Actor Balakrishna, Shruti Haasan : ಭಾರೀ ಅನಾಹುತದಿಂದ ಪಾರಾದ ನಟ ಬಾಲಕೃಷ್ಣ, ಶೃತಿ ಹಾಸನ್..!

ಹೈದ್ರಾಬಾದ್: ಜ.07: ಟಾಲಿವುಡ್‌ ನ ಮಾಸ್ ಆ್ಯಕ್ಟರ್ ಬಾಲಯ್ಯ ಮತ್ತು ನಟಿ ಶೃತಿ ಹಾಸನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಟ್ಟ ಮಂಜಿನ ಕಾರಣ ಅಚಾನಕ್ ಭೂ ಸ್ಪರ್ಷ ಮಾಡಿದ ಘಟನೆ ಇಂದು ನಡೆದಿದೆ. ವೀರ ಸಿಂಹರೆಡ್ಡಿ ತಂಡವು ಒಂಗೋಲ್ ನಿಂದ ಹೈದರಾಬಾದ್ ಕಡೆ ಹೊರಟ ಹೆಲಿಕಾಪ್ಟರ್ 15 ನಿಮಿಷದಲ್ಲಿ ವಾಪಸ್ ಬಂದು ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹೆಲಿಕಾಪ್ಟರ್‌ನ ಪೈಲಟ್‌ ಮಾಹಿತಿ, ಯಾವುದೇ ತಾಂತ್ರಿಕ ದೋಷವಿಲ್ಲ, ಹೈದರಾಬಾದ್‌ಗೆ ತೆರಳುವ ಮಾರ್ಗ ಪೂರ್ತಿ ಮಂಜಿನಿಂದ ಆವರಿಸಿದೆ. ಮುಂಜಾಗೃತ ಕ್ರಮವಾಗಿ ನಾವು ಹಿಂತಿರುಗಿದೆವು. ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿಗಾಗಿ ಕಾಯುತ್ತಿದ್ದೆವು. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಹೆಲಿಕಾಪ್ಟರ್‌ ತಾಂತ್ರಿಕ ದೋಷ ಹಿನ್ನೆಲೆ ಎಮರ್ಜನ್ಸಿ ಲ್ಯಾಂಡಿಂಗ್‌ ಆಗಿದೆ ಎನ್ನಲಾಗ್ತಿದೆ. ಅದು ಸುಳ್ಳು ಎಂದರು.

ಬಾಲಯ್ಯ, ಶೃತಿ ಹಾಸನ್ ಅಭಿನಯದ ಬಹು ನಿರೀಕ್ಷಿತ ‘ವೀರ ಸಿಂಹ ರೆಡ್ಡಿ’ ಚಿತ್ರದ ಮಾಸ್ ಟ್ರೇಲರ್ ನಿನ್ನೆ ರಿಲೀಸ್ ಆಗಿದ್ದು, ಜನವರಿ 12ಕ್ಕೆ ಸಿನಿಮಾ ತೆರೆಗೆ ಬರಲಿದೆ. ಭಿನ್ನ ಭಿನ್ನವಾದ ಸ್ಟಂಟ್, ಮಾಸ್ ಡೈಲಾಗ್ ಮೂಲಕ ವೇ ಅಭಿಮಾನಿಗಳನ್ನು ಸೆಳೆದ ಬಾಲಯ್ಯ ಅದೇ ಖಡಕ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ..

ನಟಸಿಂಹ ನಂದಮುರಿ ಬಾಲಕೃಷ್ಣ ಅಭಿನಯದ ಮಾಸ್ ಆಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಮಾಸ್ ಟ್ರೇಲರ್ ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳಿದ್ದಾರೆ. ಜನವರಿ 12ರಂದು ಬೆಳ್ಳಿ ತೆರೆಗೆ ಎಂಟ್ರಿ ಕೊಡ್ತಿರುವ ಮಾಸ್ ಆಕ್ಷನ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮಾಸ್ ಟ್ರೇಲರ್, ಬಾಲಯ್ಯ ನಯಾ ಅವತಾರ ಅಭಿಮಾನಿ ಬಳಗದ ಕ್ರೇಜ್ ಹೆಚ್ಚಿಸಿದ್ದು, ಟ್ರೇಲರ್ ಕಂಡು ಥ್ರಿಲ್ ಆಗಿದ್ದಾರೆ. ಇನ್ನು ಬಾಲಯ್ಯ ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದು, ಟ್ರೇಲರ್ ತುಣುಕು ಕಾತುರತೆಯನ್ನು ದುಪ್ಪಟ್ಟುಗೊಳಿಸಿದೆ.

ಸಿನಿಮಾದ ಇನ್ನೂ ವಿಶೇಷವಾದ ವಿಚಾರವೆಂದ್ರೆ, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್
ಸ್ಪೆಷಲ್ ರೋಲ್ ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಬಾಲಯ್ಯ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಖಡಕ್ ಪಾತ್ರದಲ್ಲಿ ಬಾಲಯ್ಯ ಎದುರು ಅಬ್ಬರಿಸಿದ್ದಾರೆ. ಟ್ರೇಲರ್ ನಲ್ಲಿ ವಿಜಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಚಿತ್ರದಲ್ಲಿ ಬಾಲಯ್ಯ ಜೋಡಿಯಾಗಿ ಶೃತಿ ಹಾಸನ್ ನಟಿಸಿದ್ದು, ವರಲಕ್ಷ್ಮೀ ಶರತ್ ಕುಮಾರ್, ರವಿಶಂಕರ್, ಮುರಳಿ ಶರ್ಮಾ ಚಿತ್ರದ ಮುಖ್ಯ ತಾರಾಗಣ ಸಿನಿಮಾಗಿದೆ.. ತಮನ್.ಎಸ್ ಮ್ಯೂಸಿಕ್, ಸಾಯಿ ಮಾಧವ್ ಸಂಭಾಷಣೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಸಿನಿಮಾಗಿನಿಂದ

More News