ಕುರುಕ್ಷೇತ್ರ :ಜ.09: ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಹರಿಯಾಣದ ಕುರುಕ್ಷೇತ್ರದಲ್ಲಿ ವಿವಿಧ ರೈತ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಕೆಯು ನಾಯಕ ರಾಕೇಶ್ ಟಿಕೈತ್ ಸೇರಿದಂತೆ ಹಲವು ರೈತ ಮುಖಂಡರ ನಿಯೋಗ ಈ ವೇಳೆ ರಾಹುಲ್ ಅವರೊಂದಿಗೆ ಸಂವಾದ ನಡೆಸಿತು.

ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರನ್ನು ರಾಕೇಶ್ ಟಿಕಾಯತ್ ಅವರು ಭೇಟಿಮಾಡಿ ಚರ್ಚಿಸಿದರು. ಈ ಹಿಂದೆ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಯಾತ್ರೆಯಲ್ಲಿ ಭಾಗವಹಿಸುವಂತೆ ರಾಕೇಶ್ ಟಿಕಾಯತ್ ಅವರಿಗೆ ಕಾಂಗ್ರೆಸ್ ಆಹ್ವಾನ ನೀಡಿತ್ತು. ಆದರೆ, ರಾಕೇಶ್ ಟಿಕಾಯತ್ ಯಾತ್ರೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ.




