Corrupt 13 officials Suspended ; ಕೋಟಿ ಕೋಟಿ ನೀರಿನ ಬಿಲ್ ನುಂಗಿದ್ದ ಭ್ರಷ್ಟರು : ಜಲಮಂಡಳಿ 13 ಅಧಿಕಾರಿಗಳು ಅಮಾನತು

ಬೆಂಗಳೂರು; ಜ.04: ಸಾರ್ವಜನಿಕರ ವಾಟರ್ ಬಿಲ್ ಹಣ ದುರುಪಯೋಗ ಮಾಡಿದ್ದ ಜಲಮಂಡಳಿ 13 ಮಂದಿ ಭ್ರಷ್ಟ  ಅಧಿಕಾರಿಗಳು ಅಮಾನತು ಮಾಡಿ ಜಲಮಂಡಳಿ ಅಧ್ಯಕ್ಷ ಜಯರಾಮ್ ಆದೇಶಿಸಿದ್ದಾರೆ.

2016ರಿಂದ ಗ್ರಾಹಕರು ನೀಡುವ ವಾಟರ್ ಬಿಲ್ ಬೆಂಗಳೂರು ಜಲಮಂಡಳಿಗೆ ನೀಡದೆ ಲೂಟಿ ಮಾಡಿದ್ದಾರೆ. ಗ್ರಾಹಕರು ಪಾವತಿಸಿದ್ದ ಸುಮಾರು 5 ಕೋಟಿ ರೂ.ಗೂ ಹೆಚ್ಚು ಹಣವನ್ನ ಜಲ ಮಂಡಳಿಗೆ ಪಾವತಿಸದೆ ದುರ್ಬಳಕೆ ಮಾಡಿಕೊಂಡಿದ್ದರು. ಹಣ ದುರುಪಯೋಗ ಮಾಡಿದ ಭ್ರಷ್ಟರ ವಿರುದ್ದ ಜಲಮಂಡಳಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. 2016ರಿಂದ ನಿರಂತವಾಗಿ ನಡೆಯುತ್ತಿದ್ದ ನೀರಿನ ಬಿಲ್ ಕಳ್ಳಾಟ ಅಧಿಕಾರಿಗಳ ಸಹಕಾರದೊಂದಿಗೆ ಬಿಲ್‌ ಕಲೆಕ್ಟರ್ ಸೇರಿ ಇತರಿಂದ ಹಣ ದುರ್ಬಳಕೆ ಆರೋಪ ಕೇಳಿ ಬಂದಿತ್ತು.

ಆಡಿಟ್ ನಲ್ಲಿ ಪತ್ತೆಯಾಗದಂತೆ ಹಣ ಗುಳುಂ ಮಾಡ್ತಿದ್ದ ಭ್ರಷ್ಟ ಅಧಿಕಾರಿಗಳು. ಗ್ರಾಹಕರಿಂದ ನೇರವಾಗಿ ಹಣ ಪಡೆದು ಮಂಡಳಿ ಪಾವತಿಸದೇ ವಂಚನೆ ಮಾಡಲಾಗಿತ್ತು. ಜಲಮಂಡಳಿಯ 45  ಉಪವಿಭಾಗಗಳಲ್ಲಿ ಹಣ ದುರ್ಬಳಕೆ ಆಗಿತ್ತು. ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಹಣ ದುರ್ಬಳಕೆ ಪತ್ತೆಯಾಗಿದೆ. ಈ ಸಂಬಂಧ ಅಕ್ರಮ ಭೇದಿಸಲು  3 ವಿಶೇಷ ತಂಡಗಳನ್ನು ಮಂಡಳಿ ಅಧ್ಯಕ್ಷ ಜಯರಾಮ್ ರಚನೆ ಮಾಡಿದ್ದರು. ಆಂತರಿಕ ತನಿಖೆಯಲ್ಲಿ ಅಕ್ರಮ ಪತ್ತೆಯಾದ ಬೆನ್ನಲ್ಲೇ 13 ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಿದ್ದಾರೆ. ಇಂಜಿನಿಯರ್, ಕಂದಾಯ ವ್ಯವಸ್ಥಾಪಕರು, ಸಹಾಯಕರ ಕಲ್ಯಾಣ ಅಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳ ಅಮಾನತು ಮಾಡಿದ್ದಾರೆ.

ಕೋಟಿ ಕೋಟಿ ನೀರಿನ ಬಿಲ್ ನುಂಗಿದ್ದ ಭ್ರಷ್ಟರು ಪಟ್ಟಿ

ಭರತ್ ಕುಮಾರ್, ಸಹಾಯಕ

ಶ್ರೀನಿವಾಸ್, ಕಾರ್ಯ ನಿರ್ವಾಹಕ ಅಭಿಯಂತರ

ವಿಶ್ವನಾಥ್ ಕೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ

ಸಿ. ಸೋಮಶೇಖರ್, ಹಿರಿಯ ಸಹಾಯಕ

ನಾಗೇಂದ್ರ, ಕಾರ್ಯ ನಿರ್ವಾಹಕ ಅಭಿಯಂತರ

ನಾಗರಾಜ್, ಕಂದಾಯ ವ್ಯವಸ್ಥಾಪಕ

ಸಚಿನ್ ಪಾಟೀಲ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ

ರಾಮಪ್ಪ ಮಡಿವಾಳದ, ಸಹಾಯಕ

ಸ್ನೇಹಾ. ವಿ, ಕಾರ್ಯ ನಿರ್ವಾಹಕ ಅಭಿಯಂತರ

ಭೀಮಶಂಕರ್, ಕಂದಾಯ ವ್ಯವಸ್ಥಾಪಕ

ಗೀತಾ.ಎಂ, ಹಿರಿಯ ಸಹಾಯಕಿ

ಎನ್. ರುದ್ರೇಶ್, ಕಂದಾಯ ವ್ಯವಸ್ಥಾಪಕ

ಯೋಗೇಶ್.ಎಸ್, ಸಹಾಯಕ ಕಲ್ಯಾಣ ಅಧಿಕಾರಿ

More News