ಚೆನ್ನೈ : ಜ.06: ತಮಿಳು ನಟ ವಿಜಯ್ ದಾಂಪತ್ಯ ದಲ್ಲಿ ಬಿರುಕು ಮೂಡಿತಾ..? 22 ವರ್ಷಗಳ ಸಂಬಂಧವನ್ನು ಮುರಿದುಕೊಳ್ತಾರಾ ವಿಜಯ್ ಎಂಬ ಸುದ್ದಿ ಸದ್ದು ಮಾಡಿದೆ. ವಾರೀಸು ಸಿನಿಮಾ ರಿಲೀಸ್ ವೇಳೆಯೇ ಅಭಿಮಾನಿಗಳಿಗೆ ಶಾಕ್ ಎದುರಾಗಿದ್ದು, ಪತ್ನಿ ಸಂಗೀತಾ ರಿಂದ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎಂಬ ಚರ್ಚೆ ಸಿನಿ ದುನಿಯಾದಲ್ಲಿ ಎದ್ದಿದೆ.

ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ 1999 ರಲ್ಲಿ ವಿಜಯ್ ಸಂಗೀತ ವಿವಾಹ ವಾಗುತ್ತಾರೆ. ಪ್ರೀತಿಸಿ ವಿವಾಹ ವಾದ ಈ ಜೋಡಿಗೆ 2 ಮಕ್ಕಳಿದ್ದಾರೆ. ಆದರೆ ವಿಕಿಪೀಡಿಯಾ ಪೇಜ್‌ನಲ್ಲಿ ‘ವಿಜಯ್ ಹಾಗೂ ಸಂಗೀತಾ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲಿದ್ದಾರೆ ಎಂದು ಪ್ರಕಟವಾಗಿದೆ ಎಂದು ಕೆಲ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ.

ಅಷ್ಟಕ್ಕೂ ಈ ಸುದ್ದಿಸದ್ದು ಮಾಡಲು ಕಾರಣ ವಾರಿಸು’. ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅಂತೆ ಕಂತೆ ಸದ್ದು ಮಾಡ್ತಿದೆ.
ಆದರೆ ರಾಷ್ಟ್ರೀಯ ಮಾದ್ಯಮಕ್ಕೆ ಮಾಹಿತಿ ನೀಡಿದ ಕುಟುಂಬದವರು, ಈ ಸುದ್ದಿ ಸಂಪೂರ್ಣ ಸುಳ್ಳು.. ಹೇಗೆ ಈ ರೀತಿಯ ಸುದ್ದಿ ಹಬ್ಬುತ್ತೆ ಎಂದು ಅಂದಾಜಿಸಲೇ ಆಗುವುದಿಲ್ಲ ಎಂದಿದ್ದಾರೆ. ಸಂಗೀತ ಮಕ್ಕಳ ಜೊತೆಗೆ ಯುಎಸ್‌ನಲ್ಲಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಸದ್ಯದಲ್ಲೇ ವಿಜಯ್ ಕೂಡ ಯುಎಸ್‌ಗೆ ತೆರಳಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.




