ಬೆಂಗಳೂರು : ಜ.03 : ಇತ್ತೀಚಿನ ದಿನಗಳಲ್ಲಿ ಖ್ಯಾತ ನಟರು, ನಟಿಯರು ಹುಟ್ಟಿದ ಸಂದರ್ಭದಲ್ಲಿ ಅವರು ನಟಿಸಿ, ಪೇಮಸ್ ಆದಂತಹ ಸಿನಿಮಾಗಳನ್ನು ಮತ್ತೆ ಪ್ರೇಕ್ಷಕರ ಎದುರು ತರುವುದು ಒಂದು ಹೊಸ ಟ್ರೆಂಡ್ ಆಗಿದೆ. ಅಂತಹುದೇ ಇದೀಗ ರಾಕಿ ಬಾಯ್ ಯಶ್ ನಟಿಸಿರುವ ಒಂದು ಸಿನಿಮಾ ಥಿಯೇಟರ್ ಗಳಲ್ಲಿ ಪ್ರಸಾರವಾಗಲು ವೇದಿಕೆ ಸಜ್ಜಾಗುತ್ತಿದೆ.
ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗದ ಖ್ಯಾತರಾದ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಇದೇ ಭಾನುವಾರ ಯಶ್ 36 ಪೂರೈಸಿ 37 ಕ್ಕೆ ಕಾಲಿಡಲಿದ್ದಾರೆ. ಆ ದಿನದಂದು ವಿಶೇಷವಾಗಿ ಶುಭಕೋರಲು ಅಭಿಮಾನಿಗಳು ಕಾತುರದಲ್ಲಿದ್ದಾರೆ. ಇನ್ನೊಂದು ಕಡೆ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿರುವ Mr & Mrs ರಾಮಾಚಾರಿ ಸಿನಿಮಾ ಮರು ಬಿಡುಗಡೆಗೆ ಸಿದ್ಧತೆ ನಡೆದಿದೆ. ಅದರ ನಡುವೆಯೇ ಯಶ್ ರ 19ನೇ ಸಿನಿಮಾ ಬಗ್ಗೆ ಸುಳಿವು ಸಿಗಲಿದೆ ಎನ್ನಲಾಗಿದೆ.

Mr & Mrs ರಾಮಾಚಾರಿ ಸಿನಿಮಾ ಅನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇದು ಬಿಡುಗಡೆಯಾದ ವೇಳೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಆ ಸಂದರ್ಭದಲ್ಲಿ 50 ಕೋಟಿ ಅಷ್ಟು ಕಲೆಕ್ಷನ್ ಸಹ ಮಾಡಿ, ಬಾಕ್ಸಾಪೀಸ್ ನಲ್ಲಿ ಹಿಟ್ ಸಿನಿಮಾ ಅನ್ನಿಸಿಕೊಂಡಿತು. ಇದೀಗ ಯಶ್ ಹುಟ್ಟಿದ ದಿನಕ್ಕೆ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಇದು ಒಂದು ದಿನವಷ್ಟೇ ಪ್ರದರ್ಶನ ಆಗಲಿದ್ದು, ಮುಂದೆ ಪ್ರೇಕ್ಷಕರ ರೆಸ್ಪಾನ್ಸ್ ನೋಡ್ಕೊಂಡು ಪ್ಲಾನ್ ಮಾಡಲಾಗುತ್ತದೆ ಎಂದು ನಿರ್ದೇಶಕ ಜಯಣ್ಣ ಹೇಳಿದ್ದಾರೆ.
ರೋಮ್ಯಾಂಟಿಕ್, ಫ್ಯಾಮಿಲಿ ಡ್ರಾಮಾ ಹಿನ್ನಲೆಯ ಕಥೆ ಆದ್ದರಿಂದ ಎಲ್ಲರೂ ಇದನ್ನು ನೋಡ್ತಾರೆ ಎಂಬ ಅನಿಸಿಕೆ ಇದೆ. ಅಲ್ಲದೇ, ಇದಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಮಾಡಿದ್ದಾರೆ. ಇನ್ನೂ ಯಶ್ ಸಹ ಜವಾಬ್ದಾರಿ ವಹಿಸಿಕೊಂಡು ಕಥೆಯನ್ನು ತಿದ್ದಿ ತೀಡಿದ್ದರು. ತಮ್ಮದೇ ರಿಯಲ್ ಲವ್‌ಸ್ಟೋರಿಯನ್ನು ತೆರೆಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು. ಇದೀಗ ಮರು ಬಿಡುಗಡೆಗೆ ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಸ್ಕ್ರೀನ್ ಗಳು ಬುಕ್ ಆಗಿದ್ದು, ಶನಿವಾರದೊಳಗೆ ಅಂತಿಮ ಆಗಲಿದೆ ಎನ್ನಲಾಗಿದೆ.

ಇನ್ನು ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 8 ತಿಂಗಳು ಕಳೆಯಿತು. ಆದರೆ, ಅದಾದ ಮೇಲೆ ಇದುವರೆಗೂ ಒಂದು ಸಹ ಹೊಸ ಸಿನಿಮಾ ಅನ್ನು ಘೋಷಣೆ ಮಾಡಿಲ್ಲ. ಯಶ್ ಹಿಂದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಅಂತ ಗಾಸಿಪ್ ಹಬ್ಬಿತ್ತು. ಅದು ನಿಜವಾಗಲಿಲ್ಲ. ಇನ್ನೊಂದಿಷ್ಟು ಅಂತೆ – ಕಂತೆಗಳಲ್ಲಿ ನಡೆದು ಹೋಗ್ತಾ ಇದೆ. ಆದರೆ, ಯಶ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಒಂದು ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗಿದ್ದು, ಯಶ್ 19 ಸಿನಿಮಾ ಬಗ್ಗೆ ಮಾತನಾಡುವರು ಎನ್ನಲಾಗ್ತಿದೆ.




