ಬೆಂಗಳೂರು :ಜ.12: ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಇಷ್ಟ, ಗೌರವ ಇತ್ತು. ಆದರೆ ಅದಕ್ಕೆ ಒಂದು ಹೆಸರು ಕೊಟ್ಟಿರ್ಲಿಲ್ಲ. ಆದರೆ ಹೋದ ಬಾರಿಯ ಲಾಕ್ ಡೌನ್ ನಲ್ಲಿ ಸಹಿಸಲಿಕ್ಕೆ ಆಗದೇ ಹರಿಪ್ರಿಯಾ ಗೆ ಹೇಳಿಯೇ ಬಿಟ್ಟೆ.. ಒಂದು ಚಾನ್ಸ್ ಕೊಡಿ ಎಂದು ನಟ ವಸಿಷ್ಠ ತಮ್ಮ ಪ್ರೇಮ ಕಹಾನಿಯ ಸ್ಟೋರಿ ಹೇಳಿದರು.
ಜನವರಿ 26ಕ್ಕೆ ಈ ಜೋಡಿ ಅಧಿಕೃತವಾಗಿ ದಂಪತಿಗಳಾಗಲಿದ್ದು, ಮೈಸೂರಲ್ಲಿ ಅದ್ದೂರಿಯಾಗಿ ಮದುವೆ ಆಗೋ ತಯಾರಿಯಲ್ಲಿ ದೆ. ಈ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ತಾರಾ ಜೋಡಿ ತಮ್ಮ ಪ್ರೇಮ ಕಹಾನಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು..

ಈ ಬಗ್ಗೆ ಮಾತನಾಡಿದ ನಟ ವಸಿಷ್ಠ ಸಿಂಹ, 2016 ರಲ್ಲಿ ಪ್ರೀಮಿಯರ್ ಶೋ ಗೆ ಹೋದಾಗ ಮೊದಲ ಬಾರಿಗೆ ಹರಿಪ್ರಿಯಾ ಭೇಟಿ ಮಾಡಿದೆ.. ಆಗಲೇ ಒಂಥರಾ ಪ್ರೀತಿ ಇತ್ತು.. ನಟಿ ಹರಿಪ್ರಿಯಾ ಅಂದ್ರೆ ನಂಗ್ಯಾಕೋ ಇಷ್ಟ.. ಏನ್ ಮುದ್ದಾಗಿದ್ದಾರಲ್ವಾ ಎಂದು ನನ್ನ ಕ್ಲೋಸ್ ಸರ್ಕಲ್ ಬಳಿ ಹೇಳಿಕೊಂಡಿದ್ದೆ. ಪ್ರೀಮಿಯರ್ ಶೋ ನಲ್ಲೇ ನಂಬರ್ ಬದಲಾವಣೆ ಆಗಿ ಆಗಾಗ ಮಾತನಾಡುತ್ತಿದ್ದೆವು.. ಆದಷ್ಟು ಸಿನಿಮಾ ಬಗ್ಗೆ ಯೇ ನಮ್ಮ ಮಾತುಕತೆ ಇರುತ್ತಿತ್ತು. ಲವ್ ನಲ್ಲಿ ಬೀಳೋದಕ್ಕೆ ಲಾಕ್ ಡೌನ್ ಸಹ ಒಂದು ರೀತಿಯಲ್ಲಿ ಕಾರಣ ಆಯ್ತು.. ಈ ಲಾಕ್ ಡೌನ್ ಸಮಯದಲ್ಲಿ ಮಾತಾಡೋಕೆ ಹೆಚ್ಚು ಟೈಂ ಸಿಕ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಸಿಕ್ತು.. ಅದೇ ಸಮಯದಲ್ಲಿ ನಾ ಒಂದಷ್ಟು ಮಾನಸಿಕವಾಗಿ ಕುಗ್ಗಿದ್ದೆ.. ಪರ್ಸನಲ್ ವಿಷಯವೊಂದಕ್ಕೆ.. ಅಂಥ ಸಮಯದಲ್ಲಿ ನನ್ನನ್ನ ಆ ಸಮಸ್ಯೆ ಯಿಂದ ಹೊರ ಕರೆದುಕೊಂಡು ಬಂದದ್ದೇ ಹರಿಪ್ರಿಯಾ.. ಹೀಗೆ ಒಟ್ಟಿಗೆ ಸಮಯ ಹೆಚ್ಚು ಕಳೆಯುತ್ತಿದ್ದೆವು.. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಇಷ್ಟ ಇತ್ತು. ಗೌರವ ಇತ್ತು. ಆದರೆ ಅದಕ್ಕೆ ಒಂದು ಹೆಸರು ಕೊಟ್ಟಿರ್ಲಿಲ್ಲ. ಆದರೆ ಹೋದ ಬಾರಿಯ ಲಾಕ್ ಡೌನ್ ನಲ್ಲಿ ಸಹಿಸಲಿಕ್ಕೆ ಆಗದೇ ಹರಿಪ್ರಿಯಾ ಗೆ ಹೇಳಿಯೇ ಬಿಟ್ಟೆ.. ಒಂದು ಚಾನ್ಸ್ ಕೊಡಿ.. ಆಗ್ತಿಲ್ಲ ನಂಗೆ ಕಷ್ಟ ಆಗ್ತಿದೆ ಹೇಳದೇ ಸುಮ್ಮನಿರಲು.. ನಿಮ್ಗೆ ಏನಾದ್ರು ಅನಿಸುತ್ತಿದ್ದರೆ ಹೇಳಿ ಬಿಡಿ.. ಒಂದು ಅವಕಾಶ ಕೊಟ್ಬಿಡಿ.. ಎಂದು ಹೇಳಿದೆ.. ಹರಿಪ್ರಿಯಾ ಒಪ್ಪಿಕೊಂಡರು ಎಂದ ನಟ ವಸಿಷ್ಠ ನಾಚುತ್ತಾ ಹೇಳಿದರು.

