನಡೆಯುತ್ತಿದ್ದ ‘ಅಲಿ ಬಾಬಾ ದಾಸ್ತಾನ್ ಎ ಕಾಬೂಲ್’ ಶೋನಲ್ಲಿ ತುನಿಷಾ ಶರ್ಮಾ ನಟಿಸುತ್ತಿದ್ದರು. ಇದೀಗ ಅದೇ ಸೆಟ್ ನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ‘ಮಹಾರಾಣ ಪ್ರತಾಪ್’ ಧಾರಾವಾಹಿಯ ಮೂಲಕ ಕಿರುತೆರೆ ಜೀವನ ಆರಂಭಿಸಿದ್ದ ನಟಿ ತುನಿಷಾ, ‘ಚಕ್ರವರ್ತಿ ಅಶೋಕ್ ಸಾಮ್ರಾಟ್’ ಧಾರಾವಾಹಿಯಲ್ಲಿ ರಾಣಿ ಅಹಿಂಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಗೆ ಸಹ ಎಂಟ್ರಿಯಾಗಿದ್ದ ಆಕೆಯು ‘ಫಿತೂರ್ ಸಿನಿಮಾದಲ್ಲಿ ಜ್ಯೂನಿಯರ್ ಕತ್ರೀನಾ ಕೈಫ್ ಆಗಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ಲವ್ ಜಿಹಾದ್ ಆರೋಪ :

ನಟಿಯ ಸಾವಿನ ಸುತ್ತ ಹಲವಾರು ಅನುಮಾನಗಳು ಸುತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಪ್ರತಿಕ್ರಿಯೆ ನೀಡಿದ್ದು, ಪರಸ್ಪರ ಪ್ರೇಮಿಗಳಾಗಿದ್ದ ತುನಿಷಾ ಮತ್ತು ಷಿಜಾನ್ ನಡುವೆ ಗಲಾಟೆ ಆಗಿ ದೂರವಾಗಿದ್ದರು. ಅದರ ನೋವಲ್ಲೇ ಆಕೆ ಸೂಸೈಡ್ ಮಾಡಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಲವ್ ಜಿಹಾದ್ ತರ ಕಾಣಿಸುತ್ತದೆ. ಹೀಗಾಗಿ, ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

More News