ಬೆಂಗಳೂರು :ಜ.03; ನಡೆದಾಡುವ ದೇವರು ಕಲಿಯುಗದ ಸಂತರೇಂದೆ ಖ್ಯಾತರಾಗಿದ್ದ ಪೂಜ್ಯ ಸಿದ್ದೇಶ್ವರ ಶ್ರೀಗಳು ಶಿವನಲ್ಲಿ ಲೀನರಾಗಿದ್ದಾರೆ. ಅವರ ಅಗಲಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದಾರೆ.
ಪೂಜ್ಯ ಸಿದ್ದೇಶ್ವರ ಶ್ರೀಗಳು ಸರಳವಾಗಿ ಜೀವಿಸಿ ಅತ್ಯಂತ ಎತ್ತರಕ್ಕೇರಿದ ಧೀಮಂತರು. ಪೂಜ್ಯರ ನಿಧನದಿಂದಾಗಿ ಜ್ಯೇಷ್ಠ ಚಿಂತಕರೊಬ್ಬರನ್ನು ಶ್ರೇಷ್ಠ ಮಹಾತ್ಮರನ್ನು ಕಳೆದುಕೊಂಡಂತಾಗಿದೆ. ವ್ಯಕ್ತಿ ಶಾಶ್ವತವಲ್ಲ ಆದರೆ ಚಿಂತನೆಗಳು ಶಾಶ್ವತ ಎಂಬಂತೆ ಪೂಜ್ಯ ಶ್ರೀಗಳ ಚಿಂತನೆಗಳು ಸದಾ ನಮ್ಮೊಂದಿಗೆ ಇರಲೆಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಸಂತಾಪ ಸೂಚನೆಯ ಪತ್ರದಲ್ಲಿ ವೀರೇಂದ್ರ ಹೆಗ್ಗಡೆಯವರು. ಪೂಜ್ಯರು ಜೈನ ಧರ್ಮದ ಸಲ್ಲೇಖನ ವ್ರತಗಳವನ್ನು ಅರಿತುಕೊಂಡಿದ್ದರು. ಅದ್ದರಿಂದ ಬಹುತೇಕ ತಮ್ಮ ಕೊನೆಯ ಭಾಗದಲ್ಲಿ ಆಹಾರ-ಜಲ ತ್ಯಾಗ ಮಾಡಿ ದೇಹ ತ್ಯಾಗ ಮಾಡಿದ್ದಾರೆಂದು ಉಲ್ಲೇಖಿಸಿದ್ದಾರೆ.

ಹಲವು ದಿನಗಳಿಂದ ಸಿದ್ದೇಶ್ವರ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸಂಜೆ ಶ್ರೀಗಳು ನಿಧನರಾಗಿದ್ದಾರೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾಗರೋಪಾದಿಯಲ್ಲಿ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಂಜೆ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಲಿದೆ.




