Minister Madhuswami : ಮೀಸಲಾತಿ ಉಪ ಸಮಿತಿ ಜೊತೆ 2 ಸಲ ಸಭೆಯಾಗಿದೆ ; ಸಚಿವ ಮಾಧುಸ್ವಾಮಿ

ಬೆಂಗಳೂರು : ಜ.10 : ಮೀಸಲಾತಿ ಉಪ ಸಮಿತಿ ಜೊತೆ ಎರಡು ಬಾರಿ ಸಭೆಯಾಗಿದೆ. ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಆಗಲ್ಲ. ಮೀಸಲಾತಿ ಕುರಿತು ಹೋರಾಟ ಮಾಡುವ ಅಗತ್ಯ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಆರಂಭದಲ್ಲಿ ಇರುವಾಗಲೇ ಹೋರಾಟಕ್ಕೆ ಇಳಿದರೆ ಹೇಗೆ? ಜನಸಂಖ್ಯೆ ಆಧಾರದ ಮೇಲೆ ಕೊಡಿ ಅಂತ ಕೇಳೋವ್ರೂ ಇದ್ದಾರೆ. ಕಾಲ ಕಾಲಕ್ಕೆ ಮಾಹಿತಿ ತರಿಸಿಕೊಳ್ತಾ ಇದ್ದೇವೆ. ನೋಡೋಣ. ಎಷ್ಟು ಸಭೆ ಆಗುತ್ತೆ ಅಂತ ಗೊತ್ತಗಲ್ಲ. ಎಲ್ಲರದ್ದೂ ಬೇಡಿಕೆ ಇದೆ. ನೋಡೋಣ ಕಾಲ ಕಾಲಕ್ಕೆ ಏನಾಗುತ್ತದೆ ಎಂದು ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.

More News