Car Accident : 250 ಅಡಿ ಪ್ರಪಾತಕ್ಕೆ ಬಿದ್ದ ಟೆಸ್ಲಾ ಕಾರು : ಬದುಕುಳಿದ ಕಾರಿನಲ್ಲಿದ್ದ ನಾಲ್ವರು

ಕ್ಯಾಲಿಫೋರ್ನಿಯಾ ; ಜ.04: ಫೆಸಿಪಿಕ್ ಸಾಗರದ ಕರಾವಳಿ ಸಮೀದ ಉತ್ತರ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಟೆಸ್ಲಾ ಕಾರು 250 ಅಡಿಗಳ ಕಂದಕ್ಕೆ ಉರುಳಿ ಬಿದ್ದದೆ. ಅದೃಷ್ಟವಶಾತ್ ಕಾರಿನಲ್ಲಿದ್ದ 4 ವರ್ಷದ ಬಾಲಕಿ, 9 ವರ್ಷದ ಬಾಲಕ ಮತ್ತು ಇಬ್ಬರು ವಯಸ್ಕರು ಬದುಕುಳಿದಿದ್ದಾರೆ.

ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಟೆಸ್ಲಾ ಕಂಪೆನಿಯ ಕಾರು ಬರೋಬ್ಬರಿ 250 ಅಡಿ ಎತ್ತರದ ರಸ್ತೆಯಿಂದ ಬಂಡೆಗಳಿರುವ ಪ್ರಪಾತಕ್ಕೆ ಬಿದ್ದಿದೆ. ಆದರೂ ಕಾರಿನಲ್ಲಿದ್ದ ನಾಲ್ವರ ಜೀವಕ್ಕೆ ಅಪಾಯವಿಲ್ಲದೇ ಬದುಕುಳಿದಿದ್ದಾರೆ.   ಕ್ಯಾಲಿಫೊರ್ನಿಯ ಸಮೀಪದ ಸಮುದ್ರ ತೀರದಲ್ಲಿರುವ ಡೆವಿಲ್ ಸ್ಲೈಡ್ ಎಂಬ ಕಡಿದಾದ ಬೆಟ್ಟ-ಗುಡ್ಡದ ಪ್ರದೇಶದಲ್ಲಿ ಕುಟುಂಬಸ್ಥರು ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು 250 ಅಡಿ ಪ್ರಪಾತಕ್ಕೆ ಬಿದ್ದಿದೆ.

ಇದರಿಂದ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಇಬ್ಬರು ವಯಸ್ಕರರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸುದ್ದಿ ತಿಳಿದು ಪರಿಹಾರ ಕಾರ್ಯಾಚರಣೆ ತಂಡ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಏರ್ ಲಿಫ್ಟ್‌ ಮಾಡಿದ್ದಾರೆ. 

ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಜೀವಕ್ಕೆ ಅಪಾಯವಿಲ್ಲವೆಂದು ವೈದ್ಯರು ತಿಳಿಸಿರುವುದಾಗಿ ಫಾಕ್ಸ್‌ ನ್ಯೂಸ್ ವರದಿ ಮಾಡಿದೆ. ಘಟನೆ ಸಂದರ್ಭದಲ್ಲಿ ಕಾರು ಭಯಾನಕವಾಗಿ ಹಾನಿಯಾಗಿದೆ. ಆದರೂ ಪವಾಡಸದೃಶ್ಯವಾಗಿ ಕಾರಿನಲ್ಲಿದ್ದವರು ಬದಕುಳಿದ್ದಿದ್ದಾರೆ.

https://twitter.com/DriveTeslaca/status/1610080891442958336?s=20&t=-ecCLolbv5caqEjbeBmvKw

ಇನ್ನು ಚಾಲಕ ಕುಟುಂಬಸ್ಥರನ್ನ ಕೊಲ್ಲುವ ಉದ್ದೇಶದಿಂದಲೇ ಈ ರೀತಿ ಅಪಘಾತ ಮಾಡಿದ್ದಾನೆ ಎಂದು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

More News