Pushpa-2, Sai Pallavi : ಪುಷ್ಪ-2 ರಲ್ಲಿ ರಶ್ಮಿಕಾ ಮಂದಣ್ಣ ಸ್ಥಾನಕ್ಕೆ ಸಾಯಿ ಪಲ್ಲವಿ ರೀ ಪ್ಲೇಸ್?

ಬೆಂಗಳೂರು.ಡಿ.29; ಬಹುಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಪುಷ್ಪ-2 ಸಿನಿಮಾ ದಿನಕ್ಕೊಂದು ಗೊಂದಲವನ್ನು ಸೃಷ್ಟಿಸುತ್ತಿದ್ದು, ಪುಷ್ಪ-1 ರಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ ಸ್ಥಾನಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆ ಹಾಗೂ ಪೊಲೀಸ್ ಆಫೀಸರ್ ಪಾತ್ರವನ್ನು ನಿರ್ವಹಿಸಿದ್ದ ಮಲೆಯಾಳಂ ನಟ ಫಹಾದ್ ಅನ್ನು ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸುಕುಮಾರ್ ನಿರ್ದೇಶನದಲ್ಲಿ ಒಂದು ವರ್ಷದ ಹಿಂದೆ ಬಂದಂತಹ ಪುಷ್ಪ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಬಹಳಷ್ಟು ಸದ್ದು ಮಾಡಿತು‌. ಈ ಸಿನಿಮಾದ ಹಾಡು ಮತ್ತು ತಗ್ಗೆದೇಲೇ ಡೈಲಾಗ್ ಬಹಳಷ್ಟು ಪೇಮಸ್ ಆಯಿತು. ಕೇವಲ ತೆಲುಗು ಮಾತ್ರವಲ್ಲದೆ ಅನೇಕ ಭಾಷೆಗಳಿಗೆ ಡಬ್ ಆಗಿ ಹೆಸರು ಮಾಡಿತು. ಇದು ಸಿನಿಮಾ ರಂಗದ ಬಾಕ್ಸ್ ಆಪೀಸ್ ಅನ್ನು ದೂಳೆಬ್ಬಿಸಿತು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಅದಾದ ಮೇಲೆ ಸಿನಿಮಾ ತಂಡ ಪುಷ್ಪ -2 ಮಾಡಲಾಗುತ್ತದೆ ಎಂದು ಘೋಷಣೆ ಮಾಡಿತು. ಅದರ ಭಾಗವಾಗಿ ಈ ವರ್ಷದ ಆಗಸ್ಟ್ ನಲ್ಲಿ 2ನೇ ಭಾಗದ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ, ಇತ್ತೀಚೆಗೆ ಶೂಟಿಂಗ್ ಶುರುವಾದರೂ ಸಹ ಅದು ಯಶಸ್ವಿಯಾಗಿ ಮುಗಿಯುವ ಕಡೆಗೆ ಹೋಗುತ್ತಿಲ್ಲ. ಪದೇ ಪದೇ ಶೂಟಿಂಗ್ ತಡವಾಗುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

‘ಪುಷ್ಪ ಭಾಗ 1 ರಲ್ಲಿ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ಆಫೀಸರ್ ಆಗಿ ಮಲೆಯಾಳಂ ನಟ ಫಹಾದ್ ಫಾಸಿಲ್ ಹೆಜ್ಜೆ ಹಾಕಿದ್ದರು. ಆದ್ದರಿಂದಲೇ ಮಲೆಯಾಳಂ, ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿ ಹೆಸರು ಮಾಡಿತು. ಆದರೆ, ಪುಷ್ಪ 2 ಸಿನಿಮಾ ಶೂಟಿಂಗ್ ಆರಂಭವಾಗಿದ್ದರೂ, ಅದರ ತಾರಾಗಣದಲ್ಲಿ ಯಾರು ಇರ್ತಾರೆ ಅನ್ನುವುದು ಅಂತಿಮ ಆಗಿಲ್ಲ. ಈ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿ ಬರ್ತಿದೆ. ಸಿಂಪಲ್ ಕ್ವ್ಯೂನ್ ಸಾಯಿ ಪಲ್ಲವಿ ಪುಷ್ಪ-2 ರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ, ಹಿಂದಿನ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದ ರಶ್ಮಿಕಾ ಹಾಗೂ ಪೊಲೀಸ್ ಆಪೀಸರ್ ಆಗಿದ್ದ ಫಯಾದ್ ಸೀಕ್ವೆಲ್ ನಲ್ಲಿ ನಟಿಸುತ್ತಿಲ್ಲ ಎನ್ನಲಾಗಿದೆ.

ಮಲೆಯಾಳಂ ನಟರಾಗಿರುವ ಫಯಾದ್ ಫಾಸಲ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದುದರಿಂದಾಗಿ ಅವರು ಈ ಪುಷ್ಪ 2 ನಲ್ಲಿ ನಟಿಸಲು ಕಷ್ಟ ಎಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇನ್ನೂ ನಿರ್ದೇಶಕರು ಪುಷ್ಪ 2 ಸಿನಿಮಾ ಅನ್ನು ದೊಡ್ಡಮಟ್ಟದಲ್ಲಿ ಯಶಸ್ವು ಮಾಡಬೇಕಂತ ಸಾಕಷ್ಟು ಕೆಲಸ ಮಾಡಿದ್ದಾರೆ. ಅದೇ ಕಾರಣಕ್ಕಾಗಿ ಸ್ಕ್ರಿಪ್ಟ್ ನಲ್ಲಿ ಸಹ ಹಲವಾರು ತರಹದ ಬದಲಾವಣೆಗಳನ್ನು ಮಾಡಿದ್ದಾರೆ ನಿರ್ದೇಶಕ ಸುಕುಮಾರ್ ಅವರು. ಅದರಿಂದಲೇ ಸಿನಿಮಾ ಶೂಟಿಂಗ್ ಮಾಡುವುದು ಸ್ವಲ್ಪ ತಡವಾಯಿತು ಎನ್ನಲಾಗಿದೆ. ಮತ್ತೊಂದು ಕಡೆ ಫಾಸಿಲ್ ಅವರಿಗೆ ನೀಡಿದ್ದ ಡೇಟ್ಸ್ ಗಳು ಸಹ ಮುಗಿದು ಹೋಗಿದ್ದವು. ಇದೀಗ ಅವರಿಗೆ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ, ಪುಷ್ಪಗೆ ಸಮಯ ಕೊಡಲಾಗುತ್ತಿಲ್ಲ ಎನ್ನಲಾಗಿದೆ.

ಆದರೆ, ಚಿತ್ರತಂಡ ಇದ್ಯಾವುದಕ್ಕೂ ಕೇರ್ ಮಾಡಿಲ್ಲ ಎನ್ನಲಾಗಿದೆ. ಅಲ್ಲದೇ, ಪುಷ್ಪ ಸಿನಿಮಾ ಹೆಚ್ಚು ಯಶಸ್ವಿ ಗಳಿಸಿ ಕೋಟ್ಯಾಂತರ ರೂ.ಗಳನ್ನು ಗಳಿಸಿತ್ತು. ಅದೇ ತರದಲ್ಲಿ ಪಾರ್ಟ್ 2 ಸಿನಿಮಾ 1000 ಕೋಟಿ ರೂ.ಗಳು ವಸೂಲಿ ಮಾಡುವ ಕಡೆಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

More News