ಬೆಂಗಳೂರು : ಡಿ29: ಅಸ್ಟ್ರಾಲಜರ್ ಆಗಿ ಬದುಕೋದು ಬಹಳ ಕಷ್ಟ. ಆದರೆ ನಾನು ಓದದೆಯೇ ಇಷ್ಟು ನೇಮ್ ಮಾಡಿದ್ದೀನಿ. ಆ ಖುಷಿ ನಂಗಿದೆ ಎಂದು ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಹೇಳಿದರು.
ಬಿಗ್ ಬಾಸ್ ಮನೆಯಲ್ಲಿ 145 ದಿನ ಇದ್ದ ಆರ್ಯವರ್ಧನ್ ಏಕಾಏಕಿ ಬಿಗ್ ಬಾಸ್ ಮನೆ ಯಿಂದ ಹೊರ ನಡೆದ ಕುರಿತು ಮೊದಲ ಬಾರಿಗೆ ಮಾತನಾಡಿದ ಅವರು, ಅಸ್ಟ್ರಾಲಜರ್ ಆಗಿ ಬದುಕೋದು ಬಹಳ ಕಷ್ಟ. ಯಾಕೆಂದರೆ ನಾವು ಕಲಾವಿದರಲ್ಲ, ಸ್ಟೋರ್ಟ್ ಪರ್ಸನ್ ಗಳಲ್ಲ.. ನಮಗೆ ದುಡಿಮೆ ಕಷ್ಟ. ನಾನು ಎಂದಿಗೂ ಶಾಲೆಗೂ ಹೋಗಿಲ್ಲ.. ಓದದೇ ಜ್ಯೋತಿಷ್ಯ ಹೇಳಿ ಇಷ್ಟು ನೇಮ್ ಮಾಡಿದ್ದೀನಿ. ನಂಗೆ ಈಗಲೂ ಓದೋಕೆ ಬರಲ್ಲ. ಆದರೆ ಬಿಗ್ ಬಾಸ್ ನಲ್ಲಿ ಇರ್ತೇನೆ ಎಂದು ನಂಗೆ ಗೊತ್ತಿತ್ತು. ಬಿಗ್ ಬಾಸ್ ನಲ್ಲಿ ದೇಹ ಬಲ, ಮಾತಿನ ಬಲ ಇದ್ರೆ ಸಾಕು ಎಂದು ತಮ್ಮ ಅನುಭವ ಹಂಚಿಕೊಂಡರು.

“ನಾನು ಪಕ್ಕಾ ಹೊರಗೆ ಬರ್ತೀನಿ ಅಂತ ಪ್ರಿಡಿಕ್ಷನ್ ಮಾಡಿದ್ದೆ”
ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಸಂದರ್ಭದ ಕುರಿತು ಮಾತನಾಡಿದ ಅವರು, ಎರಡನೇ ವಾರದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತೇನೆ ಎಂದು ನನಗೆ ಗೊತ್ತಿತ್ತು. ಎಲ್ಲೋ ಮ್ಯಾಚ್ ನಡೆಯುತ್ತಿದ್ದರೆ ನಾನು ಪ್ರಿಡಿಕ್ಷನ್ ಮಾಡಿ ಜಾತಕ ಹೇಳ್ತಿದ್ದವನು. ನಾನೇ ಗ್ರೌಂಡ್ ನಲ್ಲಿ ಇದ್ದು, ನಂದೇ ಮ್ಯಾಚ್ ನಡೆಯುತ್ತಿದೆ ಎಂದರೆ ನನ್ನ ಬಗ್ಗೆ ನನಗೆ ಪ್ರಿಡಿಕ್ಷನ್ ಇತ್ತು. ಪಕ್ಕಾ ಹೊರಗೆ ಬರ್ತೀನಿ ಅಂತ. ಆದರೆ ಇದನ್ನು ನಾನು ಯಾರಿಗೂ ಹೇಳಲಿಲ್ಲ. ನನ್ನ ನವಗ್ರಹ ಗಳನ್ನು ನಾನು ಬೇಡಿಕೊಂಡಿದ್ದೆ, ಕಷ್ಟ ಪಟ್ಟು ಆಡಿ ಕಿಚ್ಚನಿಂದ ಚಪ್ಪಾಳೆ ತೆಗೆದುಕೊಂಡೆ. ಗೆದ್ದರೆ ದೇವಸ್ಥಾನ ಕಟ್ಟಿಸ್ತೇನೆ ಎಂದು ಆದರೆ ಏನು ನಿರ್ಧಾರ ಆಗಿರುತ್ತೋ ಅದು ಆಗಲೇ ಬೇಕಲ್ಲ ಎಂದರು.

ಆರ್ಯವರ್ಧನ್ ತುಂಬಾ ಸುಳ್ಳು ಹೇಳ್ತಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ನಾನು ಸಿಎಂ ಗೆ ಜಾತಕ ಹೇಳಿದ್ದೇನೆ. ಪ್ರೈಮಿನಿಷ್ಟರಿಗೆ ಜಾತಕ ಹೇಳಿದ್ದೇನೆ. ತುಂಬಾ ಜನ ಸಿನಿಮಾ ನಟರಿಗೆ ಜಾತಕ ಹೇಳಿದ್ದೇನೆ. ಸಾಕಷ್ಟು ಮಂದಿಗೆ ನಾನು ಜಾತಕ ನುಡಿದಿದ್ದೇನೆ ಅವರೆಲ್ಲ ನನ್ನನ್ನು ಮಾತನಾಡುವ ದೇವರು ಎಂದು ಕರೆಯುತ್ತಾರೆ. ಯಾರ ಹೇಳಿಕೆಗೋ ನಾ ಯಾಕೆ ಬೇಜಾರಾಗ್ಲಿ ಎಂದರು.
“ರೂಪೇಶ್ ಮೇಲೆ ನಂಗೆ ಲವ್”
ಮುಂದುವರೆದು ಮಾತನಾಡಿದ ಅವರು, ರೂಪೇಶ್ ಶೆಟ್ಟಿ ಗೆಲ್ಬೇಕು.. ಅವನು ನನ್ನ ಮಗನ ಹಾಗೇ ನೋಡಿದ್ದೀನಿ. ಅವನ ಮೇಲೆ ನನಗೆ ಲವ್.. ಹಾಗಾಗಿ ಅವನು ಗೆಲ್ಲಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಕಣ್ಣೀರು ಹಾಕಿದರು.




