ಬೆಂಗಳೂರು :ಜ.10: 2018ರಲ್ಲಿ ತೆರೆ ಕಂಡ ಬಿಗ್ ಬಜೆಟ್ ಮೂವಿ ಕೆಜಿಎಫ್, ಯಾರೂ ಊಹಿಸದ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಇದೇ ಹವಾ ಮತ್ತೇ ಕ್ರಿಯೇಟ್ ಮಾಡ್ಬೇಕೆಂಬ ಉದ್ದೇಶದಿಂದ ‘ಕೆಜಿಎಫ್ ಚಾಪ್ಟರ್ 2’ ತೆರೆ ಕಂಡು ಅಭಿಮಾನಿಗಳಿಂದ ಬಹುಪರಾಕ್ ಅನ್ನಿಕೊಂಡು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಕಂಡಿತ್ತು. ಅಷ್ಟೇ ಅಲ್ಲ, ದೇಶದಾದ್ಯಂತ ಕನ್ನಡ ಸಿನಿಮಾ ಇಂಡಸ್ಟ್ರೀ ಹೆಸರು ಬೇರೆಯದೇ ರೀತಿಯಲ್ಲಿ ಹೆಸರು ಮಾಡಿತು. ಹೀಗಾಗಿ ಕೆಜಿಎಫ್ ಸರಣಿ ಮುಂದುವರೆಸಲು ಚಿತ್ರ ತಂಡ ನಿರ್ಧರಿಸಿದೆ.

ಈ ಬಗ್ಗೆ ಖಾಸಗಿ ವಾಹಿನಿಗೆ ಸಂದರ್ಶನ ನೀಡುವ ವೇಳೆ ಮಾತನಾಡಿದ ವಿಜಯ್ ಕಿರಗಂದೂರು ಕೆಜಿಎಫ್ ಚಾಪ್ಟರ್ 2 ‘ಗೆ ಈ ಸರಣಿ ನಿಲ್ಲಲ್ಲ. ಐದನೇ ಚಾಪ್ಟರ್ ವರೆಗೂ ಈ ಸರಣಿ ಮುಂದುವರೆಯುತ್ತಲೇ ಇರುತ್ತೆ ಎಂದು ತಿಳಿಸಿದ್ದಾರೆ. ಕೆಜಿಎಫ್ 2’ ಕೊನೆಯಲ್ಲಿ ರಾಕಿ ಸಮುದ್ರದಲ್ಲಿ ಮುಳುಗುತ್ತಾನೆ. ಎಲ್ಲರೂ ಮೃತಪಟ್ಟಿದ್ದಾನೆ ಎಂದು ಊಹಿಸಿದ್ದಾರೆ. ಇದೇ ರೀತಿಯಲ್ಲಿ ಕ್ಲೈಮಾಕ್ಸ್ನಲ್ಲೇ ಪ್ರಶಾಂತ್ ನೀಲ್ ಕೆಜಿಎಫ್ 3 ಸುಳಿವು ನೀಡಿದ್ದರು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ವಿಜಯ್ ಕಿರಂಗದೂರ್ ಆತ ಭಾರತದಲ್ಲಿ ಮಾಡಿದ ಕೃತ್ಯಗಳ ಲೆಕ್ಕವಷ್ಟೇ ಸರ್ಕಾರಕ್ಕೆ ಸಿಕ್ಕಿರುತ್ತದೆ. ವಿದೇಶದಲ್ಲೂ ಆತ ಒಂದಷ್ಟು ಕೃತ್ಯಗಳನ್ನು ಮಾಡಿದ್ದ. ‘ಕೆಜಿಎಫ್ 3’ ಚಿತ್ರದಲ್ಲಿ ಈ ವಿಚಾರ ಹೈಲೈಟ್ ಆಗಲಿದೆ ಎಂದು ವಿಜಯ್ ಮಾಹಿತಿ ನೀಡಿದ್ದಾರೆ.

ಚಾಪ್ಟರ್ 3 ಗಾಗಿ ಸಿನಿ ದುನಿಯಾ ಎದುರು ನೋಡುತ್ತಿದೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸೇರಿದಂತೆ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ನಟ ಯಶ್ ಕೂಡ ಹೊಸ ಪ್ರಾಜೆಕ್ಟ್ ತಕೊಳ್ಳೋ ಉತ್ಸಾಹದಲ್ಲಿ ಇದ್ದಾರೆ. ಹೀಗಾಗಿ ಕೆಜಿಎಫ್ 3 ಸಿನಿಮಾ 2025 ಕ್ಕೆ ಸೆಟ್ಟೇರಿ, 2026 ಕ್ಕೆ ತೆರೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

5ನೇ ಪಾರ್ಟ್ ವರೆಗೂ ‘ಕೆಜಿಎಫ್’ ಸರಣಿಯನ್ನೇ ಮುಂದುವರೆಸಲು ಚಿತ್ರತಂಡ ಸಧ್ಯದ ವರೆಗೂ ನಿರ್ಧರಿಸಿದೆ. ಅಲ್ಲದೆ, 5ನೇ ಚಾಪ್ಟರ್‌ವರೆಗೂ ಯಶ್ ರಾಕಿ ಭಾಯ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಕೆಜಿಎಫ್ 5ನೇ ಸರಣಿ ಬಳಿಕ ರಾಕಿ ಭಾಯ್ ಪಾತ್ರವನ್ನು ಬೇರೆ ಹೀರೊ ಮಾಡುವ ಸಾಧ್ಯತೆ ಇದೆಯಂತೆ.. ಒಂದೊಂದು ಸರಣಿಯಲ್ಲಿ ನಟ ಬದಲಾಗುತ್ತಾ ಹೋಗುವ ರೀತಿ ಪ್ಲ್ಯಾನ್ ಮಾಡಲಾಗಿದೆಯಂತೆ.

ಈ ಬಗ್ಗೆ ಮಾತನಾಡಿದ ಕಿರಗುಂದೂರು, ಐದು ಸರಣಿಯನ್ನು ದಾಟಿ ಮುಂದಕ್ಕೆ ಹೋದರೇ ಆಗ ರಾಕಿ ಭಾಯ್ ಪಾತ್ರವನ್ನು ಯಶ್ ಬದಲು ಬೇರೆ ಹೀರೊ ಮಾಡಬಹುದು. ಆದರೆ, ‘ಕೆಜಿಎಫ್ 3’ ರಿಲೀಸ್ ಆಗೋದೇ ಮೂರು ವರ್ಷಗಳ ಬಳಿಕ. ಹೀಗಾಗಿ ‘ಕೆಜಿಎಫ್ 4’, ‘ಕೆಜಿಎಫ್ 5’ ರಿಲೀಸ್ ವೇಳೆಗೆ ಎಷ್ಟು ಸಮಯ ಹಿಡಿಯುತ್ತೋ ಹೀಗಾಗಿ ಹೀರೊ ಬದಲಾಗಬಹುದು ಎನ್ನಲಾಗಿದೆ.




