ಬೆಂಗಳೂರು; ಜ.05: ಪವಿತ್ರ ಜೊತೆಗೆ ನರೇಶ್ ಅವರನ್ನು ಆ ರೀತಿ ನೋಡಿ ನನಗೇನು ಅಚ್ಚರಿ ಅನ್ನಿಸಲಿಲ್ಲ.. ನರೇಶ್ ಅವರನ್ನು ನಮ್ಮ ಮನೆಯ ಮುಸುರೆ ತೊಳೆಯುವವಳ ಜೊತೆ ನೋಡಿದಾಗ ಮೊದಲು ಶಾಕ್ ಆಗಿತ್ತು. ಆಮೇಲೆ ದಿನಾ ಇದೇ ಕಥೆ. ನಂಗೇನು ಅಚ್ಚರಿ ಅನಿಸಲಿಲ್ಲ ಎಂದು ಪತ್ನಿ ರಮ್ಯಾ ರಘುಪತಿ ಹೇಳಿದ್ದಾರೆ.

ನರೇಶ್ ಹಾಗೂ ಪವಿತ್ರ ಲೋಕೇಶ್ ಅವರ ಲಿಪ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿತು.. ಪತ್ನಿ ಇರುವಾಗಲೇ ನರೇಶ್ ಅದ್ಹೇಗೆ ಮತ್ತೊಂದು ಹೆಂಗಸಿನೊಂದಿಗೆ ವಿವಾಹ ಆಗುತ್ತಾರೆ ಎಂದು ಪ್ರಶ್ನೆ ಕೇಳಲಾಯಿತು. ಇಷ್ಟೆಲ್ಲಾ ನಡೆದರೂ ಸುಮ್ಮನಿದ್ದ ಪತ್ನಿ ರಮ್ಯಾ ಮೊದಲ ಬಾರಿಗೆ ಆ ವೀಡಿಯೋ ಕುರಿತು ಮಾತನಾಡಿದ್ದಾರೆ.

ಖಾಸಗಿ ಚಾನಲ್ ವೊಂದಕ್ಕೆ ಮಾತನಾಡಿದ ನರೇಶ್ ಪತ್ನಿ ರಮ್ಯಾ, ನರೇಶ್ ಅವರ ವೀಡಿಯೋ ನೋಡಿ ನನಗೇನು ಅಚ್ಚರಿ ಆಗಲಿಲ್ಲ.. ನರೇಶ್ ಅವರನ್ನು ನಮ್ಮ ಮನೆಯ ಮುಸುರೆ ತೊಳೆಯುವವಳ ಜೊತೆ ನೋಡಿದಾಗ ಮೊದಲು ಶಾಕ್ ಆಗಿತ್ತು. ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಎಲ್ಲಾ ಕೇಳಿದ್ದಾಗ ಶಾಕ್ ಆಗಿತ್ತು. ದಿನ ಇದೇ ಕಥೆನೇ, ಇವತ್ತು ವಿಡಿಯೋ ನೋಡಿದ್ದೇವೆ ಅಷ್ಟೆ. ನಾನು ಇದನ್ನೆಲ್ಲಾ ಬಹಳ ನೋಡಿದ್ದೇನೆ. ಹಾಗಾಗಿ ಅಚ್ಚರಿ ಅನ್ನಿಸಲಿಲ್ಲ
ಇದಿಷ್ಟೇ ಅಲ್ಲ, ಇಬ್ಬರೂ ಕೃಷ್ಣ ಅವರ ಪಾರ್ಥೀವ ಶರೀರದ ಪಕ್ಕದಲ್ಲೇ ರೊಮ್ಯಾನ್ಸ್ ಮಾಡುತ್ತಿದ್ದರು. ಅಂದು ಸಂಜೆ ಮನೆಯಲ್ಲಿ ಪಾರ್ಥೀವ ಶರೀರವನ್ನು ಅನಾಥವಾಗಿ ಬಿಟ್ಟು ಪವಿತ್ರಾ ಜೊತೆ ನರೇಶ್ ಗೆಸ್ಟ್‌ಹೌಸ್‌ಗೆ ಹೋಗಿದ್ದರು’ ಎಂದು ರಮ್ಯಾ ರಘುಪತಿ ದೂರಿದರು.

