ಬೆಂಗಳೂರು: ಜ.07: ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಅನ್ನೋ ಹೆಸರು ಸಾಕಷ್ಟು ಚರ್ಚೆ, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬೆಂಗಳೂರಿನ ವಿಕಾಸಸೌಧದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ಸ್ಯಾಂಟ್ರೋ ರವಿ ವೃತ್ತಿ ಏನು,ಯಾರು ನನಗಂತೂ ಗೊತ್ತಿಲ್ಲ ಅವನ ಮುಖವನ್ನ ನಾನು ನೋಡಿಲ್ಲ. ಬಾಂಬೆಗೆ ಹೋದವರ ಸಾಲಿನಲ್ಲಿ ನಾನಿಲ್ಲ ಕುರುಕ್ಷೇತ್ರ ಸಿನಿಮಾಗೆ ನಾನು ಓಡಾಡ್ತಿದ್ದೆ.
ಚೆನ್ನೈ ಬೇರೆ ಬೇರೆ ಕಡೆ ನಾನು ಓಡಾಡ್ತಿದ್ದೆ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳುವ ಮೂಲಕ ಮಿತ್ರಮಂಡಳಿ ಸ್ನೇಹಿತರಿಗೆ ಪರೋಕ್ಷವಾಗಿಯೋ ಟಾಂಗ್ ಕೊಟ್ಟಿದ್ದಾರೆ. ಇನ್ನು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರೋ ಸಚಿವ ಮುನಿರತ್ನ ಅವ್ರು, ಖಾಲಿ ಬುಟ್ಟಿ ಇಡ್ಕೊಂಡು ಹಾವಿದೆ ಹಾವಿದೆ ಅಂತಾರೆ ಕುಮಾರಸ್ವಾಮಿ. ಅದೇನು ಹಾವು ಇಟ್ಕೊಂಡಿದ್ದಾರೆ ಬೇಗ ಬಿಟ್ಟು ಬಿಡಲಿ. ಅದೇನು ಶ್ಯಾಂಪಲ್ ಇಟ್ಟಿದ್ದಾರೆ ಬಿಡಲಿ. ಬಿಜೆಪಿ ನಮ್ಮನ್ನ ಗೌರವಿಸುತ್ತಿದೆ ನಾವು ನೆಮ್ಮದಿಯಾಗಿಯೇ ಇದ್ದೇವೆ ಅಂತಾ ಹೇಳಿದರು. ನಾವು ಚುನಾವಣೆಗೆ ಹೋಗ್ತಿದ್ದೇವೆ.

ಹಾವಿದೆ, ಸ್ಯಾಂಟ್ರೊ ಇದೆ ಅಂತ ಯಾಕೆ ಹೇಳ್ತೀರಾ. ಖಾಲಿ ಡಬ್ಬ ಇಟ್ಕೊಂಡು ಯಾಕೆ ಅಲ್ಲಾಡಿಸ್ತೀರಿ ಬಿಟ್ಬಿಡಿ ಅದನ್ನ ಹೊರಗೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಮುನಿರತ್ನ ಸವಾಲ್ ಹಾಕಿದ್ರು. ಕುಮಾರಸ್ವಾಮಿಗೆ ಯಾವಾಗ ಯಾರ ಮೇಲೆ ಲವ್ ಬರುತ್ತೋ ಗೊತ್ತಿಲ್ಲ. ಎಸ್.ಟಿ. ಸೋಮಶೇಖರ್ ಕಚೇರಿಗೆ ಹಲವರು ಹೋಗ್ತಾರೆ. ಹಲವು ಹೆಣ್ಣುಮಕ್ಕಳು ಹೋಗ್ತಾರೆ. ನಮ್ಮ ಕಚೇರಿಗೂ ಹಲವರು ಬರ್ತಾರೆ. ಶುಭಾಶಯ ಕೊರಲು ಬರ್ತಾರೆ ಹಾಗಂತ ತಪ್ಪು ತಿಳಿದುಕೊಳ್ಳೋಕೆ ಆಗುತ್ತಾ? ಸುಮ್ಮನೆ ಯಾಕೆ ಮಾತನಾಡ್ತೀರ ಬಿಡಲಿ ರೀ. ಸಿಎಂ ತನಿಖೆಗೆ ಆದೇಶ ಮಾಡಿದ್ದಾರೆ. ನಾನು ಕುಮಾರಸ್ವಾಮಿಗೆ ಕೇಳಿಕೊಳ್ತೇನೆ. ಹಾವನ್ನ ಮೊದಲು ಬಿಟ್ಟು ಬಿಡಲಿ ಸ್ಯಾಂಟ್ರೋ ರವಿಯದ್ದು ಏನಾದ್ರೂ ಬಿಡಲಿ ಸಚಿವರ ಅಶ್ಲೀಲವಾದುದನ್ನ ಬಿಡಲಿ. ನಾವೆಲ್ಲರೂ ರಾಜಕೀಯವನ್ನೇ ಬಿಟ್ಟು ಬಿಡ್ತೇವೆ. ನನಗೆ ಬಾಂಬೆಯದ್ದು ಸಂಬಂಧವಿಲ್ಲ ಅಂತಾ ಹೇಳಿದರು.