“ಶಕ್ತಿ ಮೀರಿ ಗುಟ್ಟನ್ನ ಕಾಪಾಡಿದ್ವಿ ಆದ್ರೆ ಆಗ್ಲಿಲ್ಲ.. ರನ್ ಔಟ್ ಆಗಿಬಿಟ್ಟೆವು”
ನಾವು ಒಟ್ಟಿಗೆ ಹೆಚ್ಚು ಓಡಾಟ ಮಾಡುತ್ತಿದ್ದನ್ನು ನೋಡಿ ನಮ್ಮ ಬಗ್ಗೆ ಒಂದಷ್ಟು ಸುದ್ದಿಗಳಾದವು. ಸಿನಿಮಾ ಸೆಟ್ ನಲ್ಲಿ ಲವ್ ಆಗಿದೆ ಇಬ್ಬರಿಗೂ ಎಂದೆಲ್ಲಾ ಚರ್ಚೆ ಆಯಿತು. ಸಿನಿಮಾ ಸೆಟ್ ನಲ್ಲಿ ಎಲ್ಲಾ ಪ್ರೀತಿ ಆಗಿಲ್ಲ. ಅದಕ್ಕೂ ಮೊದಲಿನಿಂದಲೂ ನಾವು ಪ್ರೀತಿಯಲ್ಲಿ ಇದ್ದೆವು. ಇಬ್ಬರು ಯಾರಿಗೂ ಗೊತ್ತಾಗದ ರೀತಿ ಮೈಂಟೇನ್ ಮಾಡ್ಬೇಕು ಎಂದಾಗ ಸಾಕಷ್ಟು ಎಡವಟ್ಟಾಯ್ತು. ಒಂದಷ್ಟು ಸೀನ್ ಗಳನ್ನು ಆ್ಯಕ್ಟ್ ಮಾಡ್ತಾ ನನ್ ಪ್ರೀತಿ ಜೊತೆಗೆ ಹೇಗೆ ನಾನು ಹಾಗೇ ಬಿಹೇವ್ ಮಾಡ್ಲಿ ಎಂದು ಕಷ್ಟ ಅನಿಸಿದ್ದು ಇದೆ. ಆದರೆ ನನ್ನ ಶಕ್ತಿ ಮೀರಿ ಗುಟ್ಟನ್ನ ಕಾಪಾಡಿದ್ವಿ ಆದ್ರೆ ಆಗ್ಲಿಲ್ಲ.. ರನ್ ಔಟ್ ಆಗಿಬಿಟ್ಟೆವು.. ಎಂದು ನಕ್ಕರು

ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ ನಟಿ ಹರಿಪ್ರಿಯಾ, ಅಪ್ಪ ತೀರ್ಕೊಂಡ ದಿನದ ಪೂಜೆ ನಡೆಯುತ್ತಿತ್ತು ಮನೆಯಲ್ಲಿ.. ಅವತ್ತೇ ವಸಿಷ್ಠ ನಂಗೆ ಪ್ರಪೋಸ್ ಮಾಡಿದ್ದು ತುಂಬಾ ಸ್ಪೆಷಲ್ ಅನಿಸಿತು. ಅವರು ನನ್ನನ್ನು ಬಿಟ್ಟು ಹೋದ ದಿನವೇ ವಾಪಸ್ ಇವರು ಪ್ರಪೋಸ್ ಮಾಡಿದ್ದು, ಅಪ್ಪನೇ ನಂಗೆ ಇವರನ್ನು ಕೊಟ್ಟರು ಅನಿಸಿತು. ನಾನು ಚಿಕ್ಕ ವಯಸ್ಸಿನಲ್ಲಿಯೇ ನನ್ನ ತಂದೆಯನ್ನು ಕಳೆದುಕೊಂಡೆ.. ನನ್ನ ತಂದೆಯ ಆ ಎಲ್ಲಾ ಗುಣ ನಾನು ನನ್ನ ಸಿಂಹನಲ್ಲಿ ಕಂಡೆ ಎಂದರು.




