Bigg Boss Winner Rupesh : ಬಿಗ್‌ ಬಾಸ್‌ ವಿನ್ನರ್ ರೂಪೇಶ್‌ ಸಂಭಾವನೆ ಎಷ್ಟು?

ಬೆಂಗಳೂರು: ಜ.02: ಕಳೆದ ನಾಲ್ಕು ತಿಂಗಳಿನಿಂದ ಕಲರ್ಸ್‌ ಕನ್ನಡ ಚಾನೆಲ್‌ ನಲ್ಲಿ ನಡೆದಂತಹ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್ 9 ಮುಕ್ತಾಯಗೊಂಡಿದ್ದು, ಈ ಸೀಸನ್‌ ನಲ್ಲಿ ಗೆದ್ದಿರುವ ರೂಪೇಶ್‌ ಶೆಟ್ಟಿಗೆ ಬರೋಬ್ಬರಿ 60 ಲಕ್ಷ ರೂ.ಗಳಷ್ಟು ಬಹುಮಾನ ಸಿಕ್ಕಿದೆ.

ದೊಡ್ಮನೆಯಲ್ಲಿ ಎಲ್ಲರೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದಕ್ಕೆ, ಎಲ್ಲರಿಗೂ ಇಷ್ಟವಾಗುವ ವ್ಯಕ್ತಿಯಾದ್ದರಿಂದ ರೂಪೇಶ್‌ ಗೆಲ್ಲಲು ಸಾಧ್ಯವಾಯಿತು. ಅದಕ್ಕಾಗಿ ಅವರಿಗೆ ಬೃಹತ್‌ ಮೊತ್ತದ ಬಹುಮಾನವೂ ಸಿಕ್ಕಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ಸಿಕ್ಕಿರುವುದಕ್ಕೆ ಅನೇಕರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಫಿನಾಲೆಯಲ್ಲಿ ಬಿಗ್‌ ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಅಂತಿಮವಾಗಿ ಗೆದ್ದಂತಹ ಅಭ್ಯರ್ಥಿಯನ್ನು ಘೋಷಿಸಿದ ಮೇಲೆ 60 ಲಕ್ಷ ರೂ.ಗಳ ಬಹುಮಾನವನ್ನು ಸಹ ಘೋಷಣೆ ಮಾಡಿರುವುದು ಸತ್ಯ. ಆದರೆ, ರೂಪೇಶ್ ಅವರ ಕೈಗೆ ಎಷ್ಟು ದುಡ್ಡು ಸಿಗುತ್ತದೆ ಅನ್ನುವುದು ನೋಡಬೇಕಾಗಿದೆ.

ಯಾವುದೇ ಒಂದು ಸಂಸ್ಥೆ ಅಥವಾ ಈ ತರಹದ ರಿಯಾಲಿಟಿ ಶೋ ಗಳಲ್ಲಿ ಅಷ್ಟು ಪ್ರಮಾಣದಲ್ಲಿ ಹಣವನ್ನು ನೀಡುವ ಸಂದರ್ಭದಲ್ಲಿ ಅದಕ್ಕೆ ಕೆಲವೊಂದಿಷ್ಟು ನಿಬಂಧನೆಗಳಿರುತ್ತವೆ. ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಅದಕ್ಕಾಗಿ ರಾಜಣ್ಣ ಗೆ ಕಲರ್ಸ್‌ ಕನ್ನಡ ಟಿವಿ ಮೂಲಕ ಬರುವ ಹಣದಲ್ಲಿ ಶೇ.30 ರಷ್ಟು ತೆರಿಗೆಯನ್ನು ಕಡಿತ ಮಾಡಲಾಗುತ್ತದೆ. ಅದರಲ್ಲಿ ಉಳಿಯುವಂತಹ 42 ಲಕ್ಷ ರೂ.ಗಳು ರಾಜಣ್ಣ ಕೈ ಸೇರಲಿದೆ ಎನ್ನಲಾಗಿದೆ.

ಇಷ್ಟು ಬೃಹತ್‌ ಪ್ರಮಾಣದ ಹಣವನ್ನು ರೂಪೇಶ್‌ ಶೆಟ್ಟಿ ಏನು ಮಾಡುತ್ತಾರೆ ಎಂದು ಅನೇಕರು ಪ್ರಶ್ನೆ ಕೇಳಿದ್ದಾರೆ. ಈ ಹಣವನ್ನು ಖರ್ಚು ಮಾಡಲು ಅನೇಕ ಯೋಜನೆಗಳನ್ನು ಹಾಕಿಕೊಂಡಿರುವ ರೂಪೇಶ್‌ ಅವರು, ಸಾಲ ಇರುವುದರಿಂದ ಸ್ವಲ್ಪ ಮೊತ್ತವನ್ನು ಸಾಲಕ್ಕಾಗಿ ಮೀಸಲಿಡಲಿದ್ದಾರೆ. ಸಿನಿಮಾ, ಸಾಲ, ದೇವರ ಹರಕೆ ಮತ್ತು ಒಂದಷ್ಟು ಸಮಾಜಸೇವೆಗೂ ಅದರಲ್ಲಿ ಮೀಸಲಿಡಲಿದ್ದೇನೆ ಎಂದು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ದೊಡ್ಮನೆಯ ಫಿನಾಲೆಯಲ್ಲಿ ಗೆದ್ದ ರೂಪೇಶ್‌ ಶೆಟ್ಟಿಗೆ ಅರವತ್ತು ಲಕ್ಷದಷ್ಟು ಪ್ರಶಸ್ತಿ ನೀಡಿದರೆ, ಇದೇ ಸಂದರ್ಭದಲ್ಲಿ ರನ್ನರ್‌ ಅಪ್‌ ಆಗಿರುವಂತಹ ರಾಕೇಶ್ ಅಡಿಗ ಅವರಿಗೆ ಏಳು ಲಕ್ಷ ಹಾಗೂ ಪ್ರಾಯೋಜಕರ ಅತ್ಯುತ್ತಮ ನಾಯಕ ಬಹುಮಾನ ಸೇರಿದಂತೆ 12 ಲಕ್ಷ ರೂ.ಗಳನ್ನು ರಾಕೇಶ್‌ ಅಡಿಗಗೆ ನೀಡಲಾಗಿದೆ. ಇನ್ನೂ, ಸೀಸನ್ 9 ರಲ್ಲಿ ಮೂರನೇ ಸ್ಥಾನದಲ್ಲಿ ಉಳಿದುಬಿಟ್ಟ ದೀಪಿಕಾ ದಾಸ್‌ ಗೆ ಸಹ 5 ಲಕ್ಷ ರೂ.ಗಳು, ನಾಲ್ಕನೇ ಸ್ಥಾನದಲ್ಲಿದ್ದ ರೂಪೇಶ್‌ ರಾಜಣ್ಣ ಗೆ 3 ಲಕ್ಷ ರೂ.ಗಳನ್ನು ನೀಡಲಾಗಿದೆ.

More News