ಸ್ಯಾಂಡಲ್ ವುಡ್ ನಲ್ಲಿ ಈಗ ಮುಟ್ಟಿದ್ದೆಲ್ಲ ಚಿನ್ನ ಅನ್ನೋ ಕಾಲ. ಕೆಜಿಎಫ್, ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ಸಿನಿಮಾ ಬಗ್ಗೆ ದೇಶದಾದ್ಯಂತ ಮಾತುಕತೆ ಶುರುವಾಗಿದೆ.
ಅಷ್ಟೇ ಅಲ್ಲ, ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗ್ತಿದ್ರೆ, ಕನ್ನಡದಲ್ಲಿ ತೆರೆ ಕಂಡ ಬಹುತೇಕ ಸಿನಿಮಾ ಕ್ಲಿಕ್ ಆಗ್ತಿದೆ. ಇದನ್ನೇ ಚಾನ್ಸ್ ಆಗಿ ತೆಗೆದುಕೊಂಡ ಸ್ಯಾಂಡಲ್ ವುಡ್ ನಟಭಯಂಕರರ ಸಾಮಾಗಮಕ್ಕೆ ಸಿದ್ದತೆ ನಡೆಸುತ್ತಿದೆ.

ಈ ಹಿಂದೆ ಪ್ರೀತ್ಸೆ, ಲವ ಕುಶ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಜೋಡಿ ತೆರೆ ಮೇಲೆ ಕಮಾಲ್ ಮಾಡಿತ್ತು. ಬಾಕ್ಸ್ ಆಫೀಸ್ ಕಲೆಕ್ಷನ್ ಜೊತೆ ಜೊತೆಗೆ ಸಿನಿ ರಸಿಕರ ಮನಸ್ಸಲ್ಲಿ ಕೂತು ಬಿಟ್ಟ ಸಿನಿಮಾಗಳಾಗಿದ್ದವು.

ಮತ್ತೆ ಈ ಜೋಡಿ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ ಅನ್ನೋ ಟಾಕ್ ಒಂದು ಸಿನಿ ರಸಿಕರನ್ನು ಕಾಡಿತ್ತು. ಈ ಬಗ್ಗೆ ಗುಡ್ ನ್ಯೂಸ್ ಕೊಟ್ಟಿರುವ ಶಿವಣ್ಣ, 45 ಎಂಬ ಚಿತ್ರದಲ್ಲಿ ತನ್ನ ಜತೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಒಂದು ಮೊಟ್ಟೆ ಸಿನಿಮಾ ಖ್ಯಾತಿಯ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಶಿವರಾಜ್‌ಕುಮಾರ್ ತಮ್ಮ ಗೆಳೆಯ ಉಪೇಂದ್ರ ಜತೆ ಮಲ್ಟಿಸ್ಟಾರ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿಯೇ ಹರಿದಾಡಿತ್ತಿದೆ. ಇದಕ್ಕೆ ಮತ್ತೊಬ್ಬ ಖ್ಯಾತ ನಟ ರಾಜ್ ಬಿ ಶೆಟ್ಟಿ ಜೊತೆಗೆ ಕಾಣಿಸಿಕೊಳ್ಳಲಿದ್ದು, ಸಿನಿ ಪ್ರೀಯರಿಗೆ ದೊಡ್ಡ ಧಮಾಕಾ ಕಾದಿರಲಿದೆ ಎಂದರೆ ತಪ್ಪಾಗಲ್ಲ.

ಅರ್ಜುನ್ ಜನ್ಯಾ ಸಂಗೀತದ 45 ಚಿತ್ರವನ್ನು ಶಿವ ರಾಜ್‌ಕುಮಾರ್, ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಹಾಗೂ ಶ್ರೀನಿ ನಿರ್ದೇಶನದ ‘ಘೋಸ್ಟ್’ ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈ ಮೂವರ ಕಾಂಬಿನೇಷನ್ ಸಿನಿಮಾ ನೋಡಲಂತೂ ಸಿನಿ ರಸಿಕರು ಕಾದು ಕುಳಿತಿದ್ದಾರೆ.
#SHIVARAJKUMAR #UPENDRA #RAJ B SHETTY #FILM 45 #SHIVARAJ KUMAR BIRTHDAY #MULTISTAR FILM #SANDLWOOD #ARJUN JANYA #GHOST #YOGARAJ BHAT #KARATAKA DAMANAKA




