CRICKETER SHIKHAR DHAWAN: ಶಿಖರ್‌ ಧವನ್‌ ಏಕದಿನ ಕ್ರಿಕೆಟ್‌ ಬದುಕಿನ ದಾರಿ ಅಂತ್ಯವಾಯಿತೇ?

ಟೀಂ ಇಂಡಿಯಾದ ʼಗಬ್ಬರ್‌ ಸಿಂಗ್‌ʼ ಖ್ಯಾತಿಯ ಶಿಖರ್‌ ಧವನ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕು ಬಹುತೇಕ ಅಂತ್ಯವಾಗಲಿದೇಯೇ? ಎಂಬ ಪ್ರಶ್ನೆ ಕ್ರಿಕೆಟ್‌ ಅಭಿಮಾನಿಗಳನ್ನ ಕಾಡುತ್ತಿದೆ.
ಇತ್ತೀಚೆಗೆ ನ್ಯೂಜಿ಼ಲೆಂಡ್‌ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕತ್ವವಹಿಸಿಕೊಂಡಿದ್ದ ಶಿಖರ್‌ ಧವನ್‌, ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ 2023ರ ಆರಂಭದಲ್ಲೇ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ODI ಸರಣಿಯಿಂದ ಧವನ್‌ ಅವರನ್ನ ಕೈಬಿಡಲಾಗಿದೆ. ಹೀಗಾಗಿ ಶಿಖರ್‌ ಧವನ್‌ ಅವರನ್ನ ಆಯ್ಕೆ ಮಾಡಲು ಹಿಂದೇಟು ಹಾಕಿರುವ ತಂಡದ ಆಯ್ಕೆದಾರರು ಮತ್ತು ಮ್ಯಾನೇಜ್ಮೆಂಟ್‌ ಯುವ ಆಟಗಾರರಿಗೆ ಮಣೆ ಹಾಕುವಂತೆ ಕಾಣುತ್ತಿದೆ.


ಅದರಂತೆ ಸದ್ಯ ರೋಹಿತ್‌ ಶರ್ಮ ಅವರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಓಪನರ್‌ ಆಗಿ ಕಣಕ್ಕಿಳಿಯಲು ಇಶಾನ್‌ ಕಿಶನ್‌, ಶುಭ್ಮನ್‌ ಗಿಲ್‌ ಸಹ ರೇಸ್‌ನಲ್ಲಿದ್ದಾರೆ. ಭಾರತದ ಪರ 2022ರಲ್ಲಿ ಹೆಚ್ಚು ಏಕದಿನ ಪಂದ್ಯವನ್ನ ಆಡಿರುವ ಧವನ್‌, 688 ರನ್‌ಗಳಿಸಿದ್ದಾರೆ. ಇದರಲ್ಲಿ ಆರು ಅರ್ಧಶತಕ ಸಹ ಒಳಗೊಂಡಿದ್ದು, 74 ಇವರುಗಳಿಸಿದ ಗರಿಷ್ಠ ಸ್ಕೋರ್‌ ಆಗಿದೆ. ಇನ್ನು 2022ರಲ್ಲಿ ಒಟ್ಟು ಒಂಭತ್ತು ಪಂದ್ಯಗಳಲ್ಲಿ ಶಿಖರ್‌ ಧವನ್‌ ನಾಯಕನಾಗಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಈವರೆಗೂ 167 ಪಂದ್ಯಗಳನ್ನ ಆಡಿರುವ ಧವನ್‌, 6793 ರನ್‌ಗಳಿಸಿದ್ದು, 17 ಶತಕಗಳನ್ನ ಬಾರಿಸಿದ್ದಾರೆ. ವಿಶೇಷವಾಗಿ ICC ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 37 ವರ್ಷದ ಶಿಖರ್‌ ಧವನ್‌, 2023ರ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವರೇ? ಎಂಬ ಅನುಮಾನ ಕ್ರಿಕೆಟ್‌ ಅಭಿಮಾನಿಗಳನ್ನ ಕಾಡುತ್ತಿದೆ.

#BCCI #SHIKHAR DHWAN #ONEDAY #CAPTAIN #ENDOFINNINGS

More News