GO BACK CAMPAIGN AGAINST NAMO: ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಆಗಮನ: ಕಾಂಗ್ರೆಸ್ ನಿಂದ ನಮೋ ವಿರುದ್ಧ ಗೋ ಬ್ಯಾಕ್ ಅಭಿಯಾನ

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಅವಳಿ ನಗರ ಹುಬ್ಬಳ್ಳಿ—ಧಾರವಾಡದಲ್ಲಿ ಸಕಲ ಸಿದ್ಧತೆಗಳು ಅಂತಿಮವಾಗಿದೆ. ಇನ್ನೇನು ಕೆಲವೇ ಗಂಟೆಯಲ್ಲಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೋ ಬ್ಯಾಕ್ ಪ್ರಧಾನಿ ಅಭಿಯಾನ ಆರಂಭಿಸಿದೆ. ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಗೋ ಬ್ಯಾಕ್ ಪ್ರಧಾನಿ ಅಭಿಯಾನ ಆರಂಭಿಸಲಾಗಿದೆ.

ಹುಬ್ಬಳ್ಳಿಯನ್ನು ಸ್ಮಾರ್ಟ್ ಸಿಟಿ ಮಾಡೋದಾಗಿ ಹೇಳಿ Ugly ಸಿಟಿ ಮಾಡಿದ ಮೋದಿಗೆ ಸ್ವಾಗತಿಸಬೇಕಾ? ಬಿಆರ್ ಟಿಎಸ್ ತಂದು ಸಾವಿರಾರು ಜನರ ಉದ್ಯೋಗ ಕಸಿದುಕೊಂಡು ನೂರಾರು ಅಮಾಯಕ ಜನರ ಬಲಿ ಪಡೆದ ಮೋದಿಗೆ ಸ್ವಾಗತಿಸಬೇಕಾ?
ಖಾದಿ ತ್ರಿವರ್ಣ ರಾಷ್ಟ್ರ ಧ್ವಜವನ್ನು ಮೂಲೆಗುಂಪು ಮಾಡಿ ಚೈನಾದ ಪಾಲಿಸ್ಟರ್ ಧ್ವಜ ತಂದ ಮೋದಿಗೆ ಸ್ವಾಗತಿಸಬೇಕಾ? ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಿದ ವ್ಯಾಪಾರಿ ಮೋದಿಗೆ ಸ್ವಾಗತಿಸಬೇಕಾ? ಹೀಗೆ ಹಲವು ವಿಷಯಗಳನ್ನು ಇಟ್ಕೋಂಡು ಗೋ ಬ್ಯಾಕ್ ಮೋದಿ ಅಭಿಯಾನವನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಆರಂಭಿಸಿದೆ.

ಇಂದಿನಿಂದ ಜನವರಿ 16 ರವರೆಗೆ ಯವ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ನಗರದ ರೈಲ್ವೆ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೂ ಮುನ್ನವೇ ಹುಬ್ಬಳ್ಳಿಯ ಸಾಮಾಜಿಕ ಜಾಲ ತಾಣಗಳಲ್ಲಿ ಗೋ ಬ್ಯಾಕ್ ಮೋದಿ ಅಭಿಯಾನ ಆರಂಭವಾಗಿದೆ.
ಮುಂಬರುವ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವನ್ನು ಮುಂದಿಟ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರದ ಹಗರಣಗಳನ್ನು ಮುಂದಿಟ್ಟು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದೆ.

#GOBACK MODI #PRIME MINISTER NARENDRA MODI #PMMODI #HUBBALI DHARAWAD #NATIONAL YOUTH CONFERENCE #BJP SCAMS #CONGRESS

More News