ಪ್ರಭುಪಾದರ ಜಯಂತೋತ್ಸವ ಅಂಗವಾಗಿ ನಾಣ್ಯ ಹಾಗೂ ಪದಕೋಶ ಬಿಡುಗಡೆ : ಮುಖ್ಯಮಂತ್ರಿ

ಬೆಂಗಳೂರು:  ಕನ್ನಡದಲ್ಲಿ ಹೆಚ್ಚೆಚ್ಚು ಪದಕೋಶಗಳು ಬರಬೇಕು, ಜನಸಾಮಾನ್ಯರಿಗೆ ಅದು ಸುಲಭವಾಗಿ ಅರ್ಥವಾಗುವಂತಿರಬೇಕು. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ವಿಧಾನಸೌಧದಲ್ಲಿ ಇಂದು ಇಸ್ಕಾನ್ ಸಂಸ್ಥಾಪಕ ಆಚಾರ್ಯ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ 125 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಹೊರತಂದಿರುವ ನಾಣ್ಯವನ್ನು ಹಾಗೂ ಕಾನೂನು ಇಲಾಖೆ ಹೊರತಂದಿರುವ ಪದಕೋಶವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಾನೂನು ಇಲಾಖೆ ಉತ್ತಮವಾದ ಕೆಲಸ ಮಾಡಿದೆ, ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಕನ್ನಡದಲ್ಲಿ ಪದಕೋಶವನ್ನು ಹೊರತಂದಿದೆ. ಇದರಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಾನೂನು ನಮ್ಮ ಜನರಿಗೆ ಸುಲಭವಾಗಿ  ಅರ್ಥವಾಗುವ ಹಾಗೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.  

ಹಿಂದೆ ಸಿಎಂಯಾಗಿದ್ದ ಬಿ ಎಸ್  ಯಡಿಯೂರಪ್ಪ ಅವರ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಕೆಲಸ  ಆಗಿದೆ ಎಂದು ತಿಳಿಸಿದ ಅವರು, ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಬೇಕು, ಆಡಳಿತದಲ್ಲಿ ಕನ್ನಡ ಬಳಕೆಯಾಗಬೇಕು ಎಂದು ತಿಳಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಇಸ್ಕಾನ್ ದಕ್ಷಿಣ ಶಾಖಾಧ್ಯಕ್ಷ  ಶ್ರೀ ವರದಕೃಷ್ಣದಾಸ  ಉಪಸ್ಥಿತರಿದ್ದರು.

More News

You cannot copy content of this page