Santro Ravi; Mysore police : ಸ್ಯಾಂಟ್ರೋ ರವಿ ಫ್ಲ್ಯಾಟ್ ಮೈಸೂರು ಪೊಲೀಸರು ಪರಿಶೀಲನೆ

ಬೆಂಗಳೂರು :ಜ.09: ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಈ ಹಿಂದೆ ವಾಸವಿದ್ದ ಫ್ಲ್ಯಾಟ್ ಗೆ ಮೈಸೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಶೇಷಾದ್ರಪುರಂ ಬಳಿಯಿರುವ ಫ್ಲ್ಯಾಟ್ ಗೆ ಮೈಸೂರಿನ ವಿಜಯನಗರ ಪೊಲೀಸರು ಎಂಟ್ರಿಕೊಟ್ಟು, ವಾಹಬ್ ಅಲ್ಟಿಮಾ ಅಪಾರ್ಟ್ಮೆಂಟ್ ನಲ್ಲಿದ್ದ ಮಹತ್ತರವಾದ ಮಾಹಿತಿಯನ್ನ ಕಲೆಹಾಕಿದ್ದಾರೆ.

ಇಂದು ಬೆಳಗ್ಗೆ ಅಪಾರ್ಟ್ಮೆಂಟ್ ಗೆ ತೆರಳಿ ಮಾಹಿತಿ ಕಲೆಹಾಕಿರುವ ಪೊಲೀಸರು, ಅಪಾರ್ಟ್ಮೆಂಟ್ ಮಾಲೀಕ ಹಾಗೂ ಫ್ಲ್ಯಾಟ್ ನಲ್ಲಿದ್ದ ಸಿಬ್ಬಂದಿಯಿಂದ ಹಲವು ಮಾಹಿತಿಗಳನ್ನ ಪಡೆದಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಫ್ಲ್ಯಾಟ್ ಖಾಲಿ ಮಾಡಿ ತೆರಳಿದ್ದ ಸ್ಯಾಂಟ್ರೋ ರವಿ, ಶೇಷಾದ್ರಿಪುರಂ ಫ್ಲ್ಯಾಟ್ ಖಾಲಿ ಬಳಿಕ ಬಸವನಗುಡಿಯಲ್ಲಿ ಮನೆಮಾಡಿಕೊಂಡಿದ್ದನಂತೆ. ಸ್ಯಾಂಟ್ರೋ ರವಿಗೆ ಸಂಬಂಧಿಸಿದಂತೆ ಒಟ್ಟು ಮೂರು ಕಡೆ ಮೈಸೂರು ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಬಸವನಗುಡಿ, ಟ್ರಿನಿಟಿ ಸರ್ಕಲ್ ನಲ್ಲಿ ಮತ್ತು ಶೇಷಾದ್ರಿಪುರಂನಲ್ಲಿದ್ದ ಫ್ಲ್ಯಾಟ್ ಕೂಡ ಪರಿಶೀಲನೆ ನಡೆಸಿದ ಪೊಲೀಸರು.

More News