ಬೆಂಗಳೂರು :ಡಿ.27: ದೈವದ ಕುರಿತ ಸಿನಿಮಾ ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಹಲ್ ಚಲ್ ಸೃಷ್ಟಿಸಿತು. ಕನ್ನಡ ಸಿನಿ ಇಂಡಸ್ಟ್ರಿ ಯನ್ನಷ್ಟೇ ಅಲ್ಲದೇ, ದೇಶದಾದ್ಯಂತ ಭಾರೀ ಮನ್ನಣೆಗಳಿಸುವ ಜೊತೆಗೆ ಸಿನಿಮಾ ಭಾಗವಾಗಿದ್ದ ಕಲಾವಿದರಿಗೂ ಒಳ್ಳೆ ಬೇಡಿಕೆ ಸೃಷ್ಟಿಸಿತು. ಅದರಲ್ಲೂ ನಟಿ ಸಪ್ತಮಿ ಗೌಡ ನಟನೆಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿತ್ತು. ಈ ಬಗ್ಗೆ ಖಾಸಗಿ ಚಾನಲ್ ನಲ್ಲಿ ಕೇಳಿದ ಪ್ರಶ್ನೆ ಗೆ ಉತ್ತರಿಸಿದ ನಟಿ ಸಪ್ತಮಿ,
ಕಾಂತಾರ ಅಷ್ಟೇ ಅಲ್ಲ, ರಿಷಬ್ ಯಾವುದೇ ಪ್ರಾಜೆಕ್ಟ್ ಮಾಡಿದರೂ ನಂಗೆ ಒಂದು ಚಾನ್ಸ್ ಕೊಡ್ಲಿ ಎಂದರು.

ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ನಂತರ ಹರಕೆಯ ಕೋಲಾ ಮಾಡಿದೆವು. ಕಾಂತಾರ 2 ಸಿನಿಮಾ ಬಗ್ಗೆ ಅಂದಾಜಿಲ್ಲ. ಅದನ್ನು ರಿಷಬ್ ಅವರೇ ತಿಳಿಸಬೇಕು. ಕಾಂತಾರ 2 ಸಿನಿಮಾ ಮಾಡೋದಿದ್ರೆ ನಂಗೂ ಅವಕಾಶ ಕೊಡ್ಲಿ ಎಂದು ನಕ್ಕರು. ಮುಂದುವರೆದು ಮಾತನಾಡಿದ ಅವರು, ಕಾಂತಾರ ಅಷ್ಟೇ ಅಲ್ಲ, ರಿಷಬ್ ಯಾವುದೇ ಪ್ರಾಜೆಕ್ಟ್ ಮಾಡಿದರೂ ನಂಗೆ ಒಂದು ಚಾನ್ಸ್ ಕೊಡ್ಲಿ ಅಂತಲೇ ಕೇಳ್ಕೋಳ್ತೀನಿ ಎಂದರು.

ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟಿ ಸಪ್ತಮಿಗೆ ಬೇರೆ ಬೇರೆ ಸಿನಿ ಇಂಡಸ್ಟ್ರಿ ಯಿಂದ ಹೆಚ್ಚು ಆಫರ್ ಬರ್ತಿದೆಯಂತೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಕನ್ನಡ ಸೇರಿದಂತೆ ತುಂಬಾ ಸಿನಿಮಾಗಳ ಆಫರ್ ಬರ್ತಿದೆ. ಆದರೆ ಅವಸರ ಏನೂ ಇಲ್ಲ.. ಕಥೆಯನ್ನು ನೋಡಿ ಸಿನಿಮಾ ಮಾಡ್ಬೇಕು ಎಂದು ನಿರ್ಧರಿಸಿದ್ದೇನೆ.. ಒಂದಷ್ಟು ಸ್ಕ್ರಿಪ್ಟ್ ರೀಡಿಂಗ್ ಆಗಿದೆ. ತೆಲುಗು, ತಮಿಳು, ಮಲಯಾಳಂ, ಮರಾಠಿ, ಹಿಂದಿ ಸೇರಿ ಅನೇಕ ಸಿನಿಮಾ ಇಂಡಸ್ಟ್ರಿ ಯಿಂದ ಆಫರ್ ಬರ್ತಿದೆ ಈಗ. ಆದರೆ ಕನ್ನಡ ಸಿನಿಮಾದ ಒಂದು ಸ್ಕ್ರಿಪ್ಟ್ ನ್ನು ಮಾತ್ರ ಈಗ ಒಪ್ಪಿಕೊಂಡಿದ್ದೇನೆ. ನನಗೆ ಬೇರೆ ಭಾಷೆ ಬಗ್ಗೆ ಅಷ್ಟು ಹಿಡಿತ ಇಲ್ಲದ ಕಾರಣ ಕನ್ನಡದಲ್ಲೇ ಹೆಚ್ಚು ಸಿನಿಮಾ ಮಾಡಬೇಕೆಂದಿದ್ದೇನೆ. ಆದರೆ ನೋಡ್ತೇನೆ. ಒಳ್ಳೆ ಕಥೆ ಸಿನಿಮಾ ಸಿಕ್ಕರೆ ಸಿನಿಮಾದಲ್ಲಿ ನಟಿಸಬಹುದು ಎಂದರು.




