Siddu Nijakanasul; Event Cancelled : ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ರದ್ದು..!

ಬೆಂಗಳೂರು:ಜ.09 : ವಿವಾದಾತ್ಮಕ ʻಸಿದ್ದು ನಿಜಕನಸುಗಳುʼ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿನ 60ನೇ ಸಿಸಿಹೆಚ್​ ನ್ಯಾಯಾಲಯ ಸೋಮವಾರ ಮಧ್ಯಂತರವಾಗಿ ತಡೆ ನೀಡಿದೆ. ಕೆಪಿಸಿಸಿ ಮತ್ತು ಸಿದ್ದರಾಮಯ್ಯ ಈ ಪುಸ್ತಕ ಪ್ರಕಟಣೆ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಈ ಪುಸ್ತಕ ಇಂದು ಮಧ್ಯಾಹ್ನ ಲೋಕಾರ್ಪಣೆ ಆಗಬೇಕಾಗಿತ್ತು. ಕೋರ್ಟ್‌ ತೀರ್ಪಿನ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದು ಬಂದಿದೆ.

More News