ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಇರುವ ದೇಗುಲ ತೆರವು ಮಾಡದೇ ಇರುವ ಬಗ್ಗೆ ಸದನದಲ್ಲಿ ಪ್ರತ್ಯೇಕ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಇಂದೇ ವಿಧಾನಸಭೆಯಲ್ಲಿ ದೇಗುಲ ತೆರವು ವಿಚಾರದಲ್ಲಿ ವಿಧೇಯಕ ಮಂಡನೆಯಾಗುವ ಸಾಧ್ಯತೆಗಳಿವೆ.
ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವುದನ್ನು ತಡೆಯುವ ಉದ್ದೇಶದಿಂದ ವಿಧೇಯಕ ಮಂಡನೆಗೆ ಸರ್ಕಾರ ಮುಂದಾಗಿದೆ. ಈ ವಿಧೇಯಕವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅನೂರ್ಜಿತಗೊಳ್ಳುವ ಸಾಧ್ಯತೆಗಳಿವೆ. ಆದರೂ ಕೂಡ ಸರ್ಕಾರ ಈಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದುಬಂದಿದೆ.
ಕೇವಲ ಜನರ ಕಣ್ಣೋರೆಸುವ ತಂತ್ರದ ಭಾಗವಾಗಿ ವಿಧೇಯಕ ಪರಿಚಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದೊಂದು ತಾತ್ಕಾಲಿಕ ಉಪಶಮನವಾಗಿದೆ.
ನಂಜನಗೂಡಿನಲ್ಲಿ ದೇವಸ್ಥಾನ ಕೆಡವಿದ ಮೇಲೆ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ರಾಮನ ಜಪ ಮಾಡುವ ಬಿಜೆಪಿ ಸರ್ಕಾರವೇ ಈ ರೀತಿ ಮಾಡಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸುಪ್ರೀಂಕೋರ್ಟ್ ಆದೇಶಪಾಲನೆ ಮಾಡಬೇಕಿತ್ತು ಎಂದುಪ್ರತಿಪಕ್ಷಗಳು ಟಿಕೀಸಿದ್ದರು. ಸಾಕಷ್ಟು ಅಪವಾದ, ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಮತ್ತೆ ರಾಜ್ಯ ಸರ್ಕಾರ ಜನರ ಕಣ್ಣೋರೆರೆಸುವ ತಂತ್ರಕ್ಕೆ ಶರಣಾಗಿದೆ ಎಂದು ತಿಳಿದುಬಂದಿದೆ.