ಇಷ್ಟೆಲ್ಲಾ ಘಟನೆ ನಡೆದರೂ ಯಾಕೆ ರಮ್ಯಾ ಮೌನವಾಗಿದ್ದರು ಎಂಬ ಪ್ರಶ್ನೆಗೆ ಮಾತನಾಡಿದ ರಮ್ಯಾ ಅವರು, ತನ್ನ ಪತಿಯನ್ನು ಯಾವ ಮಹಿಳೆಯೂ ಹೀಗೆ ಮತ್ತೊಬ್ಬಳ ಜೊತೆ ನೋಡಲು ಆಗಲ್ಲ. ನನ್ನ ಮೇಲೆ ಇಷ್ಟೆಲ್ಲಾ ಕೇಸ್ ಹಾಕಿದ್ದಾರೆ. ಅದಕ್ಕೆ ಈ ಮೂಲಕ ಅವರೇ ಸಾಕ್ಷಿ ಕೊಟ್ಟಂತಾಗಿದೆ ಎಂದುಕೊಂಡಿದ್ದೇನೆ. ಇದು ಸಿನಿಮಾ ಪ್ರಮೋಷನ್ ಅಲ್ಲದೇ ಇದ್ದರೆ, ನೀವು ನನಗೆ ಸಾಕ್ಷಾಧಾರ ಕೊಟ್ಟಿದ್ದೀರಾ. ನರೇಶ್ ಫೂಲ್ ಅಲ್ಲ. ಅಥವಾ ಅವರು ನನ್ನನ್ನು ಈ ವಿಡಿಯೋ ಮೂಲಕ ಫೂಲ್ ಮಾಡುತ್ತೀದ್ದಾರಾ? ಗೊತ್ತಿಲ್ಲ. ಹಾಗಾಗಿ ನಾನು ಈ ಬಗ್ಗೆ ಏನನ್ನ ಪ್ರತಿಕ್ರಿಯೆ ನೀಡಲಿ? ತೆರೆಮರೆಯಲ್ಲಿ ನಮ್ಮಿಬ್ರ ಮಧ್ಯೆ ಸೆಟ್ಲ್‌ಮೆಂಟ್ ಆಗಿದೆ. ಸಾಕಷ್ಟು ಹಣ ಸಿಕ್ಕಿದೆ. ಇಬ್ಬರು ಒಪ್ಪಿ ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಅಂತೆಲ್ಲಾ ಸುದ್ದಿ ಆಗುತ್ತಿದೆ. ಆದರೆ ಫ್ಯಾಮಿಲಿ ಕೋರ್ಟ್ ನಲ್ಲಿ ನಾನು ಕೌಂಟರ್ ಪಿಟಿಷನ್ ಕೊಟ್ಟಿದ್ದೇನೆ ಎಂದು ತಿಳಿಸಿದರು.
“ಡಿವೋರ್ಸ್ ವಿಚಾರ ಇನ್ನು ದೂರದ ಮಾತು”
ಮುಂದುವರೆದು ಮಾತನಾಡಿದ ಅವರು, ನರೇಶ್ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾನು ಅದನ್ನು ಪ್ರಶ್ನಿಸಿ ಪ್ರತಿದೂರು ದಾಖಲಿಸಿದ್ದೀನಿ. ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಅದನ್ನು ಪರಿಶೀಲನೆ ಮಾಡಬಹುದು. ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಪ್ಲೇ ಮಾಡಿದ್ದಾರೆ. ಅವರ ಪಿಟಿಷನ್‌ಗೆ ನಾನು ಕೌಂಟರ್ ಪೆಟಿಷನ್ ತೆಗೆದುಕೊಂಡಿದ್ದೇನೆ. ರಿಜೆಕ್ಷನ್ ಪೆಟಿಷನ್ ಹಾಕಿದ್ದೀನಿ. ಅದರಲ್ಲಿ ಒಂದಷ್ಟು ಸುಳ್ಳುಗಳನ್ನು ಹೇಳಿದ್ರಮ್ಯಾ ವೈವಾಹಿಕ ಹಕ್ಕುಗಳ ರಕ್ಷಣೆ ಅಡಿಯಲ್ಲೂ ಕೇಸ್ ದಾಖಲಾಗಿದೆ. ಡಿವೋರ್ಸ್ ವಿಚಾರ ಇನ್ನು ದೂರದ ಮಾತು ಎಂದರು.




