Nandu-Jashwant Love Break Up : ನಂದು – ಜಶ್ವಂತ್ ಲವ್ ಗೆ ಬ್ರೇಕ್ ಅಪ್ !!

ಬೆಂಗಳೂರು :ಜ.10: ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಿದ್ದ ನಂದು ಮತ್ತು ಜಶ್ವಂತ್ ಬೋಪಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎನ್ನಲಾಗ್ತಿದೆ.

ಇತ್ತೀಚೆಗೆ ಅಷ್ಟೇ ಕುಟುಂಬದ ಸಮೇತ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ನಂದು, ಜಶ್ವಂತ್ ಅನ್ನು ಕರೆದಿರಲಿಲ್ಲ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿ ರೂಪೇಶ್ ಶೆಟ್ಟಿ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟಿದ್ದರೆ, ಸೀಸನ್ 9 ಬಿಗ್ ಬಾಸ್ ವಿನ್ನರ್ ಆಗಿರುವ ರೂಪೇಶ್ ಭಾಗಿಯಾಗಿದ್ದರು. ಆದರೆ ಜಶ್ವಂತ್ ಬಂದಿರಲಿಲ್ಲ. ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಸಹ ನಂದುಗೆ ಶುಭಾಶಯಗಳು ಹೇಳಿರಲಿಲ್ಲ. ಇವೆಲ್ಲವೂ ಸಹ ಅವರಿಬ್ಬರ ನಡುವಿನ ಲವ್ ಸ್ಟೋರಿಗೆ ವಿದಾಯ ಹೇಳಿವೆ ಎಂಬ ಕುರುಹುಗಳನ್ನು ಸೂಚಿಸಿದಂತಿದ್ದವು.

ದೊಡ್ಮನೆ ಆಟ ಶುರುವಾಗುವ ಸಂದರ್ಭದಲ್ಲಿ ಒಟ್ಟೊಟ್ಟಿಗೆ ಓಟಿಟಿಗೆ ಬಂದಿದ್ದರು. ಆಮೇಲೆ ಬಿಗ್ ಬಾಸ್ ಮನೆಯಲ್ಲಿ ನಡೆದ ಕೋಪ, ಪ್ರೀತಿ, ಜಗಳಗಳಿಗೆ ಪ್ರೇಕ್ಷಕರು ಫಿದಾ ಆಗೋಗಿದ್ದರು. ಹೀಗಿರುವಾಗ ನಂದು ಮತ್ತು ಜಶ್ ಮಧ್ಯೆ ಬಿರುಕು ಮೂಡಿದ್ಯಾ? ಬಿಗ್‌ ಬಾಸ್‌ ಶೋ ಬಳಿಕ ಲವ್ ಬ್ರೇಕಪ್ ಆಗಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಇವರಿಬ್ಬರ ನಡುವೆ ಲವ್ ಆಗಿದೆ. ಅನೇಕ ದಿನಗಳಿಂದ ಇಬ್ಬರೂ ಡೇಟಿಂಗ್ ನಲ್ಲಿ ಇದ್ದರು. ಹಿಂದಿಯಲ್ಲಿ ಬರುವಂತಹ ಇನ್ನೊಂದು ರಿಯಾಲಿಟಿ ಶೋ ಆದ ರೋಡಿಸ್ ನಲ್ಲಿ ಭಾಗವಹಿಸಿದ್ದ ಜಶ್ವಂತ್ ವಿನ್ನರ್ ಸಹ ಆಗಿದ್ದರು. ಈ ಶೋನಲ್ಲಿಯೇ ಜಶ್ ಜೊತೆ ಪ್ರೇಮಾಂಕರವಾಗಿತ್ತು. ಬಳಿಕ ಒಟಿಟಿ ಬಿಗ್ ಬಾಸ್‌ಗೆ ನಂದು ಮತ್ತು ಜಶ್ವಂತ್ ಜೊತೆಯಾಗಿ ಕಾಲಿಟ್ಟಿದ್ದರು.

ಸಾನ್ಯ ಅಯ್ಯರ್ ಜೊತೆಗೆ ಪ್ರೆಂಡ್ಲಿಯಾಗಿದ್ದ ಕಾರಣದಿಂದಲೇ ಇವರಿಬ್ಬರ ನಡುವೆ ಬ್ರೇಕ್ ಆಗಲು ಕಾರಣವಾಗಿದೆ ಎನ್ನಲಾಗಿದ್ದು, ಆಮೇಲೆ ಎಲ್ಲವೂ ಸರಿಯಾಗಿತ್ತು. ಆದರೆ, ಬಿಗ್ ಬಾಸ್ ಶೋ ಮುಕ್ತಾಯವಾದ ಮೇಲೆ ಇವರಿಬ್ಬರ ನಡುವೆ ಬಿರುಕು ಬಿಟ್ಟಿದೆ ಎನ್ನಲಾಗಿದ್ದು, ಈ ಸುದ್ದಿಗೆ ಪುಷ್ಟಿ ನೀಡುವಂತಹ ಘಟನೆವೊಂದು ನಡೆದಿದೆ. ಇತ್ತ ದೊಡ್ಮನೆಯಲ್ಲಿ ಲವರ್ಸ್ ಆಗಿ ಕಾಣಿಸಿಕೊಂಡಿದ್ದ ರಾಕೇಶ್ ಹಾಗೂ ಅಮೂಲ್ಯ ಶೋ ಬಳಿಕವೂ ತಮ್ಮ ಸ್ನೇಹ ಮುಂದುವರೆಸಿದ್ದು, ಅವರಿಬ್ಬರ ಮೀಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

More News